ನವದೆಹಲಿ:ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಹೋಗಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು, ಅಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್​ ವೈ ಫೆಂಗಿ ಅವರನ್ನು ಭೇಟಿಯಾಗಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ರಾಜನಾಥ್​ ಸಿಂಗ್​ ಅವರು ಚೀನಾ ಅಂತಾರಾಷ್ಟ್ರೀಯ ಗಡಿಯಲ್ಲಿ ಶಿಸ್ತು ಪಾಲನೆ ಮಾಡಬೇಕು. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾವಣೆ ಮಾಡಲು ಮುಂದಾಗಬಾರದು ಎಂದೂ ಖಡಕ್​ ಆಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಷ್ಟೆಲ್ಲ ಆದಮೇಲೆ ಕೂಡ ಚೀನಾ ಯುದ್ಧದ ಬಗ್ಗೆ ಮಾತನಾಡುತ್ತಿದೆ. ಒಂದೊಮ್ಮೆ ಯುದ್ಧ ಶುರುವಾದರೆ ಭಾರತಕ್ಕೆ ಗೆಲ್ಲುವ ಅವಕಾಶವೇ ಇಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವಿಶ್ಲೇಷಿಸಿದೆ.ಇದನ್ನೂ ಓದಿ:ವೈದ್ಯ ವೃತ್ತಿ ಬಿಟ್ಟು ಆಟೋ ಚಾಲಕರಾದ್ರು​: ಐಎಎಸ್​ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ!
ಚೀನಾದ ರಾಷ್ಟ್ರೀಯತೆಯ ಶಕ್ತಿ, ಸೇನಾ ಶಕ್ತಿಗಳು ಭಾರತಕ್ಕಿಂತ ಪ್ರಬಲವಾಗಿವೆ ಎಂಬುದನ್ನು ನಾವು ಮತ್ತೊಮ್ಮೆ ನೆನಪಿಸಲು ಬಯಸುತ್ತೇವೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮಹಾನ್​ ಶಕ್ತಿಗಳೇ ಆಗಿದ್ದರೂ ಕೂಡ, ಯುದ್ಧ ಎಂದು ಕೊನೆಯ ಸ್ಪರ್ಧೆಗೆ ಬಂದಾಗ ಭಾರತ ಖಂಡಿತ ಸೋಲುತ್ತದೆ. ಒಂದೊಮ್ಮೆ ಗಡಿಯುದ್ಧ ಶುರುವಾದರೆ ಭಾರತ ಗೆಲ್ಲಲು ಅವಕಾಶವೇ ಇಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ, ಪ್ರಮುಖ ಮಾಧ್ಯಮ ಗ್ಲೋಬಲ್​ ಟೈಮ್ಸ್​ ತನ್ನ ಸಂಪಾದಕೀಯದಲ್ಲಿ ಬರೆಯಲಾಗಿದೆ.
ರಷ್ಯಾದಲ್ಲಿ ಎರಡೂ ದೇಶಗಳ ರಕ್ಷಣಾ ಮಂತ್ರಿಗಳೂ ಭೇಟಿಯಾಗಿ 2 ತಾಸಿಗೂ ಅಧಿಕ ಕಾಲ ಚರ್ಚೆ ನಡೆಸಿರುವುದು ಉಭಯ ದೇಶಗಳ ಪಾಲಿಗೆ ಮಹತ್ವದ ತಿರುವು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ದೇಶಗಳೂ ಪ್ರಯತ್ನ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್​)
ಮೃತ ನಟ ಸುಶಾಂತ್​ ಸಿಂಗ್​ ರಜಪೂತ್​ ಮನೆಯ ಕೆಲಸದವನು ಅರೆಸ್ಟ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
