ದೆಹಲಿ:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಂಪರ್ ಅವಕಾಶವೊಂದು ತೆರೆದಿದೆ. ಇನ್‌ಸ್ಟಿಟ್ಯೂಟ್ ಆಫ್​ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(ಐಬಿಪಿಎಸ್) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ(RRBs) ಅಧಿಕಾರಿಗಳು ಮತ್ತು ಕಚೇರಿ ಸಹಾಯಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಸುಮಾರು 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜೂ.21ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಇದನ್ನೂ ಓದಿ:ಗಡಿಗ್ರಾಮಗಳ ಅಭಿವೃದ್ಧಿಗೆ ಕ್ರಮ : ಶಾಸಕ ಡಾ.ಮಂತರ್‌ಗೌಡ ಭರವಸೆಸ್ಥಳ:ಭಾರತಾದ್ಯಂತ
ಹುದ್ದೆಯ ವಿವರಕಚೇರಿ ಸಹಾಯಕ (ಮಲ್ಟಿಪರ್ಪಸ್) – 5538ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ)-2685ಆಫೀಸರ್ ಸ್ಕೇಲ್-II (ಕೃಷಿ ಅಧಿಕಾರಿ) – 60ಆಫೀಸರ್‌ಸ್ಕೇಲ್-II (ಮಾರ್ಕೆಟಿಂಗ್ ಆಫೀಸರ್) – 03ಆಫೀಸರ್ ಸ್ಕೇಲ್-II (ಖಜಾನೆ ವ್ಯವಸ್ಥಾಪಕ) – 08ಆಫೀಸರ್ ಸ್ಕೇಲ್-II (ಕಾನೂನು) – 24ಆಫೀಸರ್ ಸ್ಕೇಲ್-II (ಸಿಎ) – 21ಆಫೀಸರ್ ಸ್ಕೇಲ್-II (ಐಟಿ) – 68ಆಫೀಸರ್ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಅಧಿಕಾರಿ) – 332ಆಫೀಸರ್ ಸ್ಕೇಲ್ III – 73ಅರ್ಹತೆಗಳೇನು?ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ಕೋರ್ಸ್ ವ್ಯಾಸಂಗ ಮಾಡಿರಬೇಕು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕಂಪ್ಯೂಟರ್ ಕೆಲಸದ ಬಗ್ಗೆ ಜ್ಞಾನವಿರುವವರಿಗೆ ಆದ್ಯತೆ ನೀಡಲಾಗಿದ್ದು, ಕೆಲವು ಹುದ್ದೆಗಳಿಗೆ ಅನುಭವದ ಅವಶ್ಯಕತೆಯಿದೆ.
ವಯೋಮಿತಿಹುದ್ದೆಗೆ ಅನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ. ಕನಿಷ್ಠ 18, ಗರಿಷ್ಠ 40 ವರ್ಷ ವಯೋಮಿತಿಯ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:ದೆಹಲಿ ಪೊಲೀಸರ ದುರ್ವತನೆ ಖಂಡಿಸಿ ಪ್ರತಿಭಟನೆ : ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಧರಣಿ
ಹುದ್ದೆಗೆ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆ*ಕಚೇರಿ ಸಹಾಯಕ (ಮಲ್ಟಿಪರ್ಪಸ್) ಮತ್ತು ಆಫೀಸರ್ ಸ್ಕೇಲ್-I: ಪೂರ್ವಭಾವಿ ಪರೀಕ್ಷೆ (ಅಬ್ಜೆಕ್ಟಿವ್) ಮತ್ತು ಮುಖ್ಯ ಪರೀಕ್ಷೆ (ಅಬ್ಜೆಕ್ಟಿವ್)*ಆಫೀಸರ್ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಆಫೀಸರ್), ಆಫೀಸರ್ ಸ್ಕೇಲ್-II (ಸ್ಪೆಷಲಿಸ್ಟ್ ಕೇಡರ್), ಆಫೀಸರ್ ಸ್ಕೇಲ್-III: ಏಕ ಹಂತದ ಪರೀಕ್ಷೆ (ಅಬ್ಜೆಕ್ಟಿವ್)*ಸಂದರ್ಶನ – ಅಧಿಕಾರಿಗಳ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ (ಸ್ಕೇಲ್ I,II ಮತ್ತು III)
ಯಾರಿಗೆ ಎಷ್ಟು ಶುಲ್ಕವಿದೆ?ಆಫೀಸರ್ (ಸ್ಕೇಲ್ I, II ಮತ್ತು III), ಎಲ್ಲ ಇತರ ಕಚೇರಿ ಸಹಾಯಕರು (ಮಲ್ಟಿಪರ್ಪಸ್): ಜಿಎಸ್‌ಟಿ ಒಳಗೊಂಡಂತೆ ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು 175 ರೂ. ಹಾಗೂ ಇತರ ಅಭ್ಯರ್ಥಿಗಳು 850 ರೂ.ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಆರಂಭ:01-06-2023ಅರ್ಜಿ ಸಲ್ಲಿಸಲು ಕೊನೇ ದಿನ:21-06-2023ಈ ಹುದ್ದೆಗಳ ವಿವರವಾದ ಮಾಹಿತಿಗಾಗಿwww.ibps.inಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
