ಶ್ರೀನಗರ:ಭಾರತೀಯ ವಾಯುಪಡೆಯ ಮಹಿಳಾ ಫ್ಲೈಯಿಂಗ್ ಅಧಿಕಾರಿಯೊಬ್ಬರು ವಿಂಗ್ ಕಮಾಂಡರ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದೆರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರಿಕಿರಿ ಎದುರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಇಬ್ಬರೂ ಅಧಿಕಾರಿಗಳನ್ನು ಶ್ರೀನಗರದಲ್ಲಿ ನಿಯೋಜಿಸಲಾಗಿದೆ.
ಇದನ್ನು ಓದಿ:ಇದೇ ಘಟನೆ ಸಿಎಂ ಕುಟುಂಬದಲ್ಲಿ ನಡೆದಿದ್ದರೆ ಹೀಗೆಳುತ್ತಿದ್ದರೆ: ಟ್ರೈನಿ ವೈದ್ಯೆ ತಾಯಿ ಕಿಡಿ
2023 ಡಿಸೆಂಬರ್​ 31 ರಂದು ಅಧಿಕಾರಿಗಳ ಮೆಸ್‌ನಲ್ಲಿ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಅಲ್ಲಿ ಅವರ ಹಿರಿಯ ಅಧಿಕಾರಿ ಉಡುಗೊರೆಯನ್ನು ಸ್ವೀಕರಿಸಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು ಯಾವುದೇ ಗಿಫ್ಟ್​ ಸ್ವೀಕರಿಸಿಲ್ಲ ಎಂದು ಹೇಳಿದೆ. ಆಗ ವಿಂಗ್ ಕಮಾಂಡರ್ ಉಡುಗೊರೆ ರೂಮ್​ನಲ್ಲಿದೆ ಎಂದು ಹೇಳಿ ಅಲ್ಲಿಗೆ ಕರೆದೊಯ್ದರು. ಬಳಿಕ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಅಧಿಕಾರಿ ತಿಳಿಸಿದ್ದಾರೆ.
ವಿಂಗ್​ ಕಮಾಂಡರ್​​ ಅವರ ಈ ವರ್ತನೆಯನ್ನು ಮಹಿಳಾ ಅಧಿಕಾರಿಯು ಪದೇಪದೆ ನಿರಾಕರಿಸಿದ್ದಾರೆ. ಹಾಗೂ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅದನ್ನು ವಿರೋಧಿಸಲು ಪ್ರಯತ್ನಿಸಿದೆ. ಕೊನೆಗೆ ಆತನನ್ನು ತಳ್ಳಿ ಓಡಿಹೋದೆ. ಅವನ ಕುಟುಂಬ ಶುಕ್ರವಾರ ಹೋಗುವುದು ಬಳಿಕ ಮತ್ತೆ ಭೇಟಿಯಾಗೋಣ ಎಂದು ಅವರು ಹೇಳಿದರು. ನನಗೆ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ಆತಂಕದಲ್ಲಿ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಈ ಹಿಂದೆಯೂ ಅಂಥಾ ಘಟನೆಗಳು ನಡೆದಿದ್ದರಿಂದ ವರದಿ ಮಾಡುವ ಧೈರ್ಯ ಬರಲಿಲ್ಲ ಎಂದು ಮಹಿಳಾ ಅಧಿಕಾರಿ ತಿಳಿಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.
ಈ ಘಟನೆಯ ನಂತರ ಕಚೇರಿಗೆ ಬಂದ ವಿಂಗ್ ಕಮಾಂಡರ್ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ಯಾವುದೇ ಪಶ್ಚಾತ್ತಾಪವಿರಲಿಲ್ಲ ಎಂದು ದೂರುದಾರರು ಹೇಳಿದ್ದಾರೆ. ಈ ವಿಚಾರದ ಕುರಿತು ಇತರ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ಹಂಚಿಕೊಂಡೆ ಆಗ ಅವರು ನೀಡಿದ ಸೂಚನೆ ಮೇರೆಗೆ ದೂರು ನೀಡಿದ್ದೇನೆ. ಸೇನೆಗೆ ಸೇರಿದ ನನ್ನಂತ ಅವಿವಾಹಿತ ಹುಡುಗಿಯನ್ನು ಈ ರೀತಿ ಕೀಳಾಗಿ ನಡೆಸಿಕೊಂಡಿರುವುದಕ್ಕೆ ಉಂಟಾಗಿರುವ ಮಾನಸಿಕ ಹಿಂಸೆಯನ್ನು ಪದಗಳಲ್ಲಿ ಹೇಳಲಾರೆ ಎಂದಿದ್ದಾರೆ.
ದೂರಿನ ನೀಡಿದ ಬಳಿಕ ಘಟನೆಯ ಬಗ್ಗೆ ತನಿಖೆ ನಡೆಸಲು ಕರ್ನಲ್ ಶ್ರೇಣಿಯ ಅಧಿಕಾರಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಜನವರಿಯಲ್ಲಿ ವಿಂಗ್ ಕಮಾಂಡರ್​ ಮತ್ತು ತನ್ನ ಹೇಳಿಕೆ ದಾಖಲಿಸಲು ಎರಡು ಬಾರಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಆದರೆ ಹಿರಿಯ ಅಧಿಕಾರಿಯ ಉಪಸ್ಥಿತಿಗೆ ವಿಂಗ್ ಕಮಾಂಡರ್ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಆಡಳಿತದ ತಪ್ಪುಗಳನ್ನು ಮರೆಮಾಚಲು ತನಿಖೆಯನ್ನು ಮುಚ್ಚಲಾಯಿತು ಎಂದು ಅವರು ತಿಳಿಸಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಐಸಿ (ಆಂತರಿಕ ಸಮಿತಿ) ತನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ, ಏಕೆಂದರೆ ಫಲಿತಾಂಶವನ್ನು ನಿಷ್ಪಕ್ಷಪಾತವಾಗಿ ಇಡಬೇಕು ಎಂದು ಉನ್ನತ ಮಟ್ಟದಿಂದ ಸೂಚನೆ ಬಂದಿತ್ತು. ಎಲ್ಲರೂ ಅಪರಾಧಿಗೆ ಸಹಾಯ ಮಾಡುತ್ತಿದ್ದರು. ಅಧಿಕಾರಿಗಳು ವಿಂಗ್​ ಕಮಾಂಡರ್​ಗೆ ಸಹಾಯ ಮಾಡಿದ್ದಾರೆ ಎಂದು ದೂರುದಾರರ ಆರೋಪವಾಗಿದೆ. ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿ ಹಲವು ಬಾರಿ ರಜೆ ಕೇಳಿದರೂ ಪ್ರತಿ ಬಾರಿಯೂ ರಜೆ ನಿರಾಕರಿಸಲಾಗುತ್ತಿತ್ತು. ಪ್ರತ್ಯೇಕ ಪೋಸ್ಟಿಂಗ್‌ಗಾಗಿ ಮಾಡಿದ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)
ಪ್ರಧಾನಿ ಮೋದಿಯನ್ನು ದ್ವೇಷಿಸುವುದಿಲ್ಲ.. ಸಹಾನುಭೂತಿ ಇದೆ; ರಾಹುಲ್​ಗಾಂಧಿ ಹೀಗೆಳಿದ್ದೇಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
