ನವದೆಹಲಿ:ನಾನು ನನ್ನ ಫ್ಯಾಕ್ಟರಿಗೆ ಹೋಗಿ ನನ್ನ ಐಷಾರಾಮಿ ಪಾರ್ಷ್​ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಆ ಸಂದರ್ಭದಲ್ಲಿ ನನ್ನನ್ನು ಬೇಕೆಂದೇ ತಡೆದ ಪೊಲೀಸರು, ತೋರಿಸಿದ ಪಾಸ್​ ಅನ್ನು ಒಪ್ಪದೆ ಬಸ್ಕಿ ಹೊಡೆಸಿ ಅಪಹಾಸ್ಯ ಮಾಡಿದರು ಎಂದು ಇಂದೋರ್​ನ ಕೈಗಾರಿಕೋದ್ಯಮಿ ಸಂಸ್ಕಾರ್​ ದರ್ಯಾನಿ ಅಲವತ್ತುಕೊಂಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿರುವ ಅವರು, ನಾನು ಕೆಲಸದ ಮೇಲೆ ಫ್ಯಾಕ್ಟರಿಗೆ ಹೋಗಿದ್ದಾಗಿಯೂ, ಅನಗತ್ಯವಾಗಿ ತಿರುಗುತ್ತಿರಲಿಲ್ಲವೆಂದು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ ಎಂದು ಹೇಳಿದ್ದಾರೆ.
ಇಂದೋರ್​ನಲ್ಲಿ ಭಾನುವಾರ ಬೆಳಗ್ಗೆ ಐಷಾರಾಮಿ ಪಾರ್ಷ್​ ಕಾರಿನಲ್ಲಿ ಹೋಗುವಾಗ ಸಂಸ್ಕಾರ್​ ದರ್ಯಾನಿ ಅವರನ್ನು ಪೊಲೀಸರು ತಡೆದಿದ್ದರು. ಲಾಕ್​ಡೌನ್​ ಅವಧಿಯಲ್ಲಿ ಅನಗತ್ಯವಾಗಿ ತಿರುಗುತ್ತಿರುವುದಾಗಿಯೂ, ಮಾಸ್ಕ್​ ಧರಿಸಿರಲಿಲ್ಲ ಎಂದು ಆರೋಪಿಸಿದ್ದರು.ಈ ಹಿನ್ನೆಲೆಯಲ್ಲಿ ಸಂಸ್ಕಾರ್​ ಅವರನ್ನು ಕಾರಿನಿಂದ ಕೆಳಗಿಳಿಸಿದ್ದ ಪೊಲೀಸರು, ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದರು. ಸಿಬ್ಬಂದಿಯ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಇಂದೋರ್​ ಎಎಸ್​ಪಿ, ಕಾರು ಚಾಲಕ ಮಾಸ್ಕ್​ ಧರಿಸಿರಲಿಲ್ಲ. ಹಾಗಾಗಿ ನಮ್ಮ ಸಿಬ್ಬಂದಿ ಅವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಅಲ್ಲದೆ, ಅನಗತ್ಯವಾಗಿ ತಿರುಗುವವರನ್ನು ನಮ್ಮ ಸಿಬ್ಬಂದಿ ತಡೆದು ವಿಚಾರಿಸುತ್ತಿದ್ದಾರೆ ಎಂದು ಹೇಳಿದ್ದರು.
ಗುರುಗ್ರಾಮದ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳಿಗೆ ಜುಲೈವರೆಗೆ ಮನೆಯಿಂದಲೇ ಕೆಲಸ; ಕೋವಿಡ್​ 19 ಹಿನ್ನೆಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
