ನ್ಯೂಯಾರ್ಕ್​:ಭಾರತದ ಕರೊನಾ ಲಸಿಕೆಗಳಿಗೆ ಮಾನ್ಯತೆ ಕೊಡುವ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅತಿಶಯವಾದ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ, ಯುನೈಟೆಡ್​ ನೇಷನ್ಸ್​ ಜನರಲ್ ಅಸೆಂಬ್ಲಿ(ಯುಎನ್​ಜಿಎ)ಯ 76ನೇ ಸದನದ ಅಧ್ಯಕ್ಷ ಅಬ್ದುಲ್ಲಾ ಶಹೀದ್ ಅವರ ಮಾತೊಂದು ಜಾಗತಿಕ ಪರಿಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ. ಕರೊನಾ ಲಸಿಕೆಗಳಿಗೆ ಮಾನ್ಯತೆ ನೀಡುವ ಬಗೆಗಿನ ಪ್ರಶ್ನೆಯೊಂದಕ್ಕೆ, ಜಗತ್ತಿನ ದೊಡ್ಡ ಪ್ರಮಾಣದ ರಾಷ್ಟ್ರಗಳು ಭಾರತದ ಕೋವಿಶೀಲ್ಡ್​ ಲಸಿಕೆ ಪಡೆದಿವೆ. ತಾವೂ ಕೋವಿಶೀಲ್ಡ್​ನ ಎರಡು ಡೋಸ್​ಗಳನ್ನೇ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಇಂಗ್ಲೆಂಡಿನ ಆಸ್ಟ್ರಾಜೆನೆಕಾ ಕಂಪೆನಿಯ ಲಸಿಕೆಯನ್ನೇ ಭಾರತದಲ್ಲಿ ಸೀರಮ್​ ಇನ್​​ಸ್ಟಿಟ್ಯೂಟ್ ಕೋವಿಶೀಲ್ಡ್​ ಆಗಿ ಉತ್ಪಾದಿಸುತ್ತಿದೆ. ಆದರೂ ಇಂಗ್ಲೇಂಡಿಗೆ ಕೋವಿಶೀಲ್ಡ್​ ಪಡೆದಿರುವ ಭಾರತೀಯರು ಹೋದಾಗ 10 ದಿನಗಳ ಕ್ವಾರೆಂಟೈನ್​ ವಿಧಿಸುವುದಾಗಿ ಇಂಗ್ಲೆಂಡ್ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಈಗ ಭಾರತವೂ ಇಂಗ್ಲೆಂಡಿನಿಂದ ಬರುವ ಯಾತ್ರಿಕರಿಗೆ 10 ದಿನಗಳ ಕ್ವಾರೆಂಟೈನ್ ವಿಧಿಸುವುದಾಗಿ ಪ್ರತ್ಯುತ್ತರ ನೀಡಿದೆ.
ಇದನ್ನೂ ಓದಿ:ತಾಲಿಬಾನ್​ ವಾಗ್ವಾದಕ್ಕೆ ಜಿ.ಪರಮೇಶ್ವರ ಅಸಮಾಧಾನ; ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಹೇಳಿದ್ದೇನು?
ಹೀಗಿರುವಾಗ, ಶುಕ್ರವಾರ ಸುದ್ದಿಗಾರರೊಬ್ಬರು, ಯಾವುದೇ ಕರೊನಾ ಲಸಿಕೆಗೆ ದೇಶಗಳು ಮಾನ್ಯತೆ ನೀಡಬೇಕೆ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ಲಸಿಕೆಗಳನ್ನು ಮಾತ್ರ ಪರಿಗಣಿಸಬೇಕೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಯುಎನ್​ಜಿಎ ಅಧ್ಯಕ್ಷ ಅಬ್ದುಲ್ಲಾ ಶಹೀದ್, “ಲಸಿಕೆಗಳ ಬಗ್ಗೆ ನೀವು ತುಂಬಾ ತಾಂತ್ರಿಕವಾದ ಪ್ರಶ್ನೆ ಕೇಳಿದ್ದೀರಿ. ನಾನು ಭಾರತದ ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳನ್ನು ಪಡೆದಿದ್ದೀನಿ. ಎಷ್ಟು ದೇಶಗಳು ಕೋವಿಶೀಲ್ಡ್​ ಸ್ವೀಕರಣೀಯ ಎನ್ನುತ್ತವೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ದೊಡ್ಡ ಪ್ರಮಾಣದ ದೇಶಗಳು ಕೋವಿಶೀಲ್ಡ್​ಅನ್ನು ಪಡೆದುಕೊಂಡಿವೆ” ಎಂದರು. ನಂತರ “ನಾನು ಬದುಕುಳಿದಿದ್ದೇನೆ. ಆದರೆ ಲಸಿಕೆಗಳ ಬಗ್ಗೆ ವೈದ್ಯಕೀಯ ಹಿನ್ನೆಲೆ ಇರುವ ಬೇರೆ ಯಾರಾದರೂ ಆ ನಿರ್ಣಯ ತೆಗೆದುಕೊಳ್ಳಲಿ, ನಾನು ಹೇಳಲಾಗದು” ಎಂದು ನಕ್ಕರು ಎಂದು ವರದಿ ತಿಳಿಸಿದೆ.
ಭಾರತ ಈವರೆಗೆ 66 ಮಿಲಿಯನ್ ಲಸಿಕೆ ಡೋಸ್​ಗಳನ್ನು 100 ದೇಶಗಳಿಗೆ ರಫ್ತು ಮಾಡಿದೆ. ಶಹೀದ್​ ಅವರ ದೇಶವಾದ ಮಾಲ್ಡೀವ್ಸ್​ ಜನವರಿ 2021 ರಲ್ಲಿ ಕೋವಿಶೀಲ್ಡ್​​ ಲಸಿಕೆಗಳನ್ನು ಪಡೆದ ಮೊದಲ ದೇಶಗಳಲ್ಲಿ ಒಂದು. ಈವರೆಗೆ 3.12 ಲಕ್ಷ ಡೋಸ್​ಗಳಷ್ಟು ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆ ಡೋಸ್​ಗಳನ್ನು ಮಾಲ್ಡೀವ್ಸ್​ ಸಹಾಯಾರ್ಥವಾಗಿ, ಕೋವಾಕ್ಸ್​ ಸೌಲಭ್ಯದಡಿ ಮತ್ತು ವಾಣಿಜ್ಯ ಒಪ್ಪಂದಗಳಡಿ ಪಡೆದುಕೊಂಡಿದೆ ಎನ್ನಲಾಗಿದೆ.(ಏಜೆನ್ಸೀಸ್)
ಸಮಂತಾ-ನಾಗಚೈತನ್ಯ ದಾಂಪತ್ಯ ಅಂತ್ಯ; ಅಧಿಕೃತ ಘೋಷಣೆ ಮಾಡಿದ ತಾರಾದಂಪತಿ

ಜಂಗಲ್​ ಥೀಮ್​ನ ಬಿಗ್​ ಬಾಸ್​ ಮನೆಯ ಝಲಕ್​ ನೋಡಿ! ಸೀಸನ್ 15 ಆರಂಭ ಇಂದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
