ಪಾಟ್ನಾ:ಆಂಜನೇಯ ತನ್ನ ಎದೆಯನ್ನೇ ಬಗೆದು ಅಲ್ಲಿ ರಾಮನನ್ನು ತೋರಿಸಿ ಸ್ವಾಮಿನಿಷ್ಠೆ ಮೆರೆದಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಆಧುನಿಕ ಯುಗದಲ್ಲಿ ಒಬ್ಬ ಅಭಿನವ ಆಂಜನೇಯ ಹುಟ್ಟಿಕೊಂಡಿದ್ದಾನೆ. ಅದು ಮತ್ಯಾರೂ ಅಲ್ಲ, ಇತ್ತೀಚೆಗಷ್ಟೇ ಅಗಲಿದ ಎಲ್​ಜೆಪಿ ನಾಯಕ ರಾಮ್​ ವಿಲಾಸ್ ಪಾಸ್ವಾನ್​ ಅವರ ಪುತ್ರ ಚಿರಾಗ್ ಪಾಸ್ವಾನ್​.
ಬಿಹಾರ್ ಸಿಎಂ ನಿತೀಶ್​ ಕುಮಾರ್ ಅವರನ್ನು ಟೀಕಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ನಾಯಕರು ಚಿರಾಗ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾತ್ರವಲ್ಲ ತಮ್ಮ ಲೋಕಜನಶಕ್ತಿ ಪಕ್ಷದ ಅಭಿಯಾನದಲ್ಲಿ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಚಿರಾಗ್​ ತೀವ್ರ ವಿರೋಧವನ್ನು ಎದುರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚಿರಾಗ್​, ನನಗೆ ಪ್ರಧಾನಿ ಮೋದಿ ಅವರ ಫೋಟೋ ಬೇಕಾಗಿಲ್ಲ. ಅವರು ನನ್ನ ಹೃದಯದಲ್ಲೇ ಇದ್ದಾರೆ. ರಾಮನೆಡೆಗಿನ ಹನುಮನ ನಿಷ್ಠೆಯಂತೆ ನನ್ನದು. ನೀವು ನನ್ನ ಎದೆ ಬಗೆದು ನೋಡಿದರೆ ಅಲ್ಲಿ ನಿಮಗೆ ಮೋದಿ ಮಾತ್ರ ಕಾಣಿಸುತ್ತಾರೆ ಎಂಬುದಾಗಿ ಹೇಳಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
