ಚೆನ್ನೈ:ಪರಭಾಷಾ ನಟಿಯಯರ ಮಾತಂತಿರಲಿ, ರಾಜ್ಯದಲ್ಲಿ ಹುಟ್ಟಿ ಬೆಳೆದ ಕೆಲವರು ಕನ್ನಡ ಬರುವುದಿಲ್ಲ ಎಂದು ಹೇಳಿದವರು ಇದ್ದಾರೆ. ಆದರೆ ಬೇರೆ ಭಾಷೆಗಳ ಮಾತು ಹಾಗಲ್ಲ, ಅದರಲ್ಲೂ ತಮಿಳುನಾಡಿನಲ್ಲಿ ತಮಿಳು ಬರಲೇಬೇಕು. ಇಲ್ಲವಾದರೆ ಅವಕಾಶಗಳು ಸಿಗುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಮಾತೃಭಾಷೆ ಕನ್ನಡವಾಗಿದ್ದರೂ ತಮಿಳನ್ನು ಸರಾಗವಾಗಿ ಮಾತನಾಡಬೇಕು ಎಂಬುದು ನನ್ನ ಕನಸು ಎಂದು ಸ್ಯಾಂಡಲ್ ವುಡ್ ನಾಯಕಿ ಪ್ರಿಯಾಂಕಾ ತಿಮ್ಮೇಶ್ ಹೇಳಿರುವುದು.
ಇದನ್ನೂ ಓದಿ:40 ವರ್ಷದ ಬಳಿಕ ಅದೇ ಸುಜುಕಿ ಬೈಕ್ ಏರಿದ ತಲೈವ! ಕಾರಣ ಹೀಗಿದೆ ನೋಡಿ..
ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು ಶ್ರೀಕಾಂತ್ ಅಭಿನಯದ ‘ಸತ್ತಮಿಂದ್ರಿ ಮುಟ್ಟಂ ತಾ’ ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಾತೃಭಾಷೆ ಕನ್ನಡವಾಗಿದ್ದರೂ ತಮಿಳನ್ನು ಸರಾಗವಾಗಿ ಮಾತನಾಡಬೇಕು ಎಂಬುದು ನನ್ನ ಕನಸು ಎಂದು ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ. ಮಾಧ್ಯಮ ಮಾಧ್ಯಮ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
”ಕೆಲವು ವರ್ಷಗಳ ವಿರಾಮದ ನಂತರ ಮತ್ತೆ ಕಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದೇನೆ. ನನಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ. ನನ್ನ ಮ್ಯಾನೇಜರ್ ಹಾಗೂ ಹೀರೋ ಶ್ರೀಕಾಂತ್ ಅವರ ಮ್ಯಾನೇಜರ್ ಗಳು ಗೆಳೆಯರಾಗಿದ್ದರಿಂದ ಈ ಅವಕಾಶ ಸಿಕ್ಕಿದೆ. ಇದಕ್ಕಾಗಿ ಶ್ರೀಕಾಂತ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿರ್ದೇಶಕರು ವಿವರಿಸುವಾಗ ಈ ಕಥೆ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಚಿತ್ರ ಚೆನ್ನಾಗಿ ಮೂಡಿಬರಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ನಿರ್ದೇಶಕರು ಹೇಳಿದಂತೆ ಮಾಡಿದ್ದೇನೆ. ನಾನು ತಮಿಳು ಕಲಿಯುತ್ತಿದ್ದೇನೆ. ತಮಿಳು ಭಾಷೆಯನ್ನು ಚೆನ್ನಾಗಿ ಕಲಿತು ಸಿನಿಮಾ ಅವಕಾಶಗಳನ್ನು ಪಡೆಯಬೇಕೆಂಬುದು ನನ್ನ ಆಸೆ. ನಾನು ಇಲ್ಲಿಯವರೆಗೆ ಮಾಡಿರುವ ಎಲ್ಲಾ ಚಿತ್ರಗಳ ಪೈಕಿ ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಎದ್ದು ಕಾಣುತ್ತಿದೆ,” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + seven =
Remember me
