ನವದೆಹಲಿ:ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ನಡೆಯುತ್ತಿದ್ದು ಬಹಳಷ್ಟು ಮಂದಿ ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ. ಹಲವರು ಎರಡೂ ಡೋಸ್ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಒಂದು ಡೋಸ್ ಮಾತ್ರ ತೆಗೆದುಕೊಂಡಿದ್ದು, ಎರಡನೇ ಡೋಸ್ ಪಡೆಯಲು ದಿನಗಣನೆಯಲ್ಲಿದ್ದಾರೆ. ಅದಾಗ್ಯೂ ಇನ್ನೂ ಲಸಿಕೆ ಪಡೆಯದವರು ಕೂಡ ಇದ್ದಾರೆ. ಅಂಥವರು ತಿಳಿದುಕೊಂಡಿರಲೇಬೇಕಾದ ಸಂಗತಿ ಇದು.
ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಕರೊನಾ ಲಸಿಕೆ ಸೋಂಕು ತಗುಲದಂತೆ ಸಂಪೂರ್ಣ ತಡೆಯುವುದಿಲ್ಲ ನಿಜ. ಆದರೆ ಲಸಿಕೆ ಪಡೆದುಕೊಂಡಿದ್ದರೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಹಾಗೂ ಒಂದುವೇಳೆ ಸೋಂಕು ತಗುಲಿದರೂ ಪರಿಸ್ಥಿತಿ ವಿಕೋಪ ತೆರಳುವ ಇಲ್ಲವೇ ಸೋಂಕಿನಿಂದಾಗಿ ಸಾಯುವ ಸಾಧ್ಯತೆ ಅತ್ಯಂತ ಕಡಿಮೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ನಡೆಯುತ್ತಿದ್ದು, ಅಂಥದ್ದೇ ಮತ್ತೊಂದು ಅಧ್ಯಯನದ ವರದಿ ಹೊರಬಿದ್ದಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ಇಂಡಿಯನ್​ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​- ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ (ಐಸಿಎಂಆರ್​-ಎನ್​ಐಇ) ಈ ಅಧ್ಯಯನವನ್ನು ಕೈಗೊಂಡಿದೆ. ಇದಕ್ಕಾಗಿ ಕರೊನಾ ವಾರಿಯರ್ ಆಗಿದ್ದ ತಮಿಳುನಾಡು ಪೊಲೀಸರ ಆಸ್ಪತ್ರೆ ದಾಖಲಾತಿ ವಿವರಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ. ಆ ಮೂಲಕ ಕರೊನಾ ಸೋಂಕಿತರು ಸಾಯುವ ಸಾಧ್ಯತೆ ಎಷ್ಟು ಎಂಬುದನ್ನು ಕಂಡುಹಿಡಿಯಲಾಗಿದೆ.
ಈ ವರ್ಷದ ಫೆ. 1ರಿಂದ ಮೇ 14ರ ನಡುವಿನ ಅವಧಿಯಲ್ಲಿನ ಅಂಕಿ-ಅಂಶಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕರೊನಾ ಸೋಂಕಿಗೆ ಒಳಗಾಗಿರು ತಮಿಳುನಾಡಿನ 1,17,524 ಪೊಲೀಸರನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದ್ದು, ಆ ಪೈಕಿ 32,792 ಮಂದಿ ಒಂದು ಡೋಸ್ ಲಸಿಕೆ, 67,673 ಮಂದಿ 2 ಡೋಸ್ ಲಸಿಕೆ ಪಡೆದಿದ್ದರೆ, 17,059 ಮಂದಿ ಲಸಿಕೆ ಪಡೆದಿರಲಿಲ್ಲ.
ಇದನ್ನೂ ಓದಿ:ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…
ಅಧ್ಯಯನಕ್ಕೆ ಪರಿಗಣಿಸಲಾಗಿದ್ದ 1.17 ಲಕ್ಷಕ್ಕೂ ಅಧಿಕ ಪೊಲೀಸರಲ್ಲಿ ಏ.13ರಿಂದ ಮೇ 14ರ ಅವಧಿಯಲ್ಲಿ 31 ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದರು. ಆ ಪೈಕಿ ನಾಲ್ವರು ಎರಡೂ ಡೋಸ್ ಲಸಿಕೆ ಪಡೆದಿದ್ದರೆ, 7 ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದರು. ಆದರೆ 20 ಮಂದಿ ಲಸಿಕೆ ಪಡೆದಿರಲಿಲ್ಲ. ಈ ಅಂಕಿ-ಅಂಶಗಳನ್ನು ಆಧರಿಸಿ ಅಧ್ಯಯನ ನಡೆಸಿರುವ ತಂಡ, ಕರೊನಾ ಸೋಂಕಿತರ ಸಾವು ಹಾಗೂ ಲಸಿಕೆ ಕುರಿತು ಒಂದು ನಿರ್ಣಯಕ್ಕೆ ಬಂದಿದೆ.
