ಬೆಂಗಳೂರು:ಭಾರತದಲ್ಲೇ ತಯಾರಿಸಲಾಗಿರುವ ಕರೊನಾ ನಿಯಂತ್ರಣ ಲಸಿಕೆಯನ್ನು ಬೆಳಗಾವಿಯ ಕೋವಿಡ್​ ಆಸ್ಪತ್ರೆ ಸೇರಿ 12 ವೈದ್ಯಕೀಯ ಸಂಸ್ಥೆಗಳ ಮೇಲೆ ಪ್ರಯೋಗಿಸಲಾಗುತ್ತಿದೆ.
ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ಸಹಯೋಗದಲ್ಲಿ ಉತ್ಪಾದಿಸಿರುವ ಈ ಲಸಿಕೆಯನ್ನು ಆಗಸ್ಟ್​ 15ರ ವೇಳೆಗೆ ರೋಗಿಗಳ ಬಳಕೆಗೆ ಬಿಡುಗಡೆಗೊಳಿಸುವ ಉದ್ದೇಶ ಹೊಂದಲಾಗಿದೆ.
ಇದನ್ನೂ ಓದಿ;ಗ್ರೀನ್​ ಟೀ, ಬ್ಲ್ಯಾಕ್ ಟೀ ಕುಡಿಯುವುದರಿಂದಲೂ ದೂರವಿಡಬಹುದು ಕರೊನಾ; ದೆಹಲಿ ಐಐಟಿ ತಂಡದಿಂದ ಸಂಶೋಧನೆ
ದೇಶದ ಮೊದಲ ಕರೊನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿರುವ ಈ ಔಷಧದ ಕ್ಲಿನಿಕಲ್​ ಟ್ರಯಲ್​ ಒಡಿಶಾದ ಭುವನೇಶ್ವರದಲ್ಲಿರುವ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಹಾಗೂ ಎಸ್​ಯುಎಂ ಆಸ್ಪತ್ರೆಯಲ್ಲಿಯೂ ನಡೆಯಲಿದೆ.
ಇದಲ್ಲದೇ, ಆಂಧ್ರದ ವಿಶಾಖಪಟ್ಟಣಂ, ಹರಿಯಾಣದ ರೋಹ್ಟಕ್​, ನವದೆಹಲಿ, ಬಿಹಾರದ ಪಟನಾ, ಮಹಾರಾಷ್ಟ್ರದ ನಾಗಪುರ, ಉತ್ತರಪ್ರದೇಶದ ಗೋರಖ್​ಪುರ, ಆರ್ಯನಗರ, ಕಾನ್ಪುರ್​, ತಮಿಳುನಾಡಿನ ಕಟ್ಟಾಂಕುಲತ್ತೂರ್​, ಹೈದರಾಬಾದ್​ ಹಾಗೂ ಗೋವಾದಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಯಲಿದೆ.
ಇದನ್ನೂ ಓದಿ;ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!
ಕ್ಲಿನಿಕಲ್​ ಟ್ರಯಲ್​ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಅನುಮತಿ ಪ್ರಕ್ರಿಯೆಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಆಯಾ ರಾಜ್ಯ ಹಾಗೂ ಇಲಾಖೆಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
