ನವದೆಹಲಿ:ಚೀನಾಕ್ಕೆ ಹೋಗುವವರಿದ್ದರೆ ಅದಕ್ಕೂ ಮೊದಲು ಕೋವಿಡ್​-19 ಪರೀಕ್ಷೆಗೆ ಒಳಗಾಗಿ ನೆಗೆಟಿವ್​ ರಿಪೋರ್ಟ್​ ಪಡೆದುಕೊಳ್ಳಿ. ಈ ಪ್ರಮಾಣಪತ್ರ ಇಲ್ಲದೆ ಚೀನಾದೊಳಗೆ ವಿದೇಶಿಗರಷ್ಟೇ ಅಲ್ಲ, ಚೀನಾ ಮೂಲದವರಿಗೂ ಪ್ರವೇಶ ನೀಡದಿರಲು ಚೀನಾ ಆಡಳಿತ ನಿರ್ಧರಿಸಿದೆ.
ಕೋವಿಡ್​ ನೆಗೆಟಿವ್ ಪ್ರಮಾಣಪತ್ರ ಚೀನಾದ ವಿಮಾನವನ್ನು ಹತ್ತುವ ಐದು ದಿನಗಳ ಮೊದಲು ಪಡೆದುಕೊಂಡಿರುವುದು ಕಡ್ಡಾಯವಾಗಿದೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ, ಜನರಲ್​ ಅಡ್ಮಿನಿಷ್ಟ್ರೇಷನ್​ ಆಫ್​​ ಕಸ್ಟಮ್ಸ್​ ಮತ್ತು ಚೀನಾದ ವಿದೇಶಾಂಗ ಸಚಿವಾಲಯಗಳು ತಿಳಿಸಿವೆ.
ಇದನ್ನೂ ಓದಿ:ಅಪ್ಪ-ಅಮ್ಮನನ್ನು ಕಣ್ಣೆದುರೇ ಹತ್ಯೆ ಮಾಡಿದ ಉಗ್ರರನ್ನು ಗುಂಡು ಹೊಡೆದು ಕೊಂದ ಬಾಲಕಿ; ಸಂಕಟದ ಮಧ್ಯೆ ಶೌರ್ಯ
ಸದ್ಯದ ಪರಿಸ್ಥಿತಿಯಲ್ಲಿ ಹಲವು ರಾಷ್ಟ್ರಗಳಲ್ಲಿ ಕೋವಿಡ್​-19 ಪಿಡುಗು ನಿಯಂತ್ರಣದಲ್ಲಿದೆ. ಜನರ ನಡುವಿನ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರಗಳು ಆರಂಭವಾಗತೊಡಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೀನಾಕ್ಕೆ ಬರುವವರಿಗೆ ಕೋವಿಡ್​-19 ನೆಗೆಟಿವ್​ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವ್ಯಾಂಗ್​ ವೆನ್​ಬಿನ್​ ಹೇಳಿದ್ದಾರೆ.
ಈ ರೀತಿ ಮಾಡುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ನಡುವಿನ ಪರಸ್ಪರ ವ್ಯವಹಾರವನ್ನು ಸೂಕ್ತ ರೀತಿಯಲ್ಲಿ ಪುನರಾರಂಭಿಸಲು ಅನುಕೂಲವಾಗುತ್ತದೆ. ಆದ್ದರಿಂದ ವಿದೇಶಿಗರ ಮೂಲ ರಾಷ್ಟ್ರಗಳಲ್ಲಿರುವ ಚೀನಾದ ರಾಯಭಾರ ಕಚೇರಿಗಳು ಆಯಾ ರಾಷ್ಟ್ರಗಳ ಕೋವಿಡ್​ ಪರೀಕ್ಷಾ ಸಾಮರ್ಥ್ಯವನ್ನು ಆಮೂಲಾಗ್ರವಾಗಿ ಪರಿಶೀಲಿಸಲಿವೆ. ಈ ಕುರಿತು ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿರ್ದಿಷ್ಟ ರಾಷ್ಟ್ರಗಳ ವಿಮಾನಗಳ ಆಗಮನಕ್ಕೆ ಚೀನಾ ಅವಕಾಶ ಮಾಡಿಕೊಟ್ಟಿದೆ. ಆದರೆ ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವ ಭಾರತದ ವಿಮಾನ ಸಂಚಾರವನ್ನು ಪುನರಾರಂಭಿಸಲು ಇನ್ನೂ ಅವಕಾಶ ಮಾಡಿಕೊಟ್ಟಿಲ್ಲ.
ರಾಜ್ಯದಲ್ಲಿ ಹಿಡಿತಕ್ಕೆ ಸಿಗುತ್ತಿದೆಯೇ ಕರೊನಾ? ನಿನ್ನೆಗಿಂತ ಒಂದೇ ಪ್ರಕರಣ ಹೆಚ್ಚು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
