ಮುಂಬೈ:ವಾಣಿಜ್ಯ ನಗರಿ ಮುಂಬೈನಲ್ಲಿ ಐಟಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆ ಆಗಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಸ್ ತಾಲೂಕಿನ ಅಕ್ಲುಜ್​ ಎಂಬ ಗ್ರಾಮದಲ್ಲಿ ಶುಕ್ರವಾರ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಗಿದೆ.
ಈ ವಿವಾದಾತ್ಮಕ ಮದುವೆಗೆ ಯುವಕ ಮತ್ತು ಅವಳಿ ಸಹೋದರಿಯರ ಕುಟುಂಬವೂ ಒಪ್ಪಿಕೊಂಡಿದೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಮದುವೆಯ ಕಾನೂನುಬದ್ಧತೆ ಮತ್ತು ನೈತಿಕತೆಯನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಮುಂಬೈನಲ್ಲಿ ಟೆಕ್ಕಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಕಾರಣ, ಒಬ್ಬರನ್ನೊಬ್ಬರು ಬಿಟ್ಟು ದೂರ ಇರಲಾಗದೇ ಇಬ್ಬರು ಸಹೋದರಿಯರು ಅತುಲ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಅತುಲ್​ ಮೊದಲಿನಿಂದಲೂ ಅವಳಿ ಸಹೋದರಿಯರ ಕುಟುಂಬಕ್ಕೆ ಪರಿಚಿತನಾಗಿದ್ದ. ಕೆಲ ದಿನಗಳ ಹಿಂದೆ ತಂದೆ ನಿಧನರಾದ ಹಿನ್ನೆಲೆಯಲ್ಲಿ ಸಹೋದರಿಯರು ತಾಯಿಯೊಂದಿಗೆ ವಾಸವಾಗಿದ್ದರು. ಯಾವಾಗ ತಾಯಿಗೂ ಅನಾರೋಗ್ಯ ಕಾಡಲು ಆರಂಭಿಸಿತೋ ಆಗ ಅತುಲ್ ಕಾರಿನಲ್ಲಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತುಲ್​ ಅವಳಿ ಸಹೋದರಿಯರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.(ಏಜೆನ್ಸೀಸ್​)
महाराष्ट्र के पंढरपुर में दो सगी बहनों ने एक ही लड़के से शादी की..#Viral#viralvideopic.twitter.com/eZQFjLlvO5
— Vivek Gupta (@imvivekgupta)December 3, 2022

ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಹಂದಿಯನ್ನು ಗುರುತಿಸಲು ಸಾಧ್ಯ!

ಏಲಿಯನ್ ದಾಳಿಯಿಂದ ಸೌರ ಸುನಾಮಿಯವರೆಗೆ! ಭಯಾನಕವಾಗಿದೆ ಬಾಬಾ ವಂಗಾರ 2023ರ ಭವಿಷ್ಯವಾಣಿ

ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