ಅದೇನೆಂದರೆ, ಕರೊನಾ ಸೋಂಕಿತರಲ್ಲಿ ಕೋವಿಡ್ ಲಸಿಕೆ ಪಡೆಯದವರಿಗಿಂತ ಕೋವಿಡ್ ಲಸಿಕೆ ಪಡೆದವರು ಸೋಂಕಿನಿಂದಾಗಿ ಸಾಯುವ ಸಾಧ್ಯತೆ ತೀರಾ ಕಡಿಮೆ. ಲಸಿಕೆ ಪಡೆದ ಅಥವಾ ಪಡೆಯದವರಿಗೆ ಸೋಂಕಿನಿಂದಾಗಿ ಸಾವಿರುವ ಸಾಧ್ಯತೆ ಸಾವಿರಕ್ಕೆಷ್ಟು ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಲಸಿಕೆ ಪಡೆಯದಿದ್ದವರ ಪೈಕಿ ಸಾವಿರಕ್ಕೆ 1.17 ಹಾಗೂ ಒಂದು ಡೋಸ್​ ಲಸಿಕೆ ಪಡೆದಿದ್ದವರ ಪೈಕಿ ಸಾವಿರಕ್ಕೆ 0.21 ಎಂಬಂತೆ ಪೊಲೀಸರು ಸತ್ತಿದ್ದರೆ, ಎರಡೂ ಡೋಸ್​ ಲಸಿಕೆ ಪಡೆದಿದ್ದವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ 0.06 ಎಂದು ಈ ಅಧ್ಯಯನ ಹೇಳಿದೆ. ಇನ್ನು ಡೋಸ್​ ಪ್ರಕಾರ, ಒಂದು ಡೋಸ್ ಪಡೆದವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ 0.18 ಇದ್ದರೆ, ಎರಡೂ ಡೋಸ್ ಪಡೆದಿದ್ದವರಲ್ಲಿ ಸಾವಿನ ಪ್ರಮಾಣ 0.05 ಇದೆ ಎಂದೂ ಅಧ್ಯಯನ ಕೈಗೊಂಡವರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!
ಒಟ್ಟಾರೆಯಾಗಿ ಕೋವಿಡ್ ಲಸಿಕೆ ಪಡೆಯುವುದರಿಂದ ಸೋಂಕಿನಿಂದಾಗಿ ಸಾಯುವುದನ್ನು ಬಹುತೇಕ ತಡೆಯಬಹುದು ಎಂಬುದು ಈ ಅಧ್ಯಯನ ಬಹುಮುಖ್ಯ ಅಂಶ. ಒಂದು ಡೋಸ್ ಲಸಿಕೆ ಪಡೆದಿದ್ದು, ಸೋಂಕಿಗೆ ಒಳಗಾಗಿದ್ದರೆ ಅಂಥವರು ಸೋಂಕಿನಿಂದಾಗಿ ಸಾಯುವುದನ್ನು ಶೇ. 82 ಹಾಗೂ ಎರಡೂ ಡೋಸ್ ಲಸಿಕೆ ಪಡೆದೂ ಸೋಂಕಿಗೆ ಒಳಗಾಗಿದ್ದರೆ ಅಂಥವರು ಸೋಂಕಿನಿಂದಾಗಿ ಸಾಯುವುದನ್ನು ಶೇ. 95ರಷ್ಟು ತಡೆಯಬಹುದು ಎಂದು ಐಸಿಎಂಆರ್​-ಎನ್​ಐಇ ಅಧ್ಯಯನ ಪ್ರತಿಪಾದಿಸಿದೆ. (ಏಜೆನ್ಸೀಸ್​)
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

ಕರೊನಾ ವಿಷಯದಲ್ಲಿ ಸದ್ಯ ಇವರೇ ಆತಂಕಕಾರಿ: ಆರೋಗ್ಯ ಪರಿಣತರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twelve =
Remember me
