ಜೈಪುರ:ಅನೇಕ ಶಾಸಕರು ಬೇಲಿ ಮೇಲೆ ಕುಳಿತಿದ್ದಾರೆ. ಅವರಲ್ಲಿ ಒಂದಿಷ್ಟು ಶಾಸಕರು ಆಚೀಚೆ ಹಾರಿದರೂ ಸಚಿನ್​ ಪೈಲಟ್​ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತಾರೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿರುವ ಅವರು, ಸಚಿನ್​ ಪೈಲಟ್​ ಜತೆ 18 ಶಾಸಕರು ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಎತ್ತಿದ್ದಾರೆ. ಇನ್ನು ಕೆಲವು ಶಾಸಕರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಪೈಲಟ್​ ಪಾಳೆಯ ಕೈ ಮೇಲಾಗುತ್ತದೆ ಎನ್ನುವುದಾದರೆ ಅವರೆಲ್ಲರೂ ಇತ್ತ ಜಿಗಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮನೆಪಾಠ ಮಾಡಲೆಂದು ಬಂದ, ಬಾಲಕನ ಮೇಲೆ ಅತ್ಯಾಚಾರ ಎಸಗಿದ; ಬಹಿರಂಗಪಡಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡಿದ!
ಜ್ಯೋತಿರಾದಿತ್ಯ ಸಿಂಧ್ಯಾ ಅವರು ಬಂಡಾಯ ಎದ್ದಿದ್ದರಿಂದ ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರ ಉರುಳಿತ್ತು. ಅದರಂತೆ ರಾಜಸ್ಥಾನದಲ್ಲಿ ಸಚಿನ್​ ಪೈಲಟ್​ ಅವರು ಗೆಹ್ಲೋಟ್​ ಸರ್ಕಾರದ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಹಾಗಾಗಿ, ಇಲ್ಲಿಯೂ ಕೂಡ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಿ, ತನ್ನ ಸರ್ಕಾರವನ್ನು ಪ್ರತಿಷ್ಠಾಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸುತ್ತಿದ್ದಾರೆ.
ಆದರೆ, ಸರ್ಕಾರವನ್ನು ಉರುಳಿಸಲು ತಾವು ಯಾವುದೇ ಹುನ್ನಾರ ನಡೆಸಿಲ್ಲ. ಒಂದು ವೇಳೆ ಸಚಿನ್​ ಪೈಲಟ್​ ಸಿಎಂ ಸ್ಥಾನದಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾದರೆ, ಆಗ ಸರ್ಕಾರ ರಚನೆಯ ಸಾಧ್ಯತೆ ಕುರಿತು ಬಿಜೆಪಿ ಒಂದು ಕೈ ನೋಡುತ್ತದೆ ಎಂದು ಪೂನಿಯಾ ಹೇಳಿದ್ದಾರೆ.
ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
