ಆಲಿಗಢ:ಇಂದು ರಾಷ್ಟ್ರವು ಧರ್ಮವು ಹೊರತಾದ ಹಾದಿಯಲ್ಲಿದ್ದು, ಜನರ ಸಾಂವಿಧಾನಿಕ ಹಕ್ಕುಗಳು ಮತ್ತು ಅವರ ಭವಿಷ್ಯ ಹಾಗೂ ಯಾವುದೇ ಸಮುದಾಯಗಳು ಹಿಂದೆ ಉಳಿದಿಲ್ಲ ಎಂದು ಭರವಸೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಆಲಿಗಢ ಮುಸ್ಲಿಂ ಯೂನಿವರ್ಸಿಟಿ ಶತಮಾನೋತ್ಸವ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡವರಿಗಾಗಿ ಇರುವ ನಮ್ಮ ಸರ್ಕಾರದ ಯೋಜನೆಗಳು ಎಲ್ಲ ವರ್ಗಗಳನ್ನು ಯಾವುದೇ ಧರ್ಮದ ಆಧಾರವಿಲ್ಲದೆ ತಲುಪುತ್ತಿದೆ. ರಾಷ್ಟ್ರದ ಏಳಿಗೆ ಮತ್ತು ಅಭಿವೃದ್ಧಿ ವಿಚಾರ ಬಂದಾಗ ನಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಅಭಿವೃದ್ಧಿಯೆಡೆಗೆ ಗಮನ ನೀಡುತ್ತೇವೆಂಬ ಭರವಸೆ ನೀಡಿದರು.
ಇದನ್ನೂ ಓದಿ:ಪೊಲೀಸರ ಜತೆಗೆ ಜಗಳಕ್ಕೇ ನಿಂತ್ರು ಜಿ.ಪಂ.ಸದಸ್ಯೆ!
ಯಾವುದೇ ಪಕ್ಷಪಾತವಿಲ್ಲದೆ ದೇಶದ ಎಲ್ಲಾ ನಾಗರಿಕರು ಅನುಕೂಲವನ್ನು ಪಡೆಯುವ ಹಾದಿಯಲ್ಲಿ ಇಂದು ದೇಶವಿದೆ. ಧರ್ಮ ಕಾರಣದಿಂದ ಯಾರೊಬ್ಬರು ಸಹ ಹಿಂದೆ ಉಳಿಯದ ಹಾದಿಯಲ್ಲಿ ನಾವಿದ್ದೇವೆ. ಎಲ್ಲರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ನಾವು ಯಾವುದೇ ಧರ್ಮದಲ್ಲಿ ಜನಿಸಿರಲಿ, ರಾಷ್ಟ್ರೀಯ ಗುರಿಗಳೊಂದಿಗೆ ನಮ್ಮ ಆಸೆಗಳನ್ನು ಯಾವ ರೀತಿ ಹೊಂದಿಸುತ್ತೇವೆ ಎಂಬುದು ಮುಖ್ಯವಾಗಿದೆ. ಸಮಾಜದಲ್ಲಿ ಸೈದ್ಧಾಂತಿಕ ಭಾಗಗಳಿರಬಹುದು ಆದರೆ, ಅಭಿವೃದ್ಧಿ ಅಂತ ಬಂದಾಗ ಎಲ್ಲವೂ ಕೂಡ ಅಧೀನವಾಗಿ ಉಳಿಯುತ್ತದೆ. ರಾಷ್ಟ್ರ ಅಂತಾ ಬಂದಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಮಾತಿಲ್ಲ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ:ನಾವು ಮನರಂಜನೆ ನೀಡುವ ವ್ಯಕ್ತಿಗಳಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಡಿಸಿಎಂ ಪ್ರತಿಕ್ರಿಯೆ​
ಎಎಮ್​ಯು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸೃಷ್ಟಿಸಿದೆ. ಹೀಗಾಗಿಯೇ ನಾನಿಂದು ಇಲ್ಲಿಗೆ ಬಂದಿದ್ದೇನೆ. ಹೋರಾಟಗಾರರಲ್ಲಿಯೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಸಹ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಒಗ್ಗೂಡಿದರು. ಸ್ವಾತಂತ್ರ್ಯ ಅವರನ್ನು ಒಂದುಗೂಡಿಸಿತು. ಹೀಗಾಗಿ ನಾವೆಲ್ಲ ಒಟ್ಟಾಗಿ ನವ ಭಾರತಕ್ಕಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.(ಏಜೆನ್ಸೀಸ್​)
ಪ್ರಧಾನಿ ನರೇಂದ್ರ ಮೋದಿಗೆ ಒಲಿದ ಅಮೆರಿಕದ ಪ್ರತಿಷ್ಠಿತ ‘ಲೀಜನ್ ಆಫ್ ಮೆರಿಟ್’ ಅವಾರ್ಡ್​

ನಸುಕಿನಲ್ಲಿ ಭೀಕರ ಅಪಘಾತ: ಕಾರು ಬೆಂಕಿಗಾಹುತಿ- ರಕ್ಷಿಸಲು ಜನರಿದ್ದಲ್ಲದೇ ಐವರ ಸಜೀವ ದಹನ

ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ ಯಾವುದಕ್ಕೆಂದು ತಿಳಿದ್ರೆ ಅಚ್ಚರಿ ಖಂಡಿತ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + seven =
Remember me
