ನವದೆಹಲಿ:ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಪದಕ ಜಯಿಸಿದ ಮೊದಲ ಭಾರತೀಯರೆನಿಸಿರುವ ಮಾಜಿ ಲಾಂಗ್​ಜಂಪ್​ ತಾರೆ ಅಂಜು ಬಾಬಿ ಜಾರ್ಜ್​, ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ಅವರ ಎದುರಿನಲ್ಲೇ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕ್ರಿಸ್​ಮಸ್​ ಪ್ರಯುಕ್ತ ಪ್ರಧಾನಿ ನಿವಾಸದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಅಂಜು, ಮೋದಿ ಪ್ರೋತ್ಸಾಹದಿಂದಾಗಿ ಈಗ ದೇಶದಲ್ಲಿ ಕ್ರೀಡಾಕ್ಷೇತ್ರ ಉತ್ತಮ ಯಶಸ್ಸು ಕಂಡಿದೆ. ನನಗೆ ಈಗಿನ ಕ್ರೀಡಾಪಟುಗಳನ್ನು ನೋಡಿದಾಗ ಅಸೂಯೆಯಾಗುತ್ತದೆ. ನನ್ನ ತಪ್ಪಾದ ಕಾಲದಲ್ಲಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದೆ ಎಂದಿದ್ದಾರೆ.
"I was in the wrong era" – Anju Bobby George
She also expresses the way Indian Sports has dramatically changed under PM Modi through schemes like#KheloIndia
She is all Cheers to PM Modi. So is Bharat.pic.twitter.com/WWSEzJ3lxl
— Karthik Reddy (@bykarthikreddy)December 25, 2023

ಕ್ರೀಡಾಪಟುವಾಗಿ 25 ವರ್ಷಗಳಿಂದ ಈ ಕ್ಷೇತ್ರವನ್ನು ಗಮನಿಸುತ್ತಿದ್ದೇನೆ. ಈಗ ಸಾಕಷ್ಟು ಬದಲಾವಣೆಗಳಾಗಿವೆ. ನನಗೆ 20 ವರ್ಷಗಳ ಹಿಂದೆ ಮೊದಲ ಅಂತಾರಾಷ್ಟ್ರೀಯ ಪದಕ ದೊರೆತಾಗ ನನ್ನ ಇಲಾಖೆಯಲ್ಲೂ ಬಡ್ತಿ ದೊರೆತಿರಲಿಲ್ಲ. ಆದರೆ ಕಳೆದ ವರ್ಷ ನೀರಜ್​ ಚೋಪ್ರಾ ಪದಕ ಗೆದ್ದಾಗ ಎಂಥ ಬದಲಾವಣೆಯಾಗಿತ್ತು. ದೇಶದಲ್ಲಿ ಎಷ್ಟೊಂದು ಸಂಭ್ರಮವಿತ್ತು ಎಂದು ಅಂಜು ವಿವರಿಸಿದ್ದಾರೆ. ಅಂಜು ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಟಿ20 ಬಳಿಕ ಭಾರತದ ಮಹಿಳೆಯರ ಏಕದಿನ ತಂಡಕ್ಕೂ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
