ಮುಂಬೈ:ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಈಗಿನ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರಿಗೆ ಹೊಸ ಚಾಲೆಂಜ್​ವೊಂದನ್ನು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧೆಗಳಿದು, ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಡಳಿತ ಹಂಚಿಕೆಗೆ ಬೇಡಿಕೆಯಿಟ್ಟು, ಅದಕ್ಕೆ ಬಿಜೆಪಿ ಒಪ್ಪದೆ ಇದ್ದಿದ್ದಕ್ಕೆ ಶಿವಸೇನೆ ಮೈತ್ರಿಯನ್ನೇ ಮುರಿದುಕೊಂಡಿದ್ದು, ನಂತರ ಕಾಂಗ್ರೆಸ್​, ಎನ್​ಸಿಪಿ ಜತೆ ಸೇರಿ ಮಹಾವಿಕಾಸ ಅಘಾಡಿ ಸರ್ಕಾರ ರಚಿಸಿದ್ದು ಹಳೇ ಕತೆ.ಈಗ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಉದ್ಧವ್​ ಠಾಕ್ರೆಯವರ ಬಳಿ ಹೊಸದಾಗಿ ಜನರ ಆದೇಶ ಪಡೆಯುವಂತೆ ಸವಾಲು ಹಾಕಿದ್ದಾರೆ.
ಸಾಧ್ಯವಾದರೆ ನಮ್ಮ ಸರ್ಕಾರವನ್ನು ಉರುಳಿಸಿ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಆದರೆ ನಾವು ಯಾವುದೇ ಸರ್ಕಾರವನ್ನೂ ಕೆಡವಲು ಮುಂದಾಗುವುದಿಲ್ಲ. ಅಂತಹ ಕನಸು, ಆಸೆಗಳೂ ನಮಗಿಲ್ಲ. ಆದರೆ ಅದರ ಬದಲಿಗೆ ನಾನೂ ಒಂದು ಚಾಲೆಂಜ್​ ಮಾಡುತ್ತೇನೆ. ನಿಮಗೆ ತಾಕತ್ತಿದ್ದರೆ ಮತ್ತೊಮ್ಮೆ ಚುನಾವಣೆ ನಡೆಸಿ. ಹೊಸದಾಗಿ ಜನರ ಆದೇಶ ಪಡೆಯಿರಿ ಎಂದು ಫಡ್ನವೀಸ್​ ಹೇಳಿದ್ದಾರೆ. ಅಷ್ಟೇ ಅಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಕೂಟಕ್ಕೆ ಮಹಾರಾಷ್ಟ್ರ ಜನರು ಮತ ಹಾಕಿದ್ದಾರೆಯೇ ಎಂಬುದನ್ನು ಮೊದಲು ಪರಿಶೀಲನೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಮತ್ತೊಮ್ಮೆ ಚುನಾವಣೆಯಾಗಲಿ. ಕಾಂಗ್ರೆಸ್​-ಎನ್​ಸಿಪಿ- ಶಿವಸೇನಾ ಮೈತ್ರಿ ಮಾಡಿಕೊಂಡೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ. ಅವರ ವಿರುದ್ಧ ಬಿಜೆಪಿ ಏಕಾಂಗಿ ಹೋರಾಟ ಮಾಡಲು ಸಿದ್ಧವಿದೆ. ತಕ್ಕ ಉತ್ತರವನ್ನೂ ನೀಡಲಿದೆ ಎಂದಿದ್ದಾರೆ.
ಈಗೆರಡು ದಿನಗಳ ಹಿಂದೆ ಉದ್ಧವ್​ ಠಾಕ್ರೆಯವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡುತ್ತ, ನಾನು ಶಿವಸೇನೆಯ ಸಂಸ್ಥಾಪಕ ಬಾಳ್ ಠಾಕ್ರೆಯವರ ಪುತ್ರ. ನನ್ನ ತಂದೆ ಯಾವಾಗಲೂ ಸವಾಲುಗಳನ್ನು ಹಾಕುತ್ತಿದ್ದರು ಹಾಗೂ ಯಾರಾದರೂ ಸವಾಲು ಹಾಕಿದರೆ ಅದನ್ನು ಸ್ವೀಕರಿಸಿ ಗೆಲ್ಲುತ್ತಿದ್ದರು. ನಾನೂ ಕೂಡ ಅವರಂತೆಯೇ.ಬಿಜೆಪಿಗೆ ಹೇಗೂ ಆಪರೇಶನ್​ ಕಮಲ ಹೊಸದಲ್ಲ. ಈಗಲೂ ಅಷ್ಟೇ ಅದೇ ಪದ್ಧತಿಯಿಂದ ಸಾಧ್ಯವಾದರೆ ನಮ್ಮ ಸರ್ಕಾರವನ್ನು ಉರುಳಿಸಲಿ. ಇದು ನನ್ನ ಚಾಲೆಂಜ್​ ಎಂದು ಹೇಳಿದ್ದರು. ಅದಕ್ಕೆ ಫಡ್ನವೀಸ್​ ಮರು ಸವಾಲು ಹಾಕಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
