ನವದೆಹಲಿ:ದೇಶದ ಪ್ರತಿ ಗ್ರಾಮ, ತಾಲೂಕು ಮತ್ತು ಜಿಲ್ಲೆಯಲ್ಲಿ ಅಭಿವೃದ್ಧಿಯ ದೀಪ ಬೆಳಗಬೇಕು. ಆಗ ಮಾತ್ರ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯ. ಅಭಿವೃದ್ಧಿ ಉಪಕ್ರಮಗಳನ್ನು ಸಾಮೂಹಿಕ ಆಂದೋಲನವನ್ನಾಗಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಸದಸ್ಯರ ಕ್ಷೇತ್ರೀಯ ಪಂಚಾಯತ್​ರಾಜ್ ಪರಿಷತ್ ಉದ್ದೇಶಿಸಿ ಆನ್​ಲೈನ್ ಮೂಲಕ ಮಾತನಾಡಿದ ಅವರು, ಚುನಾವಣೆ ಗೆಲ್ಲುವುದು ಮುಖ್ಯವಲ್ಲ. ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡುತ್ತಿಲ್ಲ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕೇವಲ ಬಿಜೆಪಿಯ ಘೊಷಣೆಯಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಗ್ರಾಮ ಮತ್ತು ಜಿಲ್ಲೆಗಳಿಗೆ ಆದ್ಯತೆಯಾಗಿ ಕೆಲಸಗಳನ್ನು ಕೈಗೊಳ್ಳಬೇಕು. ಜನಬೆಂಬಲ ಪಡೆಯುವ ಮೂಲಕ ಯಶಸ್ವಿಗೊಳಿಸಲು ಎಲ್ಲರೂ ಮುಂದಾಗಬೇಕು. ಇಂದು ಸ್ಥಳೀಯ ಸಂಸ್ಥೆಗಳ ನಿಧಿ ಬಹುಪಟ್ಟು ಏರಿಕೆ ಕಂಡಿದೆ. ಪ್ರತಿ ವರ್ಷ 3 ಯೋಜನೆಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು. ಹೊಸದಾಗಿ 30,000 ಜಿಲ್ಲಾ ಪಂಚಾಯತ್ ಕಟ್ಟಡಗಳನ್ನು ನಿರ್ವಿುಸಿದ್ದೇವೆ ಎಂದರು.
77ನೇ ಸ್ವಾತಂತ್ರ್ಯ ದಿನಾಚರಣೆಯಂದು ಘೊಷಿಸಿದ ವಿಶ್ವಕರ್ಮ ಯೋಜನೆ ಕುರಿತು ಮಾತನಾಡಿದ ಮೋದಿ, ಹಳ್ಳಿಗಳಲ್ಲಿರುವ ಸಾಂಪ್ರದಾಯಿಕ ಕುಶಲಕರ್ವಿುಗಳ ಪಟ್ಟಿಯನ್ನು ತಯಾರಿಸಿ, ಅವರಿಗೆ ಸಹಾಯ ಮಾಡುವ ಮಾರ್ಗ ಸೂಚಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದರು. ಕೌಶಲ್ಯ ಅಭಿವೃದ್ಧಿ ಮತ್ತು ಇತರ ಸಾಧನಗಳನ್ನು ಒದಗಿಸಲು ಅವರಿಗೆ ಸಹಾಯ ಮಾಡಲು ಬಜೆಟ್ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 17ರಂದು ನಡೆಯುವ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.
ರಾಜ್ಯಸಭೆಯ ಹಾಲಿ ಸದಸ್ಯರಲ್ಲಿ ಶೇ. 12 ಮಂದಿ ಕೋಟ್ಯಧಿಪತಿಗಳಾಗಿದ್ದು, ಇವರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಂಸದರ ಸಂಖ್ಯೆ ಹೆಚ್ಚಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ ವರದಿ ತಿಳಿಸಿದೆ. ಆಂಧ್ರಪ್ರದೇಶದ 11 ಸಂಸದರಲ್ಲಿ 5 (ಶೇ. 45), ತೆಲಂಗಾಣದ 7 ಸಂಸದರಲ್ಲಿ 3 (ಶೇ. 43), ಮಹಾರಾಷ್ಟ್ರದ 19 ಸಂಸದರಲ್ಲಿ 3 (ಶೇ. 16), ದೆಹಲಿಯ 3 ಸಂಸದರಲ್ಲಿ 2 (ಶೇ. 29), ಪಂಜಾಬ್​ನ 7 ಸಂಸದರಲ್ಲಿ 2 (ಶೇ. 29), ಹರಿಯಾಣದ 5 ಸಂಸದರಲ್ಲಿ 1 (ಶೇ. 20) ಮತ್ತು ಮಧ್ಯಪ್ರದೇಶದ 11 ಸಂಸದರಲ್ಲಿ 2 (ಶೇ. 18) ಮಂದಿ 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. 225 ರಾಜ್ಯಸಭೆಯ ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ.
