ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ಎಐಇಇಎ ಪದವಿ ಪರೀಕ್ಷೆಯನ್ನು ಮುಂದೂಡಿದ್ದು, ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪರೀಕ್ಷೆಗಳಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಮೊದಲು ಸೆಪ್ಟೆಂಬರ್ 7 ಮತ್ತು 8 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಈಗ ಕ್ರಮವಾಗಿ ಸೆಪ್ಟೆಂಬರ್ 16, 17 ಮತ್ತು 22 ರಂದು ನಡೆಸಲಾಗುವುದು. ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪರೀಕ್ಷೆಗಳು ಈಗ ಸೆಪ್ಟೆಂಬರ್ 23 ರಂದು ನಡೆಯಲಿವೆ.ಐಸಿಎಆರ್ ಪರೀಕ್ಷೆಯ ಇತರ ವಿವರಗಳೊಂದಿಗೆ ಪ್ರವೇಶ ಪತ್ರವನ್ನು ಪರೀಕ್ಷೆಗೆ 10 ದಿನಗಳ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಎನ್‌ಟಿಎ ದೃಢಪಡಿಸಿದೆ. ಹೀಗಾಗಿ, ಸೆಪ್ಟೆಂಬರ್ 7, ಸೋಮವಾರ ಐಸಿಎಆರ್ ಪದವಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ:ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್​ ಜನರಲ್​ ಆಗಿ ಜ್ಯುಡಿತ್​ ರೇವಿನ್ ನೇಮಕ
ಎನ್‌ಟಿಎ ನೀಡಿದ ವಿವರಗಳ ಪ್ರಕಾರ, ಪರೀಕ್ಷೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಪರೀಕ್ಷೆಯ ಅವಧಿ 150 ನಿಮಿಷಗಳು. ಒಟ್ಟು 150 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಮತ್ತು ಪ್ರತಿ ಸರಿಯಾಧ ಪ್ರಶ್ನೆಗೆ 4 ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಳೆಯಲಾಗುತ್ತದೆ. ಪರೀಕ್ಷೆಯ ಮಾಧ್ಯಮ ಹಿಂದಿ ಮತ್ತು ಇಂಗ್ಲಿಷ್ ಆಗಿದೆ.ಕೃಷಿ ವಿವಿಗಳಲ್ಲಿ ಕೃಷಿ ಮತ್ತು ಸಂಬಂಧಿತ ವಿಜ್ಞಾನ (ಪಶುವೈದ್ಯಕೀಯ ವಿಜ್ಞಾನಗಳನ್ನು ಹೊರತುಪಡಿಸಿ) ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಎಐಇಇಎ ನಡೆಸಲಾಗುತ್ತದೆ. ಪರೀಕ್ಷೆಯನ್ನು ದೇಶದ 178 ನಗರಗಳಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಎನ್‌ಟಿಎ ಐಸಿಎಆರ್‌ನ ಅಧಿಕೃತ ಸೈಟ್‌ icar.nta.nic.in ಗೆ ಭೇಟಿ ನೀಡಬಹುದು.
ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
