ಮುಂಬೈ:ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ‘ಭಿಕ್ಷೆ’ಯಂತೆ ಬಂದಿತ್ತು… 2014 ರಲ್ಲಿ ಮೋದಿಯಿಂದಾಗಿ ನಿಜವಾದ ಸ್ವಾತಂತ್ರ್ಯ ಬಂತು ಎಂಬ ಹೇಳಿಕೆಯಿಂದಾಗಿ ಬಾಲಿವುಡ್​​ ನಟಿ ಕಂಗನಾ ರಣಾವತ್​ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ ಆಗುತ್ತಿದ್ದಾರೆ. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು ಮತ್ತಷ್ಟು ವಿವಾದಾತ್ಮಕ ಪೋಸ್ಟ್​ಗಳನ್ನೂ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ ಎನ್ನಲಾಗಿದೆ.
ಕಂಗನಾ ಹೇಳಿಕೆಗೆ ಕುಪಿತಗೊಂಡ ಕೆಲವು ನೆಟ್ಟಿಗರು ಅವರಿಗೆ ಪ್ರದಾನಿಸಲಾದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ಪಡೆಯಬೇಕು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಕಾಂಗ್ರೆಸ್​ಅನ್ನು ಭಿಕ್ಷುಕರು ಎಂದು ಕರೆದಿರುವುದು ನಾನೊಬ್ಬಳೇ ಅಲ್ಲ ಎಂದು ಹಳೆಯ ಪುಸ್ತಕವೊಂದರ ಪುಟವನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕರಾದ ಬಾಲ್​ ಗಂಗಾಧರ ತಿಲಕ್ ಮತ್ತು ಅರಬಿಂದೋ ಘೋಷ್​ ಅವರ ‘ಐಎನ್​ಸಿ ಭಿಕ್ಷೆ ಬೇಡುವ ಪ್ರವೃತ್ತಿ ಬಿಡಬೇಕು’ ಎಂಬ ಹೇಳಿಕೆ ಮುದ್ರಿತವಾಗಿವೆ.
ಇದನ್ನೂ ಓದಿ:ರಫೇಲ್ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ: ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆಗ್ರಹ
“ನನ್ನ ಸಂದರ್ಶನದಲ್ಲಿ ವಿವರವಾಗಿ ಮಾತಾಡಿದ್ದೇನೆ. 1857 ರ ಮೊದಲ ಸ್ವಾತಂತ್ರ್ಯ ಹೋರಾಟ, ಸುಭಾಷ್​ ಚಂದ್ರ ಬೋಸ್​, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್​ ಸಾವರ್ಕರ್​ರಂಥವರ ತ್ಯಾಗಗಳ ಬಗ್ಗೆ ಹೇಳಿದ್ದೀನಿ” ಎಂದಿರುವ ಕಂಗನಾ, “1857ರದ್ದು ನನಗೆ ಗೊತ್ತು, ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂದು ಯಾರಾದರೂ ನನಗೆ ತಿಳಿಸಿದರೆ ನಾನು ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುತ್ತೇನೆ” ಎಂದಿದ್ದಾರೆ.
ಇನ್ನು 2014 ರಲ್ಲಿ ಸ್ವಾತಂತ್ರ್ಯ ಬಂತು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಂಗನಾ, ತಾವು ಸಂದರ್ಶನದಲ್ಲಿ ಹೇಳಿರುವುದನ್ನು ವಿವರಿಸುತ್ತಾ, “ಭೌತಿಕವಾಗಿ ನಮಗೆ ಮುಂಚೆಯೂ ಸ್ವಾತಂತ್ರ್ಯವಿದ್ದರೂ, ಭಾರತದ ಪ್ರಜ್ಞೆ ಆಗ ಸ್ವತಂತ್ರವಾಯಿತು…. ಇಂದು ಮೊದಲ ಬಾರಿಗೆ ಇಂಗ್ಲಿಷ್​ ಮಾತನಾಡದಿರುವುದಕ್ಕೆ ಅಥವಾ ಚಿಕ್ಕ ಊರಿಂದ ಬಂದಿರುವುದಕ್ಕೆ ಅಥವಾ ಮೇಡ್​ ಇನ್​ ಇಂಡಿಯಾ ವಸ್ತುಗಳನ್ನು ಉಪಯೋಗಿಸುವುದಕ್ಕೆ ನಮಗೆ ಅವಮಾನ ಮಾಡಲಾಗುವುದಿಲ್ಲ ಎಂದು ನಾನು ತಿಳಿಸಿದ್ದೇನೆ” ಎಂದು ಕಂಗನಾ ಸ್ಪಷ್ಟನೆ ನೀಡಿದ್ದಾರೆ.(ಏಜೆನ್ಸೀಸ್)
ಪರಿಹಾರದ ಹಣಕ್ಕಾಗಿ ಕಲಹ: ಪಾಲು ಕೊಡದ ಬಾಮೈದನ ಇರಿದು ಕೊಂದರು
ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡಲು ಸಾಧ್ಯವೇ ಇಲ್ಲ ಎಂದ ಬಿಜೆಪಿ ನಾಯಕ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + thirteen =
Remember me
