ನವದೆಹಲಿ:ಲಡಾಖ್​ನಲ್ಲಿ ಚೀನಾ ಜೊತೆಗಿನ ಗಡಿ ಉದ್ವಿಗ್ನತೆ ನಡುವೆಯೇ, ಪಾಕಿಸ್ತಾನ ಗಡಿಯಲ್ಲಿ ದೇಶೀಯ ನಿರ್ವಿುತ ಲಘು ಸಮರ ವಿಮಾನ (ಎಲ್​ಸಿಎ) ‘ತೇಜಸ್’ ನಿಯೋಜಿಸಲಾಗಿದೆ. ಪಾಕಿಸ್ತಾನ ಗಡಿ ಸಮೀಪದ ಪಶ್ಚಿಮ ವಿಭಾಗದಲ್ಲಿ ತೇಜಸ್ ವಿಮಾನವನ್ನು ಭಾರತೀಯ ವಾಯುಪಡೆ (ಐಎಎಫ್) ನಿಯೋಜಿಸಿದೆ. ಆ ಭಾಗದಲ್ಲಿ ವೈರಿಗಳ ಸಂಭಾವ್ಯ ದಾಳಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ವಾಯು ಕಮಾಂಡ್​ನ ಸೂಲೂರಿನಿಂದ ಮೊದಲ ತೇಜಸ್ ಸ್ಕಾ್ವಡ್ರನ್ (ಫ್ಲೈಯಿಂಗ್ ಡ್ಯಾಗರ್ಸ್) ಪಾಕ್ ಗಡಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ವಿಮಾನಗಳ ಪ್ರಥಮ ಸ್ಕಾ್ವಡ್ರನ್ ಇನಿಷಿಯಲ್ ಆಪರೇಷನಲ್ ಕ್ಲಿಯರೆನ್ಸ್ ಆವೃತ್ತಿಯದ್ದಾಗಿದೆ. ‘ಫ್ಲೈಯಿಂಗ್ ಬುಲೆಟ್ಸ್’ ಎರಡನೇ ಸ್ಕಾ್ವಡ್ರನ್ 18 ವಿಮಾನಗಳು ಅಂತಿಮ ಆಪರೇಷನಲ್ ಕ್ಲಿಯರೆನ್ಸ್ ಆವೃತ್ತಿಯದ್ದು. ಅವುಗಳಿಗೆ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಸೂಲೂರು ವಾಯುನೆಲೆಯಲ್ಲಿ ಮೇ 27ರಂದು ಚಾಲನೆ ನೀಡಿದ್ದರು. ಇತ್ತೀಚೆಗೆ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜತೆಗಿನ ಘರ್ಷಣೆ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಭಾರತೀಯ ವಾಯುಪಡೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ದೇಶೀಯ ತೇಜಸ್ ವಿಮಾನದ ಸಾಮರ್ಥ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರು ಮೂಲದ ಎಚ್​ಎಎಲ್ ಈ ವಿಮಾನಗಳನ್ನು ತಯಾರಿಸಿದೆ. 83 ಮಾರ್ಕ್1ಎ ವಿಮಾನಗಳನ್ನು ಖರೀದಿಸುವ ಒಡಂಬಡಿಕೆಯನ್ನು ವಾಯುಪಡೆ ಮತ್ತು ರಕ್ಷಣಾ ಸಚಿವಾಲಯ ಈ ವರ್ಷಾಂತ್ಯದೊಳಗೆ ಅಂತಿಮಗೊಳಿಸಲಿವೆ.
ಎಚ್​ಎಎಲ್ ತೇಜಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
