ಪುದುಚೇರಿ:ಯುವ ಜನಾಂಗವು ಎನ್​ಡಿಎಗೆ ಮತ ಚಲಾಯಿಸಿದರೆ ನಮ್ಮ ಸರ್ಕಾರವು ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್​ ಷಾ ಹೇಳಿದರು.
ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿ ಪ್ರದೇಶ ಪುದುಚೇರಿ ಪ್ರವಾಸದಲ್ಲಿರುವ ಅಮಿತ್​ ಷಾ ಅವರು ಇಂದು ಕಾರೈಕಲ್​ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದ ಷಾ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಸಣ್ಣತನದ ರಾಜಕೀಯವನ್ನು ಪ್ರದರ್ಶಿಸಿತು ಎಂದು ಕಿಡಿಕಾರಿದರು.
ಇದನ್ನೂ ಓದಿರಿ:ದೊಡ್ಡದಾಗಿ ಬೆಳೆದಿದ್ದು ಕಟ್‌ ಮಾಡುವುದು ಅನಿವಾರ್ಯ… ಅಮಿತಾಭ್‌ ಟ್ವೀಟರ್‌ನಲ್ಲಿ ನಿಗೂಢ ಚಿಹ್ನೆ ‘!!!!! ?????’
ಮುಂದಿನ ಬಾರಿ ಪುದುಚೇರಿಯಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡಲಿದೆ. ಕೇವಲ ಪುದುಚೇರಿ ಮಾತ್ರವಲ್ಲ, ಇಡೀ ದೇಶದಲ್ಲಿ ಎನ್​ಡಿಎ ಬರಲಿದೆ. ಅನೇಕ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಏಕೆಂದರೆ ಅರ್ಹತೆಗೆ ಕಾಂಗ್ರೆಸ್​ನಲ್ಲಿ ಬೆಲೆ ಇಲ್ಲ ಎಂದರು.
ಕೇವಲ 30 ವಿಧಾನಸಭೆ ಸ್ಥಾನಗಳನ್ನು ಪುದುಚೇರಿ ಹೊಂದಿದೆ. ಏಪ್ರಿಲ್​ನಲ್ಲಿ ಕೇವಲ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಕೆಲವು ದಿನಗಳ ಹಿಂದಷ್ಟೇ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಹುಮತ ಕೊರತೆಯಿಂದ ಕುಸಿಯಿತು. ಸದ್ಯ ಪುದುಚೇರಿ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.(ಏಜೆನ್ಸೀಸ್​)
ಲಾಕ್​ಡೌನ್​ ವೇಳೆ ಸೀರಿಯಲ್​ ನೋಡಿ ಮಕ್ಕಳಿಗಾಗಿ ರಾಮಾಯಣ ಪುಸ್ತಕ ಬರೆದ 10ರ ಬಾಲಕ!

ಆನ್​ಲೈನ್​ ರಮ್ಮಿ ಆಟಕ್ಕೆ ಬ್ರೇಕ್​! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್​ಲೈನ್​ ಜೂಜಾಡುವಂತಿಲ್ಲ

ಸಿಗರೇಟ್ ಸೇದುವ ವಿಚಾರಕ್ಕೆ ರಿಯಾಲಿಟಿ ಶೋ ಸ್ಫರ್ಧಿಯ ಕಿರಿಕ್‌: ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + six =
Remember me
