ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ವೇಳೆ ನಡೆದ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಂಕಿತ್ ಶರ್ಮಾ ಅವರ ಹತ್ಯೆಗೂ ಮುನ್ನ ಆ ದುಷ್ಕರ್ಮಿಗಳು ನಡೆಸಿದ ಪೈಶಾಚಿಕ ಕೃತ್ಯದ ವಿಚಾರ ಬೆಳಕಿಗೆ ಬಂದಿದೆ. ಆ ವಿಚಾರ ಕೇಳಿದರೆ ಎಂಥವರ ಮೈಯಲ್ಲೂ ಒಮ್ಮೆ ನಡುಕ ಹುಟ್ಟದೇ ಇರದು.
ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಆರೋಪಿಯೊಬ್ಬನನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಸಲ್ಮಾನ್ ಎಂದು ಗುರುತಿಸಲಾಗಿದೆ. ಈತ ಸಲ್ಮಾನ್ ಹೆಸರಿನ ಹೊರತಾಗಿ ನನ್ಹೇ, ಹಸೀನ್​, ಮೊಮಿನ್​, ಮುಲ್ಲಾ ಎಂಬಿತ್ಯಾದಿ ಹೆಸರುಗಳಿಂದಲೂ ಸಮಾಜದಲ್ಲಿ ಜನರೊಂದಿಗೆ ಒಡನಾಟ ನಡೆಸಿದ್ದ.
ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಪ್ರಕಾರ, ಅಂಕಿತ್ ಶರ್ಮಾ ಅವರನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಎಎಪಿಯ ಮಾಜಿ ಕೌನ್ಸಿಲರ್​ ತಾಹೀರ್ ಹುಸೇನ್ ಮನೆಗೆ ಕರೆತರಲಾಗಿತ್ತು. ಅಲ್ಲಿ ಆತನ ಮೇಲೆ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಇದಕ್ಕೂ ಮುನ್ನ ಶರ್ಮಾ ಅವರನ್ನು ದುಷ್ಕರ್ಮಿಗಳು ಬೆತ್ತಲೆ ಮಾಡಿದ್ದರು. ನಂತರ ಅವರ ಮೃತ ಶರೀರವನ್ನು ಚರಂಡಿಗೆ ಎಸೆಯಲಾಗಿತ್ತು. ಹೀಗೆ ಎಸೆಯುವ ಮುನ್ನ, ಗುರುತು ಪತ್ತೆಯಾಗದಂತೆ ನೋಡಿಕೊಳ್ಳಲು ಮೃತದೇಹದ ಮೇಲೆ ಆ್ಯಸಿಡ್ ಸುರಿದಿದ್ದರು. ಒಂದು ದಿನದ ನಂತರ ಅಂಕಿತ್ ಅವರ ಮೃತದೇಹ ಚಾಂದ್​ಬಾಘ್​ ಪ್ರದೇಶದಲ್ಲಿ ಪತ್ತೆಯಾಗಿತ್ತು. ಫಾರೆನ್ಸಿಕ್ ತಜ್ಞರು ಸ್ಥಳದಿಂದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣದಲ್ಲಿ ತಾಹೀರ್ ಹುಸೇನ್​ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಹುಸೇನ್ ಕೋರ್ಟ್ ಎದುರು ಶರಣಾಗಿದ್ದು, ಬಂಧನದಲ್ಲಿದ್ದಾನೆ. (ಏಜೆನ್ಸೀಸ್)
ದೆಹಲಿ ಹಿಂಸಾಚಾರಕ್ಕೆ ವಿದೇಶಿ ಮುಸ್ಲಿಂ ಎನ್​ಜಿಒದ ಹಣಕಾಸು ಸಹಾಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
