ನವದೆಹಲಿ:ರೂಮ್​ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಭಾರತೀಯ ಆಡಳಿತ ಸೇವೆ (IAS) ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ದೆಹಲಿ ನಗರದ ರಾಜೀಂದ್ರ ನಗರದಲ್ಲಿ ನಡೆದಿದೆ.
ಅಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಹಾರಾಷ್ಟ್ರ ಅಕೋಲಾ ನಗರದ ನಿವಾಸಿ. ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಹಣವನ್ನು ಕಟ್ಟಲಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ವರ್ಷಗಳಿಂದ ಐಎಎಸ್​ ಪರೀಕ್ಷೆಗಾಗಿ ರಾಜೀಂದ್ರ ನಗರದ ಬಾಡಿಗೆ ಮನೆಯಲ್ಲಿ ಇದ್ದರು. ಖಿನ್ನತೆ ಹಾಗೂ ಜೀವನದ ಹಿಂಜರಿಕೆಯಿಂದಾಗಿ, ಜೀವನ ಸಾಗಿಸಲು ಕಷ್ಟ ಆಗಿದೆಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್​ನೋಟ್​ನಲ್ಲಿ ಅಂಜಲಿ,  ಅಪ್ಪ, ಅಮ್ಮಗೆ  ಕ್ಷಮಿಸಿ. ನನ್ನ ಚೆನ್ನಾಗಿಯೇ ನೀವು ಬೆಳೆಸಿದ್ದೀರಿ. ಆದರೆ ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಸಮಸ್ಯೆಗಳೇ ಹೆಚ್ಚಾಗಿವೆ. ನನಗೆ ಶಾಂತಿ ಬೇಕು. ನನ್ನ ಖಿನ್ನತೆ ಶಮನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನದಲ್ಲೇ ಯುಪಿಎಸ್​​ಸಿ ಪಾಸ್​ ಮಾಡಬೇಕಿತ್ತು. ಅದು ಆಗಲಿಲ್ಲ.  ಪಿಜಿ ಮತ್ತು ಹಾಸ್ಟೆಲ್​ ರೆಂಟ್​ ಕೂಡ ಜಾಸ್ತಿ ಮಾಡಿ ವಿದ್ಯಾರ್ಥಿಗಳಿಂದ ಎಲ್ಲರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ
ಮೃತ ಅಂಜಲಿ ತಿಂಗಳಿಗೆ 15,000 ರೂ.ಗಳನ್ನು ಬಾಡಿಗೆ ಕಟ್ಟುತ್ತಿದ್ದರು. ಆದರೆ ಏಕಾಏಕಿ ಮನೆಯ ಮಾಲೀಕರು 3 ಸಾವಿರ ರೂ.ಗಳನ್ನು ಏರಿಕೆ ಮಾಡಿದ್ದರಿಂದ 18,000 ರೂಗಳನ್ನು ಕಟ್ಟಿತ್ತಿದ್ದಳು ಎಂದು ಮೃತಳ ಗೆಳತಿ ಹೇಳಿದ್ದಾರೆ. ಈ ಸಂಬಂಧ ರಾಜೀಂದ್ರ ನಗರದ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ 3ನೇ ಮಗುವಿಗೆ ತಾಯಿ ಆಗುತ್ತಿರುವ ಸುದ್ದಿ ಹಂಚಿಕೊಂಡ ರಾಪರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + two =
Remember me
