ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಭಾರಿ ಮುನ್ನಡೆಯಲಿದ್ದು, ಜನರು ಬೀದಿಗಿಳಿದು ದೀದಿಗೆ ಜೈಕಾರ ಹೇಳಲು ಆರಂಭಿಸಿದ್ದಾರೆ. ಅಲ್ಲದೆ ಕಾರ್ಯಕರ್ತರು ಜಮಾಯಿಸಲಾರಂಭಿಸಿದ್ದು, ಅವರೆಲ್ಲರ ಕುತೂಹಲ ಹೆಚ್ಚಿಸುವ ಕೆಲಸವನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ.
ಈಗಾಗಲೇ ಟಿಎಂಸಿ ಭಾರಿ ಮುನ್ನಡೆಯಲ್ಲಿ ಇರುವುದರಿಂದ ಎಲ್ಲರಿಗೂ ಧನ್ಯವಾದ ಹೇಳಿರುವ ಮಮತಾ ಬ್ಯಾನರ್ಜಿ, ಯಾರೂ ಮೆರವಣಿಗೆಗಳನ್ನು ಮಾಡುವ ಮೂಲಕ ವಿಜಯೋತ್ಸವ ಆಚರಿಸಬಾರದು, ಎಲ್ಲರೂ ಮನೆಗೆ ಹೋಗಿ ಎಂದು ಕೋರಿಕೊಂಡಿದ್ದಾರೆ. ಮಾತ್ರವಲ್ಲ, ಆರು ಗಂಟೆ ಬಳಿಕ ತಾವೇ ಮಾಧ್ಯಮಗಳ ಮೂಲಕ ತಮ್ಮ ವಿಚಾರ-ಅನಿಸಿಕೆಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ಟಿಎಂಸಿಯ ಭಾರಿ ಮುನ್ನಡೆಯ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಏನು ಹೇಳಲಿದ್ದಾರೆ ಎಂಬ ಕುತೂಹಲದಲ್ಲಿ ಈಗ ಟಿಎಂಸಿ ಬೆಂಬಲಿಗರು ಕಾಯುತ್ತಿದ್ದಾರೆ. 292 ಸ್ಥಾನಗಳ ಪೈಕಿ ಟಿಎಂಸಿ 215 ಸ್ಥಾನಗಳಿಂದ ಈಗಾಗಲೇ ಭಾರಿ ಮುಂಚೂಣಿಯಲ್ಲಿದೆ. (ಏಜೆನ್ಸೀಸ್)
I would like to thank everyone. I request all to not take out victory processions. I urge everyone to go back to their homes now. I will address the media after 6pm: West Bengal CM Mamata Banerjeepic.twitter.com/N8NfdFfGhK
— ANI (@ANI)May 2, 2021

ಮಮತಾಗೆ ಅಭಿನಂದನೆಗಳ ಮಹಾಪೂರ: ದೀದೀ ಓ ದೀದೀ ಅಂದೋರೆಲ್ಲಿ ಹೋದ್ರು ಎಂದು ಅಖಿಲೇಶ್‌ ವ್ಯಂಗ್ಯ

ಅಂತೂ ನಂದಿಗ್ರಾಮದಲ್ಲಿ ಗೆದ್ದು ಬೀಗಿದ ದೀದಿ: ಬಿಜೆಪಿಗೆ ತೀವ್ರ ಮುಖಭಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 3 =
Remember me
