ಕೊಚ್ಚಿ:ಕಳೆದ ವರ್ಷ ಹೆಬ್ಬಾವು ಬಾಯಿಗೆ ತುತ್ತಾದ ತನ್ನ ಕೋಳಿಗಳ ಸಾವಿಗೆ ಪರಿಹಾರ ನೀಡಬೇಕೆಂದು ವ್ಯಕ್ತಿಯೊಬ್ಬ ಸರ್ಕಾರವನ್ನು ಒತ್ತಾಯಿಸಿರುವ ವಿಚಿತ್ರ ಘಟನೆ ಕೇರಳದಲ್ಲಿ ವರದಿಯಾಗಿದೆ.
ಸಚಿವ ಅಹಮ್ಮದ್ ದೇವರಕೋವಿಲ್, ಜಿಲ್ಲಾಧಿಕಾರಿ ಮತ್ತು ಸಬ್ ಕಲೆಕ್ಟರ್‌ಗಳು ಭಾಗವಹಿಸಿದ್ದ ವೆಳ್ಳರಿಕುಂಡುನಲ್ಲಿ ನಡೆದ ತಾಲೂಕು ಮಟ್ಟದ ಅದಾಲತ್‌ನಲ್ಲಿ ಕೋಳಿಗಳ ಪರಿಹಾರ ವಿಚಾರ ಪ್ರಸ್ತಾಪವಾಗಿದೆ.
ಕಾಸರಗೋಡು ನಿವಾಸಿ ಕೆ.ವಿ. ಜಾರ್ಜ್​ ಎಂಬುವರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅದಾಲತ್​ನಲ್ಲಿ ಭಾಗವಹಿಸಿದ್ದ ಜಾರ್ಜ್​, ನನ್ನ ಎಲ್ಲ ಕೋಳಿಗಳು ಹಬ್ಬಾವಿಗೆ ಆಹಾರವಾಗಿವೆ. ಇದರಿಂದ ನನಗೆ ಭಾರೀ ನಷ್ಟವಾಗಿದ್ದು, ಪರಿಹಾರ ನೀಡುವಂತೆ ಕೇಳಿದ್ದಾರೆ.
ಇದನ್ನೂ ಓದಿ:ಯುವತಿಯ ಬಾಡಿ ಶೇಪ್ ಬಗ್ಗೆ ಅಶ್ಲೀಲ ಮಾತು: ಪ್ರಶ್ನಿಸಿದ ಯುವಕನ ಮೇಲೆ ಬಾಟಲ್​ನಿಂದ ಹಲ್ಲೆ
2022ರ ಜೂನ್​ನಲ್ಲಿ ಒಂದು ದಿನ ಬೆಳಗ್ಗೆ ಕೋಳಿಯ ಬುಟ್ಟಿಯನ್ನು ತೆರೆದಾಗ, ಅದರಲ್ಲಿದ್ದ ಎಲ್ಲ ಕೋಳಿಗಳು ನಾಪತ್ತೆಯಾಗಿದ್ದವು. ಬುಟ್ಟಿಯ ಒಳಗೆ ಹೆಬ್ಬಾವು ಇತ್ತು. ಬಳಿಕ ಅರಣ್ಯಾಧಿಕಾರಿಗಳು ನಮ್ಮ ಮನೆಗೆ ಬಂದು ಹಾವನ್ನು ಹಿಡಿದುಕೊಂಡು ಹೋಗಿ ಮತ್ತೆ ಅರಣ್ಯಕ್ಕೆ ಬಿಟ್ಟರು. ಹಾವುಗಳ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಮಗೆ ತುಂಬಾ ನಷ್ಟವಾಗಿದೆ. ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಒತ್ತಾಯ ಮಾಡಿದ್ದಾರೆ.
ಹಾವುಗಳು ಸರ್ಕಾರಕ್ಕೆ ಸೇರಿದ್ದು ಎಂದಾದರೆ, ಕೋಳಿಗಳು ನನಗೆ ಸೇರಿದ್ದಾಗಿವೆ. ಹೀಗಾಗಿ ನೀವು ನನಗೆ ಪರಿಹಾರ ನೀಡಲೇಬೇಕು ಎಂದು ಜಾರ್ಜ್​ ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಜಾರ್ಜ್​ ಬೇಡಿಕೆಗೆ ಸಚಿವರು ಹಾಗೂ ಅಧಿಕಾರಿಗಳು ಮನ್ನಣೆ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ಗ್ಯಾರಂಟಿಗಳ ಬಗ್ಗೆ ನಟ ವಿನೋದ್​ ರಾಜ್​ ಹೇಳಿದ್ದಿಷ್ಟು…

ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
