ಮುಂಬೈ:ಸಿನಿಮಾ ರಂಗದಲ್ಲಿನ ಕರಾಳತೆಯನ್ನು ಆಗ್ಗಾಗ್ಗೆ ನಟಿಯರಿಂದಲೇ ಬಯಲಾಗುತ್ತಿರುತ್ತವೆ. ಆರಂಭದ ದಿನಗಳಲ್ಲಿ ನಾಯಕರಿಯರು ಅನುಭವಿಸುವ ಸಮಸ್ಯೆಗಳ ಬಗ್ಗೆ ಆಗ್ಗಾಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.
ನಿನ್ನೆಯಷ್ಟೇ ಮೈ ಬಣ್ಣದ ಬಗ್ಗೆ ಬಾಲಿವುಡ್​ ನಟಿ ಈಶಾ ಗುಪ್ತಾ ಹೇಳಿಕೆ ನೀಡಿದ್ದರು. ತಾವು ಬಿಳಿಯ ಮೈ ಬಣ್ಣ ಪಡೆಯಲು 90 ಸಾವಿರ ಬೆಲೆಯ ಇಂಜೆಕ್ಷನ್​ ಪಡೆದಿದ್ದೆ ಎಂದು ಮುಕ್ತವಾಗಿಯೇ ಹಂಚಿಕೊಂಡಿದ್ದರು.
ಇದೀಗ ಮತ್ತೊಬ್ಬ ನಟಿ ತಮ್ಮ ದೇಹದ ಬಗ್ಗೆ ಹಲವು ಟೀಕೆಗಳನ್ನು ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ತನ್ನ ಮೂಗು, ತುಟಿ ಹೀಗೆ ದೇಹದ ಬಹುತೇಕ ಅಂಗವನ್ನು ನೀವು ಸರ್ಜರಿ ಮಾಡಿಸಿಕೊಳ್ಳಬೇಕು ಎಂದು ಹಲವರು ಸಲಹೆ ನೀಡಿದ್ದರು ಎಂದು ನಟಿ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ.
ಹಿಂದಿ ಸೇರಿದಂತೆ ತಮಿಳು, ಮರಾಠಿ, ತೆಲುಗು, ಬೆಂಗಾಲಿ ಹಾಗೂ ಕೆಲ ಇಂಗ್ಲೀಷ್​ ಸಿನಿಮಾಗಳಲ್ಲೂ ನಟಿಸಿರುವ ರಾಧಿಕಾ ಆಪ್ಟೆ ಅವರ ಆರಂಭದ ದಿನಗಳಲ್ಲಿ ತಾವು ತಮ್ಮ ದೇಹದ ಬಗ್ಗೆ ಸಾಕಷ್ಟು ಟೀಕೆಗಳನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ.
2005ರಲ್ಲಿ ವಾಹ್​ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ಅವರ ದೇಹದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು, ಅದರಲ್ಲೂ ನೀವು ಸ್ತನದ ಗಾತ್ರವನ್ನೂ ಹೆಚ್ಚಿಸಿಕೊಳ್ಳಬೇಕೆಂಬ ಮಾತನ್ನೂ ಕೇಳಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರಕ್ಕಾಗಿ ನಿರ್ದೇಶಕರ ಮನೆ ಬಾಗಿಲಿಗೆ ಹೋಗುತ್ತಿದ್ದ ನನಗೆ ಒಂದೊಂದು ಬಾರಿ ದೇಹದ ಒಂದೊಂದು ಅಂಗಗಳ ಬದಲಾವಣೆಗೆ ಹೇಳುತ್ತಿದ್ದರು. ಮೊದಲ ಭೇಟಿಯಲ್ಲಿ ನನ್ನ ಮೂಗು, 2ನೇ ಭೇಟಿ ವೇಳೆ ತುಟಿ, ನಂತರ ಸ್ತನ, ಈ ಬಳಿಕ ಕಾಲುಗಳು ಹೀಗೆ ದೇಹದ  ಎಲ್ಲಾ ಭಾಗಗಳ ಸರ್ಜರಿಯಾಗಬೇಕೆಂದು ಹೇಳುತ್ತಿದ್ದರು ಎಂದಿದ್ದಾರೆ.
ಇಷ್ಟು ಟೀಕೆಗಳು ಕೇಳಿದ ನನಗೆ ನನ್ನ ದೇಹದ ಮೇಲಿನ ಪ್ರೀತಿ ಹೆಚ್ಚಾಯಿತು. ನನಗೆ ನಾನೇ ಹೆಚ್ಚು ಪ್ರೀತಿಸಿಕೊಳ್ಳಲು ಆರಂಭಿಸಿದೆ. ಯಾರೊಬ್ಬರ ಟೀಕೆಗೂ ಕುಗ್ಗಲಿಲ್ಲ. ಈವರೆಗೂ ನಾನು ನನ್ನ ದೇಹದ ಸೌಂದರ್ಯಕ್ಕಾಗಿ ಒಂದು ಇಂಜೆಕ್ಷನ್​ ಕೂಡ ಪಡೆದಿಲ್ಲ ಎಂದು ರಾಧಿಕಾ ತಮ್ಮ ಸಿನಿ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಎರಡು ವರ್ಷಗಳ ಬಳಿಕ ಭಾರತ-ಬಾಂಗ್ಲಾ ಬಸ್​​​ ಪುನಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 3 =
Remember me
