ಅಹಮದಾಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ತಮ್ಮ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸಕ್ಕೆಂದು ಇಂದು ಆಗಮಿಸಿದ್ದಾರೆ. ಇಂದು ಬೆಳಗ್ಗೆ ಅಹಮದಾಬಾದ್​ನ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಮೊಟೆರಾ ಸ್ಟೇಡಿಯಂನಲ್ಲಿ ನಡೆದ “ನಮಸ್ತೆ ಟ್ರಂಪ್​” ಕಾರ್ಯಕ್ರಮವನ್ನು ಉದ್ದೇಶಿಸಿ ಟ್ರಂಪ್​ ಮಾತನಾಡಿದರು. ಭಾಷಣದ ವೇಳೆ ಟ್ರಂಪ್​ ಆಡಿದ ಮಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಒಳಗಾಗಿದೆ.
ಇಂದು ಬೆಳಗ್ಗೆ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಬಂದಿಳಿದ ಟ್ರಂಪ್​ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಟ್ರಂಪ್​ ಜತೆಯಲ್ಲಿ ಅಮೆರಿಕ ನಿಯೋಗವು ಆಗಮಿಸಿತ್ತು. ಬಳಿಕ ಅದ್ಧೂರಿ ರೋಡ್​ ಶೋ ಮೂಲಕ ಗಾಂಧಿಯ ಸಬರಮತಿ ಆಶ್ರಮಕ್ಕೆ ತೆರಳಿ, ಅಲ್ಲಿಂದ ಮೊಟೆರಾ ಕ್ರೀಡಾಂಗಣಕ್ಕೆ ಆಗಮಿಸಿದರು.
ಭಾಷಣ ಆರಂಭಿಸಿದ ಟ್ರಂಪ್ ಮೊದಲಿಗೆ ಭಾರತೀಯರಿಗೆ ಧನ್ಯವಾದ ಹೇಳಿದರು. ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಹಾಗೂ ಭಾರತವನ್ನು ಕೊಂಡಾಡಿದರು. ಬಾಲಿವುಡ್​ ಸಿನಿಮಾಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​​ ಹಾಗೂ ಟೀಮ್​ ಇಂಡಿಯಾ ಯಶಸ್ವಿ ನಾಯಕ ವಿರಾಟ್​ ಕೊಹ್ಲಿಯನ್ನು ವಿಶ್ವಶ್ರೇಷ್ಠ ಆಟಗಾರರು ಎಂದು ಬಣ್ಣಿಸಿದರು.
ಆದರೂ, ಸಚಿನ್​ ಹೆಸರು ಉಲ್ಲೇಖಿಸಿದ ಟ್ರಂಪ್​ ಕುರಿತು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅದಕ್ಕೆ ಕಾರಣ ಸಚಿನ್​ ಹೆಸರು ಉಚ್ಛರಿಸಿದ ರೀತಿ. ಸಚಿನ್​ ಎಂದು ಕರೆಯುವ ಬದಲು ಸೂಚಿನ್​ ಎಂದು ಉಚ್ಛರಿಸಿದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಗೆಬುಗ್ಗೆಯನ್ನು ಹರಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಕೂಡ ತನ್ನ ಟ್ವಿಟರ್​ನಲ್ಲಿ ವಿನೂತನವಾಗಿ ಟ್ವೀಟ್​ ಮಾಡಿದೆ.
ಸ್ಯಾಚ್​, ಸಚ್​, ಸುಚ್​ ಮತ್ತು ಸೂಚ್ ಎಂದು ಬರೆದು ಯಾರಿಗಾದರೂ ತಿಳಿದಿದೆಯೇ ಎಂದು ಐಸಿಸಿ ಪ್ರಶ್ನಿಸಿದೆ.​ ಅಲ್ಲದೆ, ವಿಡಿಯೋದಲ್ಲಿ ಸಚಿನ್​ ಅವರ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಸಚಿನ್​​ ಹೆಸರನ್ನು ಡಿಲೀಟ್​ ಮಾಡಿ ಸೂ ಚಿನ್​ ಎಂದು ಬರೆದು ಸೇವ್​ ಮಾಡುವ ರೀತಿ ನಗೆಚಟಾಕಿ ಹಾರಿಸಿದೆ. ಈ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆಲವೇ ಕ್ಷಣಗಳಲ್ಲಿ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಕೂಡ ಟ್ರೋಲ್​ ಮೂಲಕ ಹಾಸ್ಯವನ್ನು ಬೆರೆಸಿದ್ದಾರೆ.(ಏಜೆನ್ಸೀಸ್​)
https://twitter.com/LoyalSachinFan/status/1231865089436852224?s=20
Sach-Such-Satch-Sutch-Sooch-
Anyone know?pic.twitter.com/nkD1ynQXmF
— ICC (@ICC)February 24, 2020

https://twitter.com/Abey0saale/status/1231890154689880064?s=20
https://twitter.com/garry935/status/1231890622350548992?s=20
pic.twitter.com/iH7JMqqIAq
— ma7ur (@Imma7ur)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
