ಬೆಂಗಳೂರು:ಕರ್ನಾಟಕದ ಪ್ರಖ್ಯಾತ ಸಿಹಿಖಾದ್ಯ ಮೈಸೂರುಪಾಕ್​ ಅನ್ನು ತಿಂದರೆ ಕ್ಷಣದಲ್ಲೇ ಕರೊನಾ ಸೋಂಕು ಗುಣವಾಗುತ್ತಂತೆ!ಹೀಗೆಂದು ಹೇಳಿದ್ದು ವೈದ್ಯರಲ್ಲ. ಈ ಬಗ್ಗೆ ಯಾವುದೇ ಕ್ಲಿನಿಕಲ್​ ಟ್ರಯಲ್​ ಕೂಡ ನಡೆದಿಲ್ಲ. ಆದರೆ, ಹೀಗೆ ಹೇಳಿದವರು ಕರ್ನಾಟಕದವರಂತೂ ಅಲ್ಲವೇ ಅಲ್ಲ. ಮತ್ತೆ ಯಾರು? ಕೊಯಮತ್ತೂರಿನ ಚಿನ್ನಿಯಾಂಪಾಳ್ಯಂನ ಪ್ರಖ್ಯಾತ ಸಿಹಿತಿಂಡಿ ಮಾರಾಟ ಮಳಿಗೆಯ ಮಾಲೀಕರು ಹೀಗೆಂದು ಪ್ರಚಾರ ಮಾಡುತ್ತಿದ್ದಾರೆ.
ಚಿನ್ನಿಯಾಂಪಾಳ್ಯಂ ಮಳಿಗೆಯಲ್ಲಿ ಗಿಡಮೂಲಿಕೆಗಳನ್ನು ಬಳಸಿ ಮೈಸೂರುಪಾಕ್​ ಅನ್ನು ತಯಾರಿಸಲಾಗಿದೆ. ಇದನ್ನು ಚಿನ್ನಿಯಾಂಪಾಳ್ಯಂ ಮತ್ತು ವೆಲ್ಲಾಲೋರ್​ನಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದ್ದು, ಇದನ್ನು ತಿಂದವರಲ್ಲಿ ಕರೊನಾ ಸೋಂಕು ಗುಣವಾಗಿದೆ. ಕೋವಿಡ್​-19 ಸೋಂಕಿನ ಗುಣಲಕ್ಷಣ ಇರುವವರು ಮತ್ತು ಕರೊನಾ ಸೋಂಕಿತರಿಗೆ ಮೈಸೂರುಪಾಕ್​ ಅನ್ನು ಉಚಿತವಾಗಿ ಸರಬರಾಜು ಮಾಡುವುದಾಗಿ ಅಂಗಡಿಯ ಮಾಲೀಕ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಬಳ್ಳಾರಿಗೆ ಅಂತಾರಾಜ್ಯ ಪ್ರಯಾಣಿಕರ ಪ್ರವೇಶಕ್ಕೆ ನಿಷೇಧ
ಗಿಡಮೂಲಿಕೆಯ ಮೈಸೂರುಪಾಕ್​ ತಯಾರಿಸುವ ಸೂತ್ರವನ್ನು ತಾನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧ ಎಂದೂ ಹೇಳಿದ್ದರು. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇವರ ಹೇಳಿಕೆ ಸಹ್ಯವಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಅವರ ಈ ಹೇಳಿಕೆ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕರೊನಾ ವೈರಾಣು ಹರಡದಂತೆ ತಡೆಯಬೇಕು ಎಂದು ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವಂಥ ಇಂಥ ಪ್ರಕಟಣೆ ನೀಡಲಾಗಿದೆ. ಆದ್ದರಿಂದ ಆ ಅಂಗಡಿಯ ಮಾಲೀಕನ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ತಮಿಳುನಾಡಿನ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಜಿ. ರಮೇಶ್​ ಕುಮಾರ್​ ಹೇಳಿದ್ದಾರೆ.
Video: ಇಸ್ಲಮಾಬಾದ್​ನಲ್ಲಿ ದೇಗುಲ ನಿರ್ಮಿಸಿದರೆ ಹಿಂದುಗಳೆಲ್ಲರನ್ನೂ ಹತ್ಯೆ ಮಾಡುತ್ತಾನಂತೆ 4ರ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 8 =
Remember me
