ನವದೆಹಲಿ:ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರನ್ನು ಇದೀಗ ಸರ್ಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಅ.3ರಂದು ಕುರುಬರ ರಾಷ್ಟ್ರೀಯ ಮಹಾ ಅಧಿವೇಶನ
ಕಳೆದ ವರ್ಷ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಮತ್ತು ಆಕೆಯ ಪತಿ ಸಂಜೀವ್ ಖಿರ್ವಾರ್ ತಮ್ಮ ಶ್ವಾನವನ್ನು ವಾಕಿಂಗ್​ ಮಾಡಿಸಲು ದೆಹಲಿಯ ತ್ಯಾಗರಾಜ್​ ಸ್ಟೇಡಿಯಂನ ಖಾಲಿ ಮಾಡಿಸಿದ್ದರು. ಈ ಆರೋಪದಡಿ ಅವರನ್ನು ದೆಹಲಿಯಿಂದ ವರ್ಗಾವಣೆ ಮಾಡಲಾಗಿತ್ತು.
ಈ ಹಿನ್ನೆಲೆ ಇದೀಗ ರಿಂಕು ದುಗ್ಗಾ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಸಂಬಂಧ ಅಧಿಸೂಚನೆಯನ್ನೂ ಕೂಡ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಹಕ್ಕು, ಕಾನೂನಿನ ತಿಳುವಳಿಕೆ ಅಗತ್ಯ; ನ್ಯಾಯಾಧೀಶ ಪುಟ್ಟರಾಜು
ರಿಂಕು ದುಗ್ಗಾ ತಮ್ಮ ಸೇವಾ ದಾಖಲೆಯ ಮೌಲ್ಯಮಾಪನದ ನಂತರ ಮೂಲಭೂತ ನಿಯಮಗಳು (ಎಫ್‌ಆರ್) 56 (ಜೆ), ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್) ಪಿಂಚಣಿ ನಿಯಮಗಳು, 1972ರ ನಿಯಮ 48ರ ಅಡಿಯಲ್ಲಿ ಕಡ್ಡಾಯವಾಗಿ ನಿವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).
‘ಸಣ್ಣ ಮಗು ನಾನಲ್ಲ, ಲಾಲಿಪಾಪ್ ತಿನ್ನುತ್ತಿಲ್ಲ’; ಸಿ.ಟಿ. ರವಿ ಹೇಳಿಕೆಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 6 =
Remember me
