ನವದೆಹಲಿ:ಪತಂಜಲಿ ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿರುವ ಕರೊನಾ ನಿವಾರಕ ಔಷಧದ ಬಗ್ಗೆ ಪ್ರತಿಕ್ರಿಯಿಸಲು ಆಯುಷ್​ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗಳು ಹಿಂದೇಟು ಹಾಕಿವೆ.
ಪತಂಜಲಿ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ಕರೊನಿಲ್​ ಮಾತ್ರೆ ಕೋವಿಡ್​-19 ಕಾಯಿಲೆಯನ್ನು ಶೇ.100 ಗುಣಪಡಿಸಲಿದೆ ಎಂದು ಯೋಗಗುರು ಬಾಬಾ ರಾಮ್​ದೇವ್​ ಹೇಳಿದ್ದರು.
ಇದನ್ನೂ ಓದಿ;20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ
ಕರೊನಿಲ್​ ಔಷಧವನ್ನು ರೋಗಿಗಳ ಮೇಲೆ ಪ್ರಯೋಗಿಸಲಾಗಿದ್ದು, ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆಯ ಕೇಂದ್ರ ಕಚೇರಿ ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಶೇ.69 ರೋಗಿಗಳು ಮುರು ದಿನದಲ್ಲಿ ಗುಣ ಹೊಂದಿದರೆ, ಏಳು ದಿನಗಳಲ್ಲಿ ಎಲ್ಲ ರೋಗಿಗಳು ಆರೋಗ್ಯವಂತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜೈಪುರ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಸಹಯೋಗದಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದ್ದರು.
ಆದರೆ, ಕೋವಿಡ್​ ಚಿಕಿತ್ಸೆ, ಲಸಿಕೆ, ಔಷಧ ಮತ್ತಿತರ ಆರೋಗ್ಯ ವ್ಯವಸ್ಥೆ ಕುರಿತ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಉನ್ನತ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ಕರೊನಿಲ್​ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆಯುರ್ವೇದ ಔಷಧಗಳ ಬಗ್ಗೆ ನಾವು ಪರಿಶೀಲನೆ ನಡೆಸುವುದಿಲ್ಲ. ಈ ಕಾರ್ಯವನ್ನು ಆಯುಷ್​ ಇಲಾಖೆ ನಡೆಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ;ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!
ಆಯುಷ್​ ಇಲಾಖೆಯನ್ನು ಪ್ರಶ್ನಿಸಿದಾಗ ಮೊದಲು ಐಸಿಎಂಆರ್​ನತ್ತ ಬೊಟ್ಟು ಮಾಡಿತ್ತು. ಆದರೆ, ಐಸಿಎಂಆರ್​ ಪ್ರತಿಕ್ರಿಯೆ ತಿಳಿದ ಬಳಿಕ, ಆಯುರ್ವೇದ ಔಷಧಗಳ ಉತ್ಪಾದನೆ, ಔಷಧ ಸಂಸ್ಥೆಗೆ ಪರವಾನಗಿ ಮೊದಲಾವುಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ನುಣುಚಿಕೊಂಡಿದೆ. ಪತಂಜಲಿ ಸಂಸ್ಥೆ ಹೇಳುವ ಪ್ರಕಾರ ಕರೊನಿಲ್​ ಔಷಧ ಪರವಾನಗಿ ಪಡೆದುಕೊಂಡಿದೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
