ನವದೆಹಲಿ:ನಮ್ಮಿಂದ ಕೋವಿಡ್​ ಅನ್ನು ಸೋಲಿಸಲು ಸಾಧ್ಯವಾದರೆ, ಯುದ್ಧದಿಂದ ಉಂಟಾಗಿರುವ ನಂಬಿಕೆಯ ಕೊರತೆಯನ್ನು ಗೆಲ್ಲಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ನೀಡಲಾಯಿತು. ಇನ್ನು ಮುಂದೆ ಜಿ20 ಬದಲು ಜಿ21 ಆಗಲಿದೆ.
ಇಂದಿನಿಂದ ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಎರಡು ದಿನಗಳ ಜಿ20 ಶೃಂಗ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಸ್ವಾಗತ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಅವರ ಸ್ಥಾನದ ಮುಂದೆ ಇಂಡಿಯಾ ಹೆಸರಿನ ಬದಲು ಭಾರತ ಹೆಸರಿನ ನಾಮಫಲಕ ವಿಶೇಷ ಗಮನ ಸೆಳೆಯಿತು.
ಜಿ20 ಸಭೆ ಉದ್ದೇಶಿತ ಪ್ರಧಾನಿ ನರೇಂದ್ರ ಮೋದಿಯವರ ಉದ್ಘಾಟನಾ ಭಾಷಣದ ಪ್ರಮುಖ ಉಲ್ಲೇಖಗಳು ಈ ಕೆಳಕಂಡಂತಿವೆ.
* ಈ ದುಃಖದ ಸಮಯದಲ್ಲಿ ಇಡೀ ಜಗತ್ತು ಮೊರಾಕೊ ಜೊತೆಗಿದೆ. ನಾವು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧರಿದ್ದೇವೆ ಎಂದು ಆಫ್ರಿಕನ್ ರಾಷ್ಟ್ರದ ಭೂಕಂಪದ ಕುರಿತು ಪ್ರಧಾನಿ ಮೋದಿ ಹೇಳಿದರು. ಶುಕ್ರವಾರ (ಸೆ.8) ತಡರಾತ್ರಿ ಮೊರಾಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ.
* ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ ಮತ್ತು ಯುದ್ಧವು ಅದನ್ನು ಮತ್ತಷ್ಟು ಆಳಗೊಳಿಸಿದೆ ಎನ್ನವ ಮೂಲಕ ಯೂಕ್ರೇನ್​ ಮತ್ತು ರಷ್ಯಾ ಯುದ್ಧದ ಪರಿಣಾಮವನ್ನು ತಿಳಿಸಿದರು. ಅಲ್ಲದೆ, ಇಡೀ ಜಗತ್ತು ಕೋವಿಡ್​ ಅನ್ನು ಸೋಲಿಸಲು ಸಾಧ್ಯವಾದರೆ, ಯುದ್ಧದಿಂದ ಉಂಟಾಗಿರುವ ನಂಬಿಕೆಯ ಕೊರತೆಯನ್ನು ಗೆಲ್ಲಲು ಸಾಧ್ಯ ಎಂದರು.
* ಹಳೆಯ ಸಮಸ್ಯೆಗಳು ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸುವ ಅಗತ್ಯವಿದೆ. ಭಾರತದ G20 ಪ್ರೆಸಿಡೆನ್ಸಿಯು ಒಳಗೊಳ್ಳುವ ಸಂಕೇತವಾಗಿದೆ. ದೇಶದ ಒಳಗೆ ಮತ್ತು ಹೊರಗೆ ‘ಸಬ್ಕಾ ಸಾಥ್’ ಎಂಬ ಸಂದೇಶವಾಗಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಾಯಸ್’ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು ಎಂದರು.
* ಜಿ 20 ಅಧ್ಯಕ್ಷನಾಗಿ ಭಾರತವು ನಂಬಿಕೆ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಇಡೀ ಜಗತ್ತಿಗೆ ಮನವಿ ಮಾಡುತ್ತದೆ. ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು ಎಂದು ಕರೆ ನೀಡುವ ಮೂಲಕ ಯೂಕ್ರೇನ್​ ಮತ್ತು ರಷ್ಯಾ ನಾಯಕರಿಗೆ ಸಂದೇಶ ರವಾನಿಸಿದರು.
* ಆಫ್ರಿಕನ್ ಯೂನಿಯನ್ (AU) ಅನ್ನು ಶಾಶ್ವತ G20 ಸದಸ್ಯರನ್ನಾಗಿ ಮಾಡಲು ಭಾರತವು ಕೊಡುಗೆ ನೀಡುತ್ತದೆ. ಈ ಪ್ರಸ್ತಾವನೆಯನ್ನು ಎಲ್ಲ ಸದಸ್ಯರು ಒಪ್ಪುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಆಫ್ರಿಕನ್ ಯೂನಿಯನ್ ಅನ್ನು ಜಿ20 ಗೆ ಸೇರಲು ಆಹ್ವಾನಿಸುತ್ತೇನೆ ಎಂದು ಶೃಂಗಸಭೆಯಲ್ಲಿ ವಿಶ್ವ ನಾಯಕರ ಚಪ್ಪಾಳೆಗಳ ನಡುವೆ ಪ್ರಧಾನಿ ಮೋದಿ ಹೇಳಿದರು.
ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ರಿಷಿ ಸುನಕ್​, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಎಲ್ಲ ಗಣ್ಯರಿಗೆ ಸ್ವತಃ ಪ್ರಧಾನಿ ಮೋದಿ ಅವರು ಕೆಂಪು ಹಾಸಿನ ಸ್ವಾಗತ ಕೋರಿದರು.
ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್​ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದೆ.(ಏಜೆನ್ಸೀಸ್​)
ಜಿ-20 ಸಭೆಯ ನಾಮಫಲಕದಲ್ಲೂ ಇಂಡಿಯಾ ಬದಲು ಭಾರತ ಹೆಸರು ಪ್ರದರ್ಶನ

G20 Summit 2023:ಜಿ 20ನಲ್ಲಿ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿಗೆ ಕಾರಣವನ್ನು ಚೀನಾ ವಿವರಿಸಲಿ: ಅಮೆರಿಕದ ಅಧಿಕಾರಿ

ಮೊರಾಕೊದಲ್ಲಿ 6.8 ತೀವ್ರತೆಯ ಭೂಕಂಪ; 296 ಕ್ಕೂ ಹೆಚ್ಚು ಸಾವು, ನೂರಾರು ಜನರಿಗೆ ಗಾಯ, ಸಂತಾಪ ಸೂಚಿಸಿದ ಪಿಎಂ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
