ನವದೆಹಲಿ:ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ನನ್ನು ಮರಳಿ ಪಾಕ್​ಗೆ ಕಳುಹಿಸದಿದ್ದರೆ ಮತ್ತೊಂದು ಮುಂಬೈ ಮಾದರಿಯ ದಾಳಿ ನಡೆಯಲಿದೆ ಎಂದು ಬೆದರಿಕೆ ಕರೆ ಒಂದು ಬಂದಿದೆ.
ಮುಂಬೈನ ಟ್ರಾಫಿಕ್​ ಕಂಟ್ರೋಲ್​ ರೂಮ್​ ಈ ಕರೆಯನ್ನು ಸ್ವೀಕರಿಸಿದೆ. ಉರ್ದುವಿನಲ್ಲಿ ಮಾತನಾಡಿರುವ ಅಪರಿಚಿತ, ಸೀಮಾಳನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, 2008ರ ನವೆಂಬರ್​ 26ರಂದು ಮುಂಬೈ ತಾಜ್​ ಹೋಟೆಲ್​ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ ಮತ್ತು ಭಾರತವು ವಿನಾಶವನ್ನು ಎದುರಿಸಲಿದೆ ಎಂದು ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ:ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ
ಇಷ್ಟೇ ಅಲ್ಲದೆ, ಮುಂಬೈ ದಾಳಿ ಮಾದರಿಯಲ್ಲಿ ದಾಳಿ ಮಾಡಲು ಈಗಾಗಲೇ ಎಲ್ಲರೂ ತಯಾರಾಗಿದ್ದಾರೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಹೊಣೆಯಾಗಲಿದೆ ಎಂದೂ ಸಹ ಅಪರಿಚಿತ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆ ಕರೆ ಬುಧವಾರ ರಾತ್ರಿ ಬಂದಿದೆ. ಈ ಕುರಿತು ಈಗಾಗಲೇ ತನಿಖೆ ಸಹ ಆರಂಭವಾಗಿದೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಆಗಾಗ ಇಂತಹ ಬೆದರಿಕೆ ಕರೆಗಳು ಬರುತ್ತಿದ್ದರೂ, ಪೊಲೀಸರು ಈಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಸೀಮಾ ಹೈದರ್​ ಪಾಕಿಸ್ತಾನಿ ಮೂಲದ ಮಹಿಳೆ. ವೀಸಾ ಇಲ್ಲದೆ ನೇಪಾಳದ ಮೂಲಕ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾಳನ್ನು ಜುಲೈ 4ರಂದು ಬಂಧಿಸಲಾಯಿತು. ಆಕೆಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಚಿನ್​ ಮೀನಾನನ್ನು ಜೈಲಿಗೆ ಅಟ್ಟಲಾಗಿತ್ತು. ಇವರಿಬ್ಬರ ಪ್ರೇಮಕತೆ ಯಾವ ಬಾಲಿವುಡ್​ ಸಿನಿಮಾಗೂ ಕಮ್ಮಿ ಇಲ್ಲ. ಕೋವಿಡ್​ ಸಾಂಕ್ರಮಿಕ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ಪ್ಲೇಯರ್​ ಅನ್​ನೌನ್​ ಬ್ಯಾಟಲ್​ಗ್ರೌಂಡ್​ (ಪಬ್​ಜಿ) ಗೇಮ್​ ಆಡುವಾಗ ಇಬ್ಬರ ನಡುವೆ ಶುರುವಾದ ಪರಿಚಯ, ಪ್ರೀತಿಗೆ ತಿರುಗಿ, ಕೊನೆಗೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಬರುವಂತೆ ಪ್ರೇರೇಪಿಸಿತು. 30 ವರ್ಷದ ಸೀಮಾ ಹಾಗೂ 25 ವರ್ಷದ ಸಚಿನ್​ ಕಳೆದ ಮಾರ್ಚ್​ ತಿಂಗಳಲ್ಲಿ ನೇಪಾಳದಲ್ಲಿ ಮದುವೆಯಾದರು. ಇದು ಇವರಿಬ್ಬರ ಮೊದಲ ಭೇಟಿಯಾಗಿತ್ತು. ಮೊದಲ ಭೇಟಿಯಲ್ಲೇ ಮದುವೆ ಮಾಡಿಕೊಂಡಿದ್ದರು. ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಇಬ್ಬರು ಜೈಲುಪಾಲಾಗಿದ್ದರು. ಕಳೆದ ಶುಕ್ರವಾರ (ಜು.7) ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಹೊಸ ಜೀವನ ಆರಂಭಿಸುವ ತವಕದಲ್ಲಿದ್ದಾರೆ. ಇದರ ಬೆನ್ನಲ್ಲೇ ಬೆದರಿಕೆ ಕರೆಯೂ ಬಂದಿದೆ.(ಏಜೆನ್ಸೀಸ್​)
ವ್ಯಾಜ್ಯಗಳ ಸೋಲಿನಿಂದ ಹೊರಬರಲು ಕಾನೂನು

ರೈಲ್ವೆ ಸಿಗ್ನಲ್ ವ್ಯವಸ್ಥೆ ಬದಲಾವಣೆ; 1 ಲಕ್ಷ ಕೋಟಿಯ ಯೋಜನೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × three =
Remember me
