ಚಂಡೀಗಢ:ಶಾಸಕರ ಬಂಡಾಯದ ನೆರಳಲ್ಲಿ ರಾಜೀನಾಮೆ ನೀಡಿದ ಪಂಜಾಬ್​ನ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್​, ತಮ್ಮ ಮುಂದಿನ ರಾಜಕೀಯ ಪ್ರಯಾಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಪಿಪಿಸಿಸಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಅವರನ್ನು ಪಕ್ಷವು ಮುಂದಿನ ಸಿಎಂ ಆಗಿ ಬಿಂಬಿಸಿದಲ್ಲಿ ಅವರ ವಿರುದ್ಧ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಇಳಿಸುವುದಾಗಿ ಎಚ್ಚರಿಸಿದ್ದಾರೆ.
ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕ್ಯಾಪ್ಟನ್​, ಪಕ್ಷವನ್ನು ‘ದೆಹಲಿಯಿಂದ ನಡೆಸುತ್ತಿರುವ ರೀತಿ’ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆ.ಕೆ.ವೇಣುಗೋಪಾಲ್​, ಅಜಯ್​ ಮಕೇನ್​ ಅಥವಾ ರಣದೀಪ್​ ಸುರ್ಜೇವಾಲಾರಂಥ ಕಾಂಗ್ರೆಸ್​ ನಾಯಕರು ರಾಜ್ಯದಲ್ಲಿ ಯಾರು ಯಾವ ಸಚಿವಾಲಯಕ್ಕೆ ಸೂಕ್ತ ಎಂದು ಹೇಗೆ ನಿರ್ಧರಿಸಬಲ್ಲರು ಎಂದು ಪ್ರಶ್ನಿಸಿದ್ದಾರೆ. ತಾವು ಸಿಎಂ ಆಗಿದ್ದಾಗ ತಮಗೆ ಪ್ರತಿಯೊಬ್ಬರ ಸಾಮರ್ಥ್ಯ ತಿಳಿದಿದ್ದರಿಂದ ತಾವೇ ನಿರ್ಧಾರಗಳನ್ನು ತೆಗೆದುಕೊಂಡದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್​ ಉದ್ಗಾರ
ಮಂಗಳವಾರದಂದು ಹೊಸ ಸಿಎಂ ಚರಣ್​ಜೀತ್​ ಸಿಂಗ್ ಚನ್ನಿ ಅವರು, ಸಿಧು ಜೊತೆಗೆ ರಾಜಧಾನಿ ದೆಹಲಿಗೆ ರಾಜ್ಯ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲು ತೆರಳಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್​ ಹೇಳಿಕೆ ನೀಡಿದ್ದಾರೆ. ಮೊದಲ ದಲಿತ ಸಿಎಂ ಆದ ಚನ್ನಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಧರ್ಮಗಳು ನಮಗೆ ಎಲ್ಲರೂ ಸಮಾನ ಎಂದು ಹೇಳುತ್ತವೆ. ನಾನು ಜನರನ್ನು ಅವರ ಜಾತಿ ಆಧಾರದ ಮೇಲೆ ನೋಡುವುದಿಲ್ಲ. ಬದಲಿಗೆ ಅವರ ದಕ್ಷತೆ ಮುಖ್ಯ” ಎಂದಿರುವ ಕ್ಯಾಪ್ಟನ್​, ಚನ್ನಿ ಆಳ್ವಿಕೆಯಲ್ಲಿ ಸಿಧು ಅವರೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಸಿಧು ವಿರುದ್ಧ ಹರಿಹಾಯ್ದಿರುವ ಕ್ಯಾಪ್ಟನ್​, ಪಿಸಿಸಿ ಮುಖ್ಯಸ್ಥರು ಪಕ್ಷದ ವ್ಯವಹಾರಗಳ ಮೇಲೆ ಗಮನ ಹರಿಸಬೇಕು. ಅವರು ‘ಸೂಪರ್​ ಸಿಎಂ’ ಆಗಿ ವರ್ತಿಸಿದರೆ, ಪಕ್ಷ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದಾರೆ. ಜೊತೆಗೇ, ಸಿಧು ಅವರತ್ತಲೇ ಬೆಟ್ಟು ಮಾಡುತ್ತಾ, “ಈ ಡ್ರಾಮಾ ಮಾಸ್ಟರ್​ ನಾಯಕತ್ವದಲ್ಲಿ ಕಾಂಗ್ರೆಸ್​ ಪಂಜಾಬ್​ ಚುನಾವಣೆಗಳಲ್ಲಿ ಎರಡಂಕಿಯನ್ನೂ ತಲುಪುವುದು ಕಷ್ಟವಾದೀತು” ಎಂದು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್)
ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್​ ಮಾಡಿದ ಭೂಪ!

ಅಗ್ನಿ ಅನಾಹುತದಿಂದ ಎಚ್ಚೆತ್ತ ಪಾಲಿಕೆ… ಅಪಾರ್ಟ್​ಮೆಂಟ್​ ಬಾಲ್ಕನಿಗಳ ಮೇಲೆ ಬಿಬಿಎಂಪಿ ಕಣ್ಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
