ಚೆನ್ನೈ:ತಮ್ಮದೇ ಒಂದು ಪಕ್ಷ ಕಟ್ಟಿಕೊಂಡು ರಾಜಕಾರಣಕ್ಕೆ ಇಳಿದಿರುವ ನಟ ಕಮಲಹಾಸನ್​ ಇದೀಗ ರಾಜಕೀಯ ಚಟುವಟಿಕೆಗಳಲ್ಲಿ ಚುರುಕಾಗಿದ್ದು, ಯಾವುದೇ ಕಾರಣಕ್ಕೂ ರಾಜಕಾರಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಜತೆಜತೆಗೆ ಮಕ್ಕಳ್ ನೀತಿ ಮಯಮ್​ (ಎಂಎನ್​ಎಂ) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಕಮಲಹಾಸನ್​, ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕೆಲವರು ನಾನು ರಾಜಕೀಯದಿಂದ ಕಾಣೆಯಾಗಿ ಮತ್ತೆ ಸಿನಿಮಾಗೆ ಪ್ರವೇಶಿಸುತ್ತೇನೆ ಎಂಬುದಾಗಿ ವ್ಯಂಗ್ಯವಾಡುತ್ತಿದ್ದಾರೆ. ಆದರೆ ನಾನು ರಾಜಕೀಯದಿಂದ ಕಾಣೆಯಾಗುತ್ತೇನೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಜನತೆ ಎಂದಿರುವ ಕಮಲಹಾಸನ್​, ತಮ್ಮ ರಾಜಕೀಯ ಜೀವನಕ್ಕೆ ತೊಂದರೆ ಆಗುವುದಿದ್ದರೆ ನಾನು ಸಿನಿಮಾ ಜೀವನಕ್ಕೇ ವಿದಾಯ ಹೇಳಿ ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬುದಾಗಿಯೂ ಹೇಳಿದ್ದಾರೆ. ಸದ್ಯಕ್ಕೆ ಬಾಕಿ ಇರುವ ಎಲ್ಲ ಸಿನಿಮಾಗಳನ್ನು ಮುಗಿಸಲಿದ್ದೇನೆ. ಆ ನಂತರ ರಾಜಕೀಯಕ್ಕೆ ಸಿನಿಮಾ ಅಡ್ಡಿ ಆಗುವುದಾದರೆ ಸಿನಿಮಾಜೀವನಕ್ಕೇ ವಿದಾಯ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌
ಇನ್ನು ತಾವು ರಾಜಕೀಯಕ್ಕೆ ಪ್ರವೇಶಿಸಿರುವುದು ಐತಿಹಾಸಿಕ ನಿರ್ಧಾರ. ಏಕೆಂದರೆ ಶೇ. 30 ಮಂದಿ ರಾಜಕೀಯದಿಂದ ದೂರವೇ ಉಳಿದಿರುವಾಗ ತಮ್ಮ ಈ ನಿರ್ಧಾರ ಸೂಕ್ತವಾದದ್ದು ಎಂದು ಕಮಲಹಾಸನ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮಗೆ ಕೆಲವು ಬೆದರಿಕೆಗಳು ಬರುತ್ತಿವೆ ಎಂದಿರುವ ಅವರು, ಆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ:ಹೆಂಡತಿಯೊಂದಿಗೆ ಜಗಳ, ಇಬ್ಬರು ಗಂಡಂದಿರ ಸಾವು!
ಸಾರಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕೆಲವು ಮದ್ಯಪ್ರಿಯರಿಗೆ ಖುಷಿಯೋ ಖುಷಿ!

ರಾಜ್ಯದಲ್ಲಿ ಮತ್ತೊಂದು ಬ್ಲಾಸ್ಟ್​: ಸ್ಫೋಟಕ ಸಾಮಗ್ರಿ ಸಿಡಿದು ಇಬ್ಬರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + three =
Remember me
