ಚಂಡೀಗಢ: ಕಳೆದೆರಡು ದಿನಗಳಿಂದ ಚರ್ಚೆಯಲ್ಲಿರುವ ವಿಷಯ ನೆಟ್‌ಫ್ಲಿಕ್ಸ್ ಸರಣಿಯ ಐಸಿ 814: ಕಂದಹಾರ್ ಹೈಜಾಕ್. ಸರಣಿಯಲ್ಲಿ ಉಗ್ರರ ಹೆಸರನ್ನು ಮರೆಮಾಚಿದ್ದಾರೆ ಎಂಬುದು ವಿವಾದವನ್ನು ಹುಟ್ಟುಹಾಕಿತ್ತು, ಅದಕ್ಕೆ ತಾರ್ತಿಕ ಅಂತ್ಯವನ್ನು ಕಂಡುಕೊಳ್ಳಲಾಗಿದೆ. ಅಂದ್ಹಾಗೆ ನಾವಿಲ್ಲಿ ಆ ಹೈಜಾಕ್​​ನಲ್ಲಿದ್ದ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ವಿಚಾರವನ್ನು ಹೇಳುತ್ತಿದ್ದೇವೆ.
ಇದನ್ನು ಓದಿ:ಸರ್ಜರಿ ವೇಳೆ ತಪ್ಪಾಗಿ ಬೇರೆ ಅಂಗ ಕಟ್​ ಮಾಡಿದ ವೈದ್ಯ; ಮುಂದೇನಾಯ್ತು ನೀವೇ ನೋಡಿ..
1999ರಲ್ಲಿ ನೇಪಾಳದ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಸಂಖ್ಯೆ ಐಸಿ 814 ಹೈಜಾಕ್ ಮಾಡಿದ ಭಯೋತ್ಪಾದಕರು ವಿವಿಧ ಸ್ಥಳಗಳ ಮೂಲಕ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿದ್ದ ವಿಮಾವನದಲ್ಲಿದ್ದ ಮಹಿಳೆಯೊಬ್ಬರು ಆ ಸಮಯದಲ್ಲಿ ಅವರು ಮತ್ತು ಅವರ ಜತೆಗಿದ್ದ ಸಹ ಪ್ರಯಾಣಿಕರು ಅನುಭವಿಸಿದ ಘೋರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಚಂಡೀಗಢದ ಮಾಡರ್ನ್ ಹೌಸಿಂಗ್ ಕಾಂಪ್ಲೆಕ್ಸ್‌ನ ನಿವಾಸಿ ಪೂಜಾ ಕಟಾರಿಯಾ. 1999 ಡಿಸೆಂಬರ್ 9ರಂದು ವಿವಾಹವಾದ ನಂತರ ​ನೇಪಾಳಕ್ಕೆ ಹನಿಮೂನ್​ಗೆ ಹೋಗಿದ್ದರು. ಹೈಜಾಕ್​ ಆದ ವಿಮಾನದಲ್ಲಿ್ದ 26 ನವವಿವಾಹಿತ ದಂಪತಿಗಳಲ್ಲಿ ಇವರು ಒಬ್ಬರು ಎಂದು ಇಂಡಿಯನ್​ ಎಕ್ಸ್​ಪ್ರೆಸ್​​​ ವರದಿ ಮಾಡಿದೆ.
ಮೊದಲಿಗೆ ವಿಮಾನದಲ್ಲಿ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ. ಎಷ್ಟು ಭಯಗೊಂಡಿದ್ದೇವೆ ಆ ಕ್ಷಣಗಳನ್ನು ನಾನು ಇನ್ನೂ ಮರೆಯಲು ಸಾಧ್ಯವಿಲ್ಲ ಎಂದು ಪೂಜಾ ಹೇಳಿದ್ದಾರೆ. ಡಿಸೆಂಬರ್​ 27 ನನ್ನ ಜನ್ಮದಿನವಾಗಿತ್ತು, ಆದ್ದರಿಂದ ಡಿಸೆಂಬರ್​ 26ರಂದು ನಾನು ಅವರ ಬಳಿ ಮನವಿ ಮಾಡಿದೆ. ನಾಳೆ ನನ್ನ ಹುಟ್ಟುಹಬ್ಬ ದಯವಿಟ್ಟು ನಮಗೆ ಮನೆಗೆ ಹೋಗಲು ಬಿಡಿ. ನಾವು ನಿರಪರಾಧಿಗಳು ಎಂದು ಕೇಳಿದೆ. ತಕ್ಷಣವೇ ಅವರು ಧರಿಸಿದ್ದ ಶಾಲನ್ನು ತೆಗೆದು ನನಗೆ ಜನ್ಮದಿನದ ಉಡುಗೊರೆಯಾಗಿ ತೆಗೆದುಕೊಳ್ಳಿ ಎಂದು ಹೇಳಿ ಕೊಟ್ಟರು.
