ಬೆಂಗಳೂರು:ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ನಡೆಸುವ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್- ಐಸಿಎಸ್​ಇ (10ನೇ ತರಗತಿ) ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ರಾಜ್ಯದ ಶೇ.99.99 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 375 ಶಾಲೆಯ 23,293 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. 11,793 ಬಾಲಕರು ಹಾಗೂ 11,500 ಬಾಲಕಿಯರು ತೇರ್ಗಡೆಯಾಗಿದ್ದಾರೆ.
ಟಾಪರ್​ಗಳು:ಬೆಂಗಳೂರಿನ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯ ಎಸ್.ಸಂಧ್ಯಾ, ಬೆಥನಿ ಹೈಸ್ಕೂಲ್​ನ ನಿಹಾರಾ ಮರಿಯಮ್ ಒಮ್ಮೇನ್, ಎಂಇಎಸ್ ಕಿಶೋರ ಕೇಂದ್ರ ಪಬ್ಲಿಕ್ ಶಾಲೆಯ ಬಿ.ಎನ್. ವಿಧಾತ್ರಿ ಹಾಗೂ ಟ್ರಿಯೊ ವರ್ಲ್ಡ್ ಸ್ಕೂಲ್​ನ ಆದಿ ಕಿಶೋರ್ ಶೇ.99.60 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲಿಗರೆನಿಸಿದ್ದಾರೆ.
ನಾಲ್ವರಿಗೆ ಅಗ್ರಸ್ಥಾನ:ದೇಶಾದ್ಯಂತ ಐಸಿಎಸ್​ಇ ಪರೀಕ್ಷೆಯಲ್ಲಿ ಶೇ.99.97ರಷ್ಟು ಫಲಿತಾಂಶ ದಾಖಲಾಗಿದೆ. ಈ ವರ್ಷ ಉತ್ತರಪ್ರದೇಶದ ಮೂವರು ಹಾಗೂ ಪುಣೆಯ ಒಬ್ಬ ವಿದ್ಯಾರ್ಥಿ ಸೇರಿ ನಾಲ್ವರು ಜಂಟಿಯಾಗಿ ದೇಶಕ್ಕೆ ಮೊದಲ ರ್ಯಾಂಕನ್ನು ಹಂಚಿಕೊಂಡಿದ್ದಾರೆ. ಕಾನ್ಪುರದ ಶೀಲಿಂಗ್ ಹೌಸ್ ವಿದ್ಯಾರ್ಥಿನಿ ಅನಿಕಾ ಗುಪ್ತಾ, ಬಲರಾಮ್ುರದ ಜೀಸಸ್ ಮತ್ತು ಮೇರಿ ಶಾಲೆಯ ಪುಷ್ಕರ್ ತ್ರಿಪಾಠಿ, ಲಖನೌದ ಸಿಎಂಎಸ್​ನ ಕನಿಷ್ಕಾ ಮಿತ್ತಲ್ ಮತ್ತು ಪುಣೆಯ ಸೇಂಟ್ ಮೇರಿಸ್ ಸ್ಕೂಲ್​ನ ಹರ್​ಗುಣ್ ಕೌರ್ ಮಾತರು ತಲಾ 499 ಅಂಕ (ಶೇ.99.80) ಗಳಿಸುವ ಮೂಲಕ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಅಂತಿಮ ಅಂಕಗಳ ನೀಡಿಕೆಯಲ್ಲಿ ಮೊದಲ ಮತ್ತು ಎರಡನೇ ಸೆಮಿಸ್ಟರ್​ಗಳ ಅಂಕಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಸೆಮಿಸ್ಟರ್ 1 ಅಥವಾ ಸೆಮಿಸ್ಟರ್ 2 ಪರೀಕ್ಷೆಗಳಿಗೆ ಹಾಜರಾಗದ ಅಭ್ಯರ್ಥಿಗಳನ್ನು ಗೈರು ಹಾಜರೆಂದು ಪರಿಗಣಿಸಲಾಗುತ್ತದೆ. ಅವರ ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ ಎಂದು ಐಸಿಎಸ್​ಸಿಇ ಮಂಡಳಿ ಮಂಡಳಿಯ ಗೆರ್ರಿ ಅರಾಥೂನ್ ಹೇಳಿದ್ದಾರೆ. 10ನೇ ತರಗತಿಯ ಟಮ್ರ್ 2 ಪರೀಕ್ಷೆಗಳನ್ನು ಏಪ್ರಿಲ್ 25ರಿಂದ ಮೇ 23ರವರೆಗೆ ನಡೆಸಲಾಗಿತ್ತು.
ಫಲಿತಾಂಶ ಇಲ್ಲಿ ಪಡೆಯಿರಿ:https://cisc eresults.trafficmanager.net/
ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ!; ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
