ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಣದ ರಂಗೇರಿದೆ. ಈಗಾಗಲೇ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ನಂದಿಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಪಕ್ಷದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.
ಒಂದು ವೇಳೆ ನೀವು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿಬಿಟ್ಟರೆ ಅವರು ನಿಮ್ಮನ್ನೆಲ್ಲರನ್ನೂ ರಾಜ್ಯದಿಂದ ಹೊರ ನೂಕುತ್ತಾರೆ. ಹೊರಗಿನವರನ್ನು ಇಲ್ಲಿಗೆ ಕರೆದುಕೊಂಡು ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಆಳ್ವಿಕೆ ನಡೆಸುತ್ತಾರೆ ಎಂದು ದೀದಿ ದೂರಿದ್ದಾರೆ. ನೀವು ನಮ್ಮ ಟಿಎಂಸಿಗೆ ಮತ ಹಾಕಿದ್ದೇ ಆದಲ್ಲಿ ನಾವು ನಿಮಗೆ ಮನೆ ಮನೆಗೆ ಪಡಿತರ ತಂದು ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ನಾನು ನಂದಿಗ್ರಾಮದಿಂದ ಗೆದ್ದರೆ, ಇಲ್ಲೇ ಒಂದು ಕಚೇರಿ ಆರಂಭಿಸುತ್ತೇನೆ. ಈ ಆಟವನ್ನು ಗೆದ್ದೇ ಗೆಲ್ಲುತ್ತೇವೆ. ಒಂದು ವೇಳೆ ಬಿಜೆಪಿಯವರು ಗೂಂಡಾಗಿರಿ ಮಾಡಲು ಬಂದರೆ ನಮ್ಮಲ್ಲಿನ ಪೊರಕೆ ಮತ್ತು ಸೌಟೇ ಅವರಿಗೆ ಬುದ್ಧಿ ಕಲಿಸಲಿವೆ. ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಬಿಜೆಪಿ ನಮ್ಮ ಹೊಲವನ್ನು ಕಸಿಯಲು ಬಯಸುತ್ತಿದೆ. ನಮ್ಮ ಬಂಗಾಳವನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್​)
ಹೆಣ್ಣು ಕೊಡೋ ಮಾವ ಎಂದರೆ ‘ನೋ’ ಎಂದ ವ್ಯಕ್ತಿ; ಯುವಕ ತೆಗೆದುಕೊಂಡ ನಿರ್ಧಾರಕ್ಕೆ ಒಂದು ಬಲಿ!

ಮತ್ತೆ ಏರುತ್ತಿದೆ ಕರೊನಾ ಸೋಂಕಿತರ ಸಂಖ್ಯೆ; 5 ತಿಂಗಳ ಗರಿಷ್ಠ ಮಟ್ಟ ತಲುಪಿದ ಏಕದಿನ ಏರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