ಅಪಹರಣಕಾರರು ಚೀಫ್​​​, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂಬ ಕೋಡ್ ಹೆಸರುಗಳನ್ನು ಬಳಸಿಕೊಂಡು ಮಾತನಾಡುತ್ತಿದ್ದರು. ಸಂಧಾನದ ನಂತರ ಅಂದಿನ ಬಿಜೆಪಿ ಸರ್ಕಾರವು ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ಬಳಿಕ ಒಂದು ವಾರದ ನಂತರ ಎಲ್ಲಾ ಸಮಸ್ಯೆ ಕೊನೆಗೊಂಡಿತು. ಈ ಮಧ್ಯೆ ವಿಮಾನದಲ್ಲಿದ್ದ 179 ಪ್ರಯಾಣಿಕರಲ್ಲಿ ಒಬ್ಬರು ಮೃತಪಟ್ಟಿದ್ದರು ಎಂದು ಅವರು ತಿಳಿಸಿದರು.
ನಾವು ಅಲ್ಲಿಂದ ಹೊರಡುವ ಮೊದಲು ಉಗ್ರರೆಲ್ಲಾ ತಮ್ಮ ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದು ಘೋಷಿಸಿದರು. ಬಳಿಕ ಅವರು ಗಿಫ್ಟ್​​ ಆಗಿ ನೀಡಿದ ಶಾಲಿನ ಮೇಲೆ ಬರೆಯುವುದಾಗಿ ಹೇಳಿ, ನನ್ನ ಪ್ರೀತಿಯ ಸಹೋದರಿ ಮತ್ತು ಅವಳ ಸುಂದರ ಪತಿಗೆ… ಬರ್ಗರ್ 30/12/99 ಎಂದು ಬರೆದರು ಎಂದು ಹೇಳಿದರು. ಇದನ್ನು ನೋಡಿ ಇಂದಿಗೂ ಇವರೆಲ್ಲಾ ನನ್ನನ್ನು ಅಣಕಿಸುತ್ತಾರೆ. ಆದರೆ ನಾನು ಈ ಶಾಲನ್ನು ನಮ್ಮ ಎರಡನೇ ಜನ್ಮದ ಸಂಕೇತವಾಗಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಘಟನೆ ನಡೆದು 10 ವರ್ಷಗಳಾದರು ವಿಮಾನ ಹತ್ತಲು ಇಂದಿಗೂ ಕಟಾರಿಯಾ ಭಯಪಡುತ್ತಾರೆ. ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಪ್ರೀತಿಪಾತ್ರರ ಬಳಿಗೆ ಹಿಂತಿರುಗುತ್ತಿವೋ ಅಥವಾ ಇಲ್ಲವೋ ಎಂದು ತಿಳಿಯದಿದ್ದಾಗ ಆಗುವ ಭಾವನೆ ಭಯಾನಕವಾಗಿರುತ್ತದೆ. ಸುರಕ್ಷಿತವಾಗಿ ಮನೆ ತಲುಪಿದರು 7 ವರ್ಷಗಳ ಕಾಲ ನನಗೆ ಅದನ್ನು ಮರೆಯಲು ಸಾಧ್ಯವಾಗಲಿಲ್ಲ. ಇಂದಿಗೂ ಮಕ್ಕಳು ವಿಮಾನದಲ್ಲಿ ಹೋಗುತ್ತೇವೆ ಎಂದರೆ ಜಾಗರೂಕರಾಗಿರಿ ಎಂದು ತಿಳಿಸುತ್ತೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​​)
ಎಲ್ಲರ ಟಾರ್ಗೆಟ್​ ನಾನೇ ಆಗಿದ್ದೇನೆ ಎಂದಿದ್ದೇಕೆ ಬಿಟೌನ್​ ಕ್ವೀನ್​ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 10 =
Remember me
