ನವದೆಹಲಿ: ಪೆಟ್ರೋಲ್, ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ದರ -ರೂ 75ಕ್ಕೂ, ಡೀಸೆಲ್ ದರ ರೂ 68ಕ್ಕೆ ಇಳಿಯಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ)ದ ಅರ್ಥ ಶಾಸ್ತ್ರಜ್ಞರು ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಈ ಕ್ರಮದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾದೀತು. ಇದು ದೇಶದ ಜಿಡಿಪಿಯ ಶೇಕಡ 0.4 ಮಾತ್ರ ಎಂದಿದ್ದಾರೆ.
ಈ ಅಂದಾಜಿಗೆ ಸಾಗಣೆ ವೆಚ್ಚ ಡೀಸೆಲ್​ಗೆ -ರೂ 7.25, ಪೆಟ್ರೋಲ್​ಗೆ, ರೂ 3.82, ಡೀಲರ್ ಕಮಿಷನ್ ಡೀಸೆಲ್​ಗೆ -ರೂ 2.53, ಪೆಟ್ರೋಲ್​ಗೆ, ರೂ 3.67, ಸೆಸ್ ಡೀಸೆಲ್​ಗೆ 20 ರೂಪಾಯಿ, ಪೆಟ್ರೋಲ್​ಗೆ -ರೂ 30 (ಸೆಸ್ ಅನ್ನು ಕೇಂದ್ರ ಮತ್ತು ರಾಜ್ಯಗಳು ಸಮನಾಗಿ ಹಂಚಿಕೊಳ್ಳುತ್ತವೆ) ಮತ್ತು ಜಿಎಸ್​ಟಿ ದರ ಶೇಕಡ 28ರ ಲೆಕ್ಕದಲ್ಲಿ ಪರಿಗಣಿಸಲಾಗಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್ ಮೇಲೆ 1 ಡಾಲರ್ ಹೆಚ್ಚಳವಾದರೆ ಪೆಟ್ರೋಲ್ ದರ ಲೀಟರಿಗೆ 50 ಪೈಸೆ ಮತ್ತು ಡೀಸೆಲ್ ದರ ಲೀಟರಿಗೆ ರೂ 1.5 ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಆದಾಯ -ರೂ 1,500 ಕೋಟಿ ಮಾತ್ರ ವ್ಯತ್ಯಾಸವಾಗುತ್ತದೆ ಎಂಬುದು ಒಟ್ಟಾರೆ ಲೆಕ್ಕಾಚಾರ. ಈಗ ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪ್ರತಿ ಲೀಟರ್​ಗೆ -ರೂ 30 ರೂ. ವರೆಗೂ ಇಳಿಕೆಯಾಗಿದೆ.
ರಾಜ್ಯಗಳಿಗೆ ಇದೆ ಲಾಭ: ಪ್ರಸ್ತುತ ತೈಲ ದರವನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳ ಆದಾಯ ಸಂಗ್ರಹ ಇಳಿಕೆ ಆಗಲಿದೆ. ಆದರೆ, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್​ಗೆ 10 ಡಾಲರ್ ಇಳಿದ ಸಂದರ್ಭದಲ್ಲಿ ಜಿಎಸ್​ಟಿ ವ್ಯಾಪ್ತಿಯಲ್ಲಿ ಇಂಧನದ ಮೂಲದರವನ್ನು ಹಾಗೆಯೇ ಉಳಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 18,000 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಎಸ್​ಬಿಐ ಪರಿಣತರ ಅಭಿಮತ.
ಎಲ್​ಪಿಜಿ ಸಿಲಿಂಡರ್ ಕಥೆ ಏನು?
ಮುಂದಿನ 5ವರ್ಷಗಳ ಕಾಲ ಎಲ್​ಪಿಜಿ ಸಿಲಿಂಡರ್​ಗಳನ್ನು ಬಡ ಗ್ರಾಹಕರಿಗೆ ಪೂರೈಸುವಾಗ ಅವರಿಗೆ ಅವರ ಬಳಕೆಯ ಶ್ರೇಣಿ ಆಧರಿಸಿ ಸಹಾಯಧನ ವ್ಯವಸ್ಥೆಯನ್ನು ಮುಂದುವರಿಸಬಹುದು ಎಂದು ಎಸ್​ಬಿಐ ಪರಿಣತರು ಸಲಹೆ ನೀಡಿದ್ದಾರೆ.
ಒಪೆಕ್ ಸಭೆಯಲ್ಲಿ ತೈಲದರ ಚರ್ಚೆ
ಒಪೆಕ್+ ರಾಷ್ಟ್ರಗಳ ಆನ್​ಲೈನ್ ಸಭೆ ಗುರುವಾರ ನಡೆದಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ತೈಲ ಬೇಡಿಕೆ ಮತ್ತು ಪೂರೈಕೆ ವಿಚಾರ ಚರ್ಚೆಗೆ ಬಂದಿದೆ. ತೈಲ ಉತ್ಪಾದನೆಯನ್ನು ಡಿಸೆಂಬರ್​ನಲ್ಲೇ ನಿರ್ಧರಿಸಿದಂತೆ ನಿತ್ಯವೂ 5 ಲಕ್ಷ ಬ್ಯಾರೆಲ್​ಗೆ ಏರಿಸುವ ವಿಷಯವನ್ನೂ ತೈಲೋತ್ಪಾದಕ ರಾಷ್ಟ್ರಗಳ ನಾಯಕರು ರ್ಚಚಿಸಿದ್ದರು. ಆದಾಗ್ಯೂ, ಒಪೆಕ್+ ರಾಷ್ಟ್ರಗಳ ನಾಯಕರು ಈ ಕುರಿತ ಖಚಿತ ನಿರ್ಣಯಕ್ಕೆ ಇನ್ನೂ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ದರ ವ್ಯತ್ಯಾಸವಿಲ್ಲ
ಈ ಎಲ್ಲ ಬೆಳವಣಿಗೆಗಳ ನಡುವೆ, ಭಾರತದಲ್ಲಿ ಸತತ ಐದನೇ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
