ನವದೆಹಲಿ:ನ್ಯಾಯಾಲಯದ ಕಾರ್ಯ ಕಲಾಪ ತಡವಾಗಿ ಆರಂಭಗೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಮೂರ್ತಿ ಲಲಿತ್​​, ಮಕ್ಕಳು ಬೆಳಗ್ಗೆಯೇ ಶಾಲೆಗೆ ಹೋಗುವುದಾದರೆ, ವಕೀಲರು, ನ್ಯಾಯಾಧೀಶರು ಏಕೆ ಬೇಗ ಬರಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಾರದಲ್ಲಿ ಬೆಳಗ್ಗೆ 10.30ರ ಬಳಿಕ ಕೋರ್ಟ್​ ಕಾರ್ಯಕಲಾಪಗಳು ಪ್ರಾರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಇದರಲ್ಲಿ 1 ರಿಂದ 2 ಗಂಟೆಯವರೆಗೆ ಲಂಚ್ ಬ್ರೇಕ್​​ ಇರಲಿದೆ. ಇಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಮಕ್ಕಳು ಬೆಳಗ್ಗೆ 7ಗಂಟೆಗೆ ಎದ್ದು ಶಾಲೆಗೆ ಹೋಗುತ್ತಾರೆ, ನಾವ್ಯಾಕೆ 9 ಗಂಟೆಗೆ ಕೋರ್ಟ್​ ಕಲಾಪ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ನ್ಯಾ.ಲಲಿತ್​ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 9.30ಕ್ಕೆ ಕಲಾಪ ಆರಂಭಿಸಿದ ನ್ಯಾಯಮೂರ್ತಿ ಲಲಿತ್​​ ಅವರಿದ್ದ ಪೀಠದಲ್ಲಿ ನ್ಯಾಯಧೀಶರಾದ ಎಸ್​. ರವೀಂದ್ರ ಭಟ್​ ಮತ್ತು ಸುಧಾಂಶು ಧುಲಿಯಾ ಅವರಿದ್ದರು. ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಕೋರ್ಟ್​ ಕಲಾಪ ಸಮಯದ ಪಟ್ಟಿ ಬಗ್ಗೆ ಪ್ರಸ್ತಾಪಿಸಿದರು.
ಇದೇ ವೇಳೆ ಜಾಮೀನು ಪ್ರಕರಣವೊಂದರಲ್ಲಿ ಹಾಜರಾದ ಮಾಜಿ ಅಟಾರ್ನಿ ಜನರಲ್​ ಮುಕುಲ್​ ರೋಹಟಗಿ ಅವರು ಬೇಗನೇ ಬಂದು ಕುಳಿತಿದ್ದಕ್ಕಾಗಿ ಶ್ಲಾಘಿಸಿದರು. ಇದೇ ವೇಳೆ ನ್ಯಾಯಾಲಯದ ಕಲಾಪ ಪ್ರಾರಂಭಿಸಲು ಬೆ.9.30 ಸರಿಯಾದ ಸಮಯ ಎಂದು ಹೇಳಿದರು.(ಏಜೆನ್ಸೀಸ್​)
ಖ್ಯಾತ ನಟ ಹಾಗೂ ನಿರ್ದೇಶಕ ಪ್ರತಾಪ್​ ಪೋಥೆನ್​ ನಿಗೂಢ ಸಾವು: ಅಪಾರ್ಟ್​​ಮೆಂಟ್​ನಲ್ಲಿ ಶವವಾಗಿ ಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + 14 =
Remember me
