ನವದೆಹಲಿ:ಭಾರತೀಯ ಶಾಲಾ ಸರ್ಟಿಫಿಕೆಟ್ ಪರೀಕ್ಷಾ ಮಂಡಳಿಯ (ಸಿಐಎಸ್​ಸಿಇ) 12ನೇ ತರಗತಿ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, 18 ವಿದ್ಯಾರ್ಥಿಗಳು ಶೇ.99.75 ಅಂಕಗಳೊಂದಿಗೆ ಟಾಪರ್ ಸ್ಥಾನವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ 154 ವಿದ್ಯಾರ್ಥಿಗಳು ಟಾಪ್ ಮೂರನೇ ಸ್ಥಾನ ಪಡೆದಿದ್ದು, ಇದರಲ್ಲಿ ಕರ್ನಾಟಕದ 15 ವಿದ್ಯಾರ್ಥಿಗಳು ಇದ್ದಾರೆ. 58 ವಿದ್ಯಾರ್ಥಿಗಳು ಎರಡನೇ ರ್ಯಾಂಕ್ (ಶೇ. 99.50) ಹಾಗೂ 78 ಅಭ್ಯರ್ಥಿಗಳು ಮೂರನೇ ರ್ಯಾಂಕ್ (ಶೇ. 99.25) ಪಡೆದಿದ್ದಾರೆ. ಶೇ.99.52 ಅಭ್ಯರ್ಥಿಗಳು ಉತ್ತೀರ್ಣದ್ದಾರೆ. ಪ್ರತಿಶತ ಉತ್ತೀರ್ಣ ಪ್ರಮಾಣದಲ್ಲಿ ಬಾಲಕಿಯರಿಗಿಂತ ಬಾಲಕಿ ಯರು ಅಲ್ಪ ಅಂತರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಮಂಡಳಿಯು ಇದೇ ಮೊದಲ ಬಾರಿಗೆ ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಸಿತ್ತು ಎಂದು ಅದರ ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
ಪ್ರಥಮ ಸೆಮಿಸ್ಟರ್​ನಲ್ಲಿ ರೇಖಾಗಣಿತ, ಮೆಕ್ಯಾನಿಕಲ್ ಡ್ರಾಯಿಂಗ್ ಮತ್ತು ಕಲಾ ವಿಷಯಗಳನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯಗಳ ಅಂಕಗಳನ್ನು ಅರ್ಧದಷ್ಟು ಕಡಿತಗೊಳಿಸಲಾಗಿದೆ. ಆ ಅಂಕಗಳನ್ನು ದ್ವಿತೀಯ ಸೆಮಿಸ್ಟರ್ ಮತ್ತು ಪ್ರಾಕ್ಟಿಕಲ್/ಪ್ರೊಜೆಕ್ಟ್ ಅಂಕಗಳಿಗೆ ಸೇರಿಸಿ ಅಂಕ ಲೆಕ್ಕಾಚಾರ ಮಾಡಲಾಗಿದೆ ಎಂದು ಅರಾಥೂನ್ ವಿವರಿಸಿದ್ದಾರೆ.
ಶೇ.99.72 ಫಲಿತಾಂಶ:ರಾಜ್ಯದಿಂದ 2169 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ಅನುತ್ತೀಣರಾಗಿದ್ದು, ಶೇ.99.72 ಫಲಿತಾಂಶ ದೊರೆತಿದೆ. ಬಾಲಕಿಯರು ಶೇ.99.83 ಮತ್ತು ಬಾಲಕರು ಶೇ.99.60 ಗಳಿಸಿದ್ದಾರೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳುhttp://www.cisce.orgಭೇಟಿ ನೀಡಬಹುದು.
ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಶಾಲೆಯ ಸನ ಜೋಸ್, ಕ್ರೖೆಸ್ಟ್ ಅಕಾಡೆಮಿಯ ನಿವೇದಿತಾ ಎಸ್.ವಾರಿಯರ್, ಸೇಂಟ್ ಫ್ರಾನ್ಸಿಸ್ ಶಾಲೆಯ ಸ್ನೇಹಾ ಎನ್.ಶಾಸ್ತ್ರಿ ಶೇ.99.50 ಫಲಿತಾಂಶ ಪಡೆಯುವ ಮೂಲಕ ರಾಷ್ಟ್ರೀಯ ಹಂತದಲ್ಲಿ ಟಾಪರ್​ಗಳಾಗಿದ್ದಾರೆ. ಆದಿತ್ಯ ಚಂದನ, ಕಾರ್ತಿಕ ಕಣ್ಣನ್, ಸೈಯದ್ ವಜೀದ್ ಹುಸೇನ್, ಜೈವೀರ್ ಸಂದೀಪ್ ಚಾಬ್ರಿಯಾ, ವೇದಾ ಮೆನನ್, ಸುರಭಿ, ಹಿತಾ ಚಿಟ್ಲೂರು, ಆದಿತ್ಯ ನಿಶಾಂತ್ ಶೇ.99.25 ಅಂಕ ಗಳಿಸಿದ್ದಾರೆ. ಮೃತಿಕಾ ಭಾಸ್ಕರ್, ಟಿ.ಜಿ. ನವ್ಯಾ, ಮಾನಸ ನಿಲೇಶ್, ಅಕ್ಷರ್ ಧೃವ್ ಕೃಷ್ಣನ್ ಶೇ.99 ಅಂಕ ಪಡೆದಿದ್ದಾರೆ.
ಚಿಲ್ರೆ ವಿಷ್ಯಕ್ಕೆ ಕೆಎಸ್​ಆರ್​ಟಿಸಿ ಸಿಬ್ಬಂದಿ-ಪ್ರಯಾಣಿಕರ ಹೊಡೆದಾಟ: ಬಸ್​ ಸಂಚಾರವೇ ಸ್ಥಗಿತ, ಜನರ ಪರದಾಟ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
