ವಾಷಿಂಗ್ಟನ್​:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರವನ್ನು ಹಿಡಿದರೆ, ಭಾರತದೊಂದಿಗಿನ ಸಂಬಂಧವನ್ನು ಮತ್ತುಷ್ಟು ಸುಧಾರಿಸಿ, ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವುದಾಗಿ ಡಿಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬಿಡೆನ್​ ಹೇಳಿದ್ದಾರೆ.
ಭಾರತ ಅಮೆರಿಕದ ಅತ್ಯಂತ ಸಹಜವಾದ ಪಾಲುದಾರ ರಾಷ್ಟ್ರವಾಗಿದೆ. ಇಂಥ ರಾಷ್ಟ್ರದೊಂದಿಗಿನ ಸಂಬಂಧವನ್ನು ಉತ್ತಮ ಪಡಿಸುವ ಜತೆಗೆ ಅದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವುದು ತಮ್ಮ ಆಡಳಿತದ ಆದ್ಯತೆ ಆಗಿರುತ್ತದೆ ಎಂದು ಹೇಳಿದರು.
ನಮ್ಮ ಸುರಕ್ಷತೆಯ ದೃಷ್ಟಿಯಿಂದ ಮಾತ್ರವಲ್ಲ, ಅವರ ಸುರಕ್ಷತೆಯ ದೃಷ್ಟಿಯಿಂದಲೂ ಈ ಪ್ರದೇಶದಲ್ಲಿ ಭಾರತ ಅಮೆರಿಕದ ಪಾಲುದಾರ ರಾಷ್ಟ್ರವಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ರಾಜಕೀಯ, ಮಿಲಿಟರಿ ಬಳಕೆಗೆ ಮಾಹಿತಿ ಕಳವು ತಡೆಯಲು ಆ್ಯಪ್​ಗಳಿಗೆ ನಿರ್ಬಂಧ
2020ರ ನವೆಂಬರ್​ನಲ್ಲಿ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ದೇಣಿಗೆ ಸಂಗ್ರಹಸಿಲು ಬೆಕಾನ್​ ಕ್ಯಾಪಿಟಲ್​ ಪಾರ್ಟನರ್ಸ್​ನ ಚೇರ್ಮನ್​ ಮತ್ತು ಸಿಇಒ ಅಲಾನ್​ ಲೆವಂತಾಲ್​ ಆಯೋಜಿಸಿದ್ದ ದೇಣಿಗೆ ಸಂಗ್ರಹ ಸಭೆಯಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್​ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ, ಸಂಬಂಧ ಸುಧಾರಣೆ ಕುರಿತು ಪ್ರಸ್ತಾಪಿಸಿದರು.
ಬರಾಕ್​ ಒಬಾಮಾ ಅವರ ಜತೆಯಲ್ಲಿ ಎಂಟು ವರ್ಷ ಉಪಾಧ್ಯಕ್ಷ ಸ್ಥಾನವನ್ನು ನಿಭಾಯಿಸಿದ ಅನುಭವವನ್ನು ಹಂಚಿಕೊಂಡ ಜೋ ಬಿಡೆನ್​, ಅಮೆರಿಕ-ಭಾರತ ನಡುವಿನ ನಾಗರಿಕ ಅಣು ಒಪ್ಪಂದ ಏರ್ಪಡುವಂತೆ ಮಾಡಿ, ಸಂಸತ್​ನಲ್ಲಿ ಅದಕ್ಕೆ ಅನುಮೋದನೆ ಪಡೆದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾಗಿ ತಿಳಿಸಿದರು. ಡೆಲಾವೇರ್​ನ ಸಂಸತ್​ ಸದಸ್ಯರಾಗಿರುವ ಇವರು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಣೆ ವಿಷಯದಲ್ಲಿ ಭಾರಿ ಒಲವು ಹೊಂದಿದ್ದಾರೆ.
ಬೆಡ್ ಇಲ್ಲ, ಫುಡ್​ ಇಲ್ಲ- ಅವ್ಯವಸ್ಥೆ ಕೇಳೋರಿಲ್ಲ ಅವಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 13 =
Remember me
