ದೆಹಲಿ:ರಾಷ್ಟ್ರದ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಭಿಕ್ಷೆ ಬೇಡಲು ಕೂಡ ಸಜ್ಜಾಗಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ, ನಾನು ಬೇಡಲೂ ಸಿದ್ಧ ಎಂಬುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರನ್ನು ಹೀಗೆ ಬೇಡುವ ಮಾತನಾಡುವ ಸ್ಥಿತಿಗೆ ತಂದಿರುವುದು ಕರೊನಾ.
ಹೌದು.. ಕರೊನಾದಿಂದಾಗಿ ಕಂಗೆಟ್ಟಿರುವ ರಾಜ್ಯದ ಜನತೆಯ ಪರವಾಗಿ ನಾನು ಬೇಡಲು ಕೂಡ ಸಿದ್ಧ ಎಂದು ಸಿಎಂ ಕೇಜ್ರಿವಾಲ್ ಹೇಳಿಕೊಂಡಿರುವುದು ಲಸಿಕೆಯ ವಿಷಯದಲ್ಲಿ. ಲಸಿಕೆ ವಿತರಣೆ ಸಂಬಂಧ ಕೇಂದ್ರ ಸರ್ಕಾರ ವಿಧಿಸಿರುವ ಕೆಲವು ನಿರ್ಬಂಧಗಳನ್ನು ಅದು ತೆರವುಗೊಳಿಸಬೇಕು. ರಾಜ್ಯಗಳಲ್ಲಿ ಹೆಚ್ಚಿನ ಲಸಿಕೆ ಕೇಂದ್ರಗಳನ್ನು ತೆರೆಯಲು ಹಾಗೂ ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎಂಬುದಾಗಿ ಕೇಜ್ರಿವಾಲ್ ಕೇಳಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟರೆ ಜನರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲು ದೆಹಲಿ ಸರ್ಕಾರ ಸಿದ್ಧವಿದೆ. ಮಾತ್ರವಲ್ಲ ದೆಹಲಿಯ ಎಲ್ಲರಿಗೂ ಮೂರೇ ತಿಂಗಳಲ್ಲಿ ಲಸಿಕೆ ನೀಡುವುದನ್ನು ಪೂರ್ಣಗೊಳಿಸಬಲ್ಲೆವು ಎಂದಿರುವ ಕೇಜ್ರಿವಾಲ್​, ಅಗತ್ಯಬಿದ್ದರೆ ನನ್ನ ರಾಜ್ಯದ ಜನರಿಗಾಗಿ ಅವರಿಗೆ ನೀಡಬೇಕಾದ ಲಸಿಕೆಗಾಗಿ ನಾನು ಬೇಡಿಕೊಳ್ಳಲೂ ಸಿದ್ಧ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

ತೂಕಡಿಸಿದ ಚಾಲಕ, ಬಸ್​ ಮರಕ್ಕೆ ಡಿಕ್ಕಿ​; ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ಓಡಿಸಿದ್ದ ಬಿಎಂಟಿಸಿ ಮೆಕ್ಯಾನಿಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
