ನವದೆಹಲಿ:ಸೋಂಕು ಹರಡುವಿಕೆಯ ಕೇಂದ್ರಬಿಂದುಗಳು ಎಂದು ಗುರುತಿಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ರಕ್ತಪರೀಕ್ಷೆ (ಆ್ಯಂಟಿಬಾಡಿ ಟೆಸ್ಟ್ಸ್​) ಮಾಡಿದರೆ ಸಾಮುದಾಯಿಕ ಹಬ್ಬುವಿಕೆಯನ್ನು ತಡೆಗಟ್ಟಲು ಅನುಕೂಲವಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸರ್ಕಾರಕ್ಕೆ ಸಲಹೆ ನೀಡಿದೆ.
ಹೀಗೆ ಮಾಡುವುದರಿಂದ, ಕರೊನಾ ವೈರಸ್​ ಸೋಂಕು ತಗುಲಿದ್ದು, ಆರಂಭಿಕ ಹಂತದಲ್ಲಿದ್ದು, ಲಕ್ಷಣಗಳು ಗೋಚರಿಸದೇ ಇರುವವರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಐಸಿಎಂಆರ್​ ಅಭಿಪ್ರಾಯಪಟ್ಟಿದೆ.
ಸದ್ಯ ಕೋವಿಡ್​ 19 ಸೋಂಕು ಪತ್ತೆಗೆ ಪಾಲಿಮರೇಸ್​ ಚೈನ್​ ರಿಯಾಕ್ಷನ್​ (ಪಿಸಿಆರ್​) ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಗೆ ಕನಿಷ್ಠ 4ರಿಂದ 5 ತಾಸು ಬೇಕಾಗುತ್ತದೆ. ಅದೇ ರಕ್ತಪರೀಕ್ಷೆ ಮಾಡಿದರೆ 15ರಿಂದ 30 ನಿಮಿಷಗಳಲ್ಲಿ ದೇಹದಲ್ಲಿ ರೋಗನಿರೋಧಕಗಳು ಕ್ಷೀಣಿಸುತ್ತಿರುವ ಬಗ್ಗೆ ತಿಳಿಯುತ್ತದೆ ಎಂದು ವಿವರಿಸಿದೆ.
ರಕ್ತಪರೀಕ್ಷೆಯಲ್ಲಿ ರೋಗನಿರೋಧಕಗಳು ಕ್ಷೀಣಿಸುತ್ತಿರುವ ಸುಳಿವು ಸಿಕ್ಕಲ್ಲಿ, ಆ ವ್ಯಕ್ತಿಯ ಗಂಟಲ ದ್ರವವನ್ನು ಪಾಲಿಮೆರೇಸ್​ ಚೈನ್​ ರಿಯಾಕ್ಷನ್​ (ಪಿಸಿಆರ್​) ಪರೀಕ್ಷೆ ಮಾಡಿ, ಸೋಂಕು ತಗುಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ತನ್ಮೂಲಕ ಅವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದೆ.
ತಬ್ಲಿಘಿ ಜಮಾತ್​ನ 9 ಸಾವಿರ ಕಾರ್ಯಕರ್ತರ ಕ್ವಾರಂಟೈನ್!: ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
