ಜೈಪುರ:ವೈಯಕ್ತಿಕ ಹಾಗೂ ವೃತ್ತಿ ಜೀವನ ವಿಚಾರವಾಗಿ ಆಗಾಗ ಸುದ್ದಿಯಾಗುವ ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಜಿಲ್ಲಾಧಿಕಾರಿ ಟೀನಾ ಡಾಬಿ ಸೆಲೆಬ್ರಿಟಿ ಐಎಎಸ್​ ಎಂದೇ ಖ್ಯಾತಿ ಗಳಿಸಿದ್ದಾರೆ. ಇದೀಗ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
2015ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯ ಟಾಪರ್ (ನ.1)​ ಆಗಿರುವ ಟೀನಾ ಡಾಬಿ, ಇತ್ತೀಚೆಗೆ ಸೀರೆ ಶಾಪಿಂಗ್​ ಮಾಡಲು ಮಳಿಗೆ ಒಂದಕ್ಕೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಟೀನಾ ಡಾಬಿ ಅವರು ಶಾಪಿಂಗ್​ ಮಾಡಲು ಸೀರೆ ಅಂಗಡಿ ಒಳಗೆ ಕುಳಿತಿದ್ದಾರೆ. ಈ ವೇಳೆ ಅಂಗಡಿಯವರು ಅವರಿಗೆ ಟೀ ಮತ್ತು ಸ್ನ್ಯಾಕ್ಸ್​ ನೀಡಿದ್ದಾರೆ. ಟೀನಾ ಮಾತ್ರವಲ್ಲದೆ, ಕ್ಯಾಮೆರಾಮೆನ್​ ಮತ್ತು ಇತರೆ ಕೆಲವು ಮಂದಿಯು ಸಹ ವಿಡಿಯೋದಲ್ಲಿದ್ದಾರೆ. ಕೆಲವು ಸ್ನ್ಯಾಕ್ಸ್​ಗಳನ್ನು ಟೀನಾ ಸೇವಿಸುತ್ತಿರುವುದು ಮತ್ತು ಟಿಸ್ಸ್ಯೂ ಪೇಪರ್​ನಿಂದ ಕೈ ಒರೆಸಿಕೊಳ್ಳುತ್ತಿರುವ ದೃಶ್ಯವು ಇದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಟೀನಾ ಡಾಬಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಗಡಿಯವರು ನೀಡಿದ ಸ್ನ್ಯಾಕ್ಸ್​ ಅನ್ನು ಸ್ವೀಕರಿಸಿದ್ದಕ್ಕೆ ಖಂಡಿಸಿದ್ದಾರೆ.
ಟೀನಾ ಅವರು ಅಂಗಡಿಯವನ ಮೇಲೆ ಪರೋಕ್ಷ ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ. ಅದು ನ್ಯಾಯೋಚಿತವಲ್ಲ ಎಂದು ನೆಟ್ಟೊಗರೊಬ್ಬರು ಬರೆದರೆ, ಇತರರು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕಿತ್ತು ಎಂದು ಹೇಳಿದ್ದಾರೆ.
ಆಹಾರ ಮತ್ತು ವಿಡಿಯೋ ರೆಕಾರ್ಡಿಂಗ್ ಎರಡನ್ನೂ ಕಟ್ಟುನಿಟ್ಟಾಗಿ ಟೀನಾ ಅವರು ನಿರಾಕರಿಸಬೇಕಾಗಿತ್ತು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮೂಲಕ ಟೀನಾ ಅವರ ನಡೆಯನ್ನು ಟೀಕಿಸಿದ್ದಾರೆ.
A post shared by 𝐈𝐀𝐒 𝐓𝐢𝐧𝐚 𝐃𝐚𝐛𝐢 (@ias_tina_dabi_)

ಯಾರು ಈ ಟೀನಾ ಡಾಬಿ?2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಎರಡು ವರ್ಷಗಳ ಬಳಿಕ ಕಳೆದ ನವೆಂಬರ್​ (2020) ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್​ ತಿಂಗಳಲ್ಲಿ ದಂಪತಿಯ ಡಿವೋರ್ಸ್​ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಇದೀಗ ಇಬ್ಬರು ಮಾಜಿ ದಂಪತಿಗಳಾಗಿದ್ದಾರೆ. ಇವರಿಬ್ಬರ ವಿವಾಹ ಸಾಕಷ್ಟು ಸುದ್ದಿಯಾಗಿತ್ತು. ಲವ್​ ಜಿಹಾದ್​ ಎಂದು ಹೇಳಲಾಗಿತ್ತು. ಆದರೆ, ಭಾರಿ ವಿರೋಧದ ನಡುವೆಯೂ ಮದುವೆಯಾಗಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಇಬ್ಬರು ಡಿವೋರ್ಸ್​ ಆಗಿದ್ದಾರೆ. ಇದರ ಬೆನ್ನಲ್ಲೇ ಟೀನಾ ಡಾಬಿ ಅವರು ಏಪ್ರಿಲ್​ 22ರಂದು ಎರಡನೇ ವಿವಾಹವಾಗಿದ್ದಾರೆ. ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದರು. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟೀನಾ ಡಾಬಿ ಅವರು ಎರಡನೇ ವಿವಾಹವಾದ ಬೆನ್ನಲ್ಲೇ ಅವರ ಮಾಜಿ ಪತಿ ಹಾಗೂ ಐಎಎಸ್​ ಅಧಿಕಾರಿ ಅಥರ್​ ಅಮೀರ್​ ಖಾನ್​ ಕೂಡ ಎರಡನೇ ಮದುವೆ ಆಗಿದ್ದಾರೆ. ತಮ್ಮದೇ ಸಮುದಾಯದ ಡಾ. ಮೆಹ್ರೀನ್​ ಖಾಜಿ ಎಂಬುವರನ್ನು ವರಿಸಿದ್ದಾರೆ.(ಏಜೆನ್ಸೀಸ್​)
IAS ಪಾಸ್​ ಮಾಡಲು ಎಷ್ಟು ಗಂಟೆ ಓದಬೇಕು? ಸೆಲೆಬ್ರಿಟಿ ಅಧಿಕಾರಿ ಟೀನಾ ಡಾಬಿ ಕೊಟ್ಟ ಉತ್ತರ ವೈರಲ್​

ಯೂಕ್ರೇನ್‌ ರಾಜಧಾನಿಯಲ್ಲಿ ಹೆಲಿಕಾಪ್ಟರ್​ ದುರಂತ: ಗೃಹ ಸಚಿವ ಸೇರಿ 15 ಮಂದಿ ದುರ್ಮರಣ

ಮದ್ವೆ ವೇಳೆ ರಾಜ್ಯದಲ್ಲೇ ಟ್ರೆಂಡ್​ ಆಗಿದ್ದ ಐಎಎಸ್​​ ಅಧಿಕಾರಿ ಮತ್ತು ರಾಜಕಾರಣಿಯ ಲವ್​ ಸ್ಟೋರಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eight =
Remember me