ತಂತ್ರಜ್ಞಾನ ಎಲ್ಲ ರಾಷ್ಟ್ರಗಳಿಗೆ ಸುಲಭವಾಗಿ ಲಭ್ಯವಾಗಬೇಕು. ಸಾರ್ವಜನಿಕ ಒಳಿತಿಗಾಗಿ ನಾವೀನ್ಯತೆಗಳನ್ನು ಬಳಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿ 20 ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯಲ್ಲಿ ಹೇಳಿದ್ದಾರೆ. ವಿಡಿಯೋ ಲಿಂಕ್ ಮೂಲಕ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಅವರು ಮಾತನಾಡಿದರು. ಮುಂದಿನ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು, ಸ್ಪಂದಿಸಲು ಎಲ್ಲರೂ ಸಿದ್ಧರಾಗಿರಿ ಎಂದು ಕರೆ ನೀಡಿದರು.
ಡಿಜಿಟಲ್ ಪರಿಹಾರಗಳು ಮತ್ತು ನಾವೀನ್ಯತೆಗಳು ಉಪಯುಕ್ತ ಸಾಧನಗಳಾಗಿವೆ. ಜಾಗತಿಕ ಆರೋಗ್ಯ ಕುರಿತಾದ ಉಪಕ್ರಮಗಳು ವಿವಿಧ ಡಿಜಿಟಲ್ ಮಾಧ್ಯಮ ಮೂಲಕ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಸಾರ್ವಜನಿಕ ಒಳಿತಿಗಾಗಿ ನಮ್ಮ ಆವಿಷ್ಕಾರಗಳನ್ನು ಮುಕ್ತಗೊಳಿಸೋಣ. ತಂತ್ರಜ್ಞಾನದ ಸಮಾನ ಲಭ್ಯತೆಯನ್ನು ಸುಗಮಗೊಳಿಸೋಣ. ಈ ಉಪಕ್ರಮವು ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೇವಾ ಲಭ್ಯತೆ ಅಂತರವನ್ನು ಕಡಿಮೆ ಮಾಡುತ್ತದೆ. ಜನರ ಸಹಭಾಗಿತ್ವದ ಸಹಾಯದಿಂದ ಭಾರತವು ಕ್ಷಯರೋಗವನ್ನು (ಟಿಬಿ) ನಿಮೂಲನೆ ಮಾಡುತ್ತಿದೆ. ನಾವು ದೇಶದ ಜನರಿಗೆ ಟಿಬಿ ನಿಮೂಲನೆಗಾಗಿ ನಿ-ಕ್ಷಯ ಮಿತ್ರ ನೀಡಿದ್ದೇವೆ. ಇದರ ಅಡಿಯಲ್ಲಿ ಸುಮಾರು 10 ಲಕ್ಷ ರೋಗಿಗಳನ್ನು ನಾಗರಿಕರು ದತ್ತು ಪಡೆದಿದ್ದಾರೆ. ಈಗ ನಾವು ಟಿಬಿ ನಿಮೂಲನೆ ಹಾದಿಯಲ್ಲಿದ್ದೇವೆ ಎಂದರು.
ಲಖನೌ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಶುಕ್ರವಾರ ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಯಸಿದರೆ ವಾರಾಣಸಿ ಅಥವಾ ಬೇರೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದಿದ್ದಾರೆ. ರಾಹುಲ್ ಗಾಂಧಿ ಅವರು ಖಂಡಿತವಾಗಿಯೂ ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ. ಇಲ್ಲಿನ ಜನರು ಅವರ ಜತೆಗಿದ್ದಾರೆ ಎಂದು ಮಾಧ್ಯಮದವರಿಗೆ ಅವರು ತಿಳಿಸಿದರು. 2004ರಿಂದ ಅಮೇಠಿ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಸ್ಮೃ ಇರಾನಿ ಸೋಲಿಸಿದ್ದರು. ಅಮೇಠಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿತ್ತು.
ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ: ವಿಚ್ಛೇದನ ಘೋಷಿಸಿದ ಕಿರಿಕ್ ಕೀರ್ತಿ

ಇಲ್ಲಿನ ಹಾಸ್ಟೆಲ್​-ಪಿಜಿ ಸೀಲಿಂಗ್ ಫ್ಯಾನ್​ಗಳಿಗೆ ಸ್ಪ್ರಿಂಗ್ ಅಳವಡಿಕೆ!; ವಿದ್ಯಾರ್ಥಿಗಳ ಜೀವ ಉಳಿಸಲು ವಿನೂತನ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 3 =
Remember me
