ನವದೆಹಲಿ:ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು 14 ನ್ಯೂಸ್​ ಆ್ಯಂಕರ್​ಗಳನ್ನು ಬ್ಯಾನ್​ ಮಾಡಿರುವ ಕ್ರಮವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ಖಂಡಿಸಿದ್ದಾರೆ. 26 ವಿಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟದಲ್ಲಿ ನಿತೀಶ್​​ ಕುಮಾರ್​ ಅವರ ಜನತಾ ದಳ (ಸಂಯುಕ್ತ) ಸಹ ಭಾಗವಾಗಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್​ ಕುಮಾರ್​, ಇಂಡಿಯಾ ಬ್ಲಾಕ್​ನಿಂದ ಟಿವಿ ನಿರೂಪಕರನ್ನು ಬ್ಯಾನ್​ ಮಾಡಿರುವ ಕುರಿತು ನನಗೆ ಯಾವುದೇ ಮಾಹಿತಿ ಇರಲಿಲ್ಲ. ನಾನು ಪತ್ರಕರ್ತರನ್ನು ಬೆಂಬಲಿಸುತ್ತೇನೆ. ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯ ಸಿಕ್ಕಿರುವಾಗ ಪತ್ರಕರ್ತರು ತಮಗೆ ಇಷ್ಟವಾದದ್ದನ್ನು ಬರೆಯುತ್ತಾರೆ. ಅವರನ್ನು ಯಾರಾದರೂ ನಿಯಂತ್ರಿಸುತ್ತಾರೆಯೇ? ನಾನು ಅದನ್ನು ಎಂದಾದರೂ ಮಾಡಿದ್ದೇನೆಯೇ? ಅವರಿಗೆ ಹಕ್ಕುಗಳಿವೆ. ಇಲ್ಲಿ ನಾನು ಯಾರ ವಿರುದ್ಧವೂ ಅಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಸ್ತುತ ಕೇಂದ್ರದಲ್ಲಿ ಆಡಳಿತದಲ್ಲಿ ಇರುವವರು ಒಂದಷ್ಟು ಜನರನ್ನು ಕಂಟ್ರೋಲ್ ಮಾಡಿದ್ದಾರೆ. ನಮ್ಮ ಜತೆಗಿರುವವರಿಗೆ (INDIA bloc party) ಏನೋ ಆಗುತ್ತಿದೆ ಎಂದು ಅನ್ನಿಸಿರಬೇಕು. ಹೀಗಾಗಿ ಈ ನಿಲುವು ತೆಗೆದುಕೊಂಡಿದ್ದಾರೆ. ಆದರೆ, ನಾನು ಯಾರ ವಿರುದ್ಧವೂ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಮೈತ್ರಿ ನಾಯಕರಲ್ಲೇ ಭಿನ್ನ ಅಭಿಪ್ರಾಯಗಳು ಇರುವುದನ್ನು ನೋಡಿದರೆ ಇಂಡಿಯಾ ಬ್ಲಾಕ್​ ಮುಂದುವರಿಯುತ್ತಾ ಎಂಬ ಅನುಮಾನ ಮೂಡದೇ ಇರದು.
ಇದನ್ನೂ ಓದಿ:ವಿಶ್ವಕಪ್​ಗೆ ಮುನ್ನ ಏಷ್ಯಾಕಪ್​ ಮೇಲೆ ಭಾರತದ ಕಣ್ಣು; ಇಂದು ಶ್ರೀಲಂಕಾ ವಿರುದ್ಧ ಫೈನಲ್​ ಫೈಟ್​
ಅಂದಹಾಗೆ ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೆಲವು ಸುದ್ದಿ ನಿರೂಪಕರು ನಡೆಸುವ ಟಿವಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಪ್ರಮುಖ ನಿರ್ಧಾರವನ್ನು ಇಂಡಿಯಾ ಒಕ್ಕೂಟ ತೆಗೆದುಕೊಂಡಿದೆ. ಪಟ್ಟಿಯಲ್ಲಿ ರಿಪಬ್ಲಿಕ್​ ಟಿವಿ ಅರ್ನಾಬ್​ ಗೋಸ್ವಾಮಿ, ಆಜ್​ತಕ್​ನ ಸುಧೀರ್​ ಚೌಧರಿ, ನ್ಯೂಸ್​ 18 ಹಿಂದಿಯ ಅಮಿಶ್​ ದೇವಗನ್​, ಟೈಮ್ಸ್​ ನೌನ ನವಿಕಾ ಕುಮಾರ್​ ಮತ್ತು ಇಂಡಿಯಾ ಟುಡೆ ಗ್ರೂಪ್​ನ ಗೌರವ್​ ಸಾವಂತ್​ ಸೇರಿದಂತೆ 14 ಆ್ಯಂಕರ್​ಗಳನ್ನು ಇಂಡಿಯಾ ಒಕ್ಕೂಟ ಬಹಿಷ್ಕರಿಸಿವೆ.
1. ಅದಿತಿ ತ್ಯಾಗಿ2. ಅಮನ್​ ಚೋಪ್ರ3. ಅಮಿಶ್​ ದೇವಗನ್​4. ಆನಂದ್​ ನರಸಿಂಹನ್​5. ಅರ್ನಾಬ್​ ಗೋಸ್ವಾಮಿ6. ಅಶೋಕ್​ ಶ್ರೀವಾತ್ಸವ್​7. ಚೈತ್ರಾ ತ್ರಿಪಾಠಿ8. ಗೌರವ್​ ಸಾವಂತ್​9. ನವಿಕಾ ಕುಮಾರ್​10. ಪ್ರಾಚಿ ಪರಾಶರ್​11. ರುಬಿಕಾ ಲಿಯಾಖತ್12. ಶಿವ್​ ಅರೂರ್​13. ಸುಧೀರ್​ ಚೌಧರಿ14. ಸುಶಾಂತ್​ ಸಿಹ್ನ
ಇಂಡಿಯಾ ಒಕ್ಕೂಟ ಸಾರ್ವಜನಿಕ ಅಭಿಪ್ರಾಯವನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಆದರೆ, ಇದನ್ನು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳ ಮೂಲಕ ಬಿಜೆಪಿಯು ವಶಪಡಿಸಿಕೊಳ್ಳುತ್ತಿದೆ ಎಂದು ವಿಪಕ್ಷಗಳ ಒಕ್ಕೂಟ ನಂಬಿದೆ. ಮಾಧ್ಯಮಗಳನ್ನು ಬಿಟ್ಟು ಸಾರ್ವಜನಿಕರನ್ನು ತಲುಪಲು ಸಾಮಾಜಿಕ ಮಾಧ್ಯಮ ಮತ್ತು ಸ್ವತಂತ್ರ ಪತ್ರಕರ್ತರನ್ನು ಇಂಡಿಯಾ ಬ್ಲಾಕ್ ಸದ್ಯ​ ಅವಲಂಬಿಸಿದೆ.(ಏಜೆನ್ಸೀಸ್​)
14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ ಇಂಡಿಯಾ ಮೈತ್ರಿಕೂಟ: ಯಾರೆಲ್ಲ ಪಟ್ಟಿಯಲ್ಲಿದ್ದಾರೆ?

ಶಾಲೆ ಮುಗ್ಸಿ ಸೈಕಲ್​ನಲ್ಲಿ ಬರ್ತಿದ್ದ ವಿದ್ಯಾರ್ಥಿನಿ ದುಪಟ್ಟ ಎಳೆದ ದುಷ್ಟರು: ಕೆಳಗೆ ಬಿದ್ದಾಕೆಯ ಮೇಲೆ ಬೈಕ್​ ಹರಿದು ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 12 =
Remember me
