ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ಭಾರತೀಯ ಅರಣ್ಯ ಸೇವೆ (ಐಎಫ್​ಎಸ್) ನೇಮಕಾತಿ ಪರೀಕ್ಷೆ-2021ರ ಆವೃತ್ತಿಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶ್ರುತಿ ಮೊದಲ ಟಾಪರ್ ಆದರೆ, ಕರ್ನಾಟಕದ ವರದರಾಜ್ ಗಾಂವ್ಕರ್ ದೇಶಕ್ಕೇ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ 108 ಮಂದಿಯನ್ನು ಐಎಫ್​ಎಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದೆ. 110 ಸ್ಥಾನಗಳಿಗೆ ಒಟ್ಟು 108 ಮಂದಿಯನ್ನು ಯುಪಿಎಸ್​ಸಿ ಶಿಫಾರಸು ಮಾಡಿದೆ. ಈ ಪೈಕಿ ಸಾಮಾನ್ಯ ವರ್ಗದಲ್ಲಿ -30, ಆರ್ಥಿಕವಾಗಿ ಹಿಂದುಳಿದ ಮೀಸಲಾತಿಯಲ್ಲಿ -14, ಎಸ್ಸಿ-16, ಎಸ್ಟಿ -88, ಇತರ ಕೋಟಾದಡಿ 40 ಜನರನ್ನು ಆಯ್ಕೆ ಮಾಡಲಾಗಿದೆ.
3ನೇ ಪ್ರಯತ್ನದಲ್ಲಿ 2ನೇ ರ‌್ಯಾಂಕ್ ಪಡೆದಿದ್ದೇನೆ. ನಾನು ಉತ್ತರ ಕನ್ನಡದ ಗೋಕರ್ಣದ ಬಳಿ ಇರುವ ತೊರ್ಕೆ ಎನ್ನುವ ಹಳ್ಳಿಯವನಾದ್ದರಿಂದ ಅಲ್ಲಿನ ಪರಿಸರ ಮತ್ತು ಅರಣ್ಯವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಇದಕ್ಕೆ ನನ್ನ ಅಳಿಲುಸೇವೆ ಇರಬೇಕು ಎನ್ನುವ ಕಾರಣಕ್ಕೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ.
|ವರದರಾಜ್ ಗಾಂವ್ಕರ್2ನೇ ರ‌್ಯಾಂಕ್
ಬಳ್ಳಾರಿಯಲ್ಲಿ ಹುಟ್ಟಿ ಬೆಳೆದರೂ ಮೈಸೂರಿನಲ್ಲಿ ನೆಲೆಸಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ನಂತರ ಕರ್ನಾಟಕ ಪಬ್ಲಿಕ್ ಸರ್ವೀಸ್​ಗೆ ತಯಾರಿ ನಡೆಸಿದ್ದೆ. ಗಂಧದ ಗುಡಿ ಸಿನಿಮಾ ನೋಡಿಕೊಂಡು ಬೆಳೆದ ನನಗೆ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಆಸಕ್ತಿ ಮೂಡಿತ್ತು. ಮನೆಯವರೂ ನನ್ನ ಆಸೆಗೆ ಪ್ರೋತ್ಸಾಹ ನೀಡಿದರು.
|ಡಿ.ಕೆ.ಭರತ್ ಕುಮಾರ್88ನೇ ರ‌್ಯಾಂಕ್
ಎಲ್ಲರ ಮಾರ್ಗದರ್ಶನದೊಂದಿಗೆ ಕುಟುಂಬದವರ ಸಹಕಾರದಿಂದ ಐಎಫ್​ಎಸ್​ನಲ್ಲಿ ಆಯ್ಕೆಯಾದೆ. ಕೋಲಾರದ ಶ್ರೀನಿವಾಸಪುರದ ಕೃಷಿ ಕುಟುಂಬದವನಾದ ನಾನು ಅರಣ್ಯ ಸಂರಕ್ಷಣೆಗೆ ಸೇವೆ ನೀಡಬೇಕು ಎಂದು ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇನೆ.
|ಎಂ.ಜಿ. ವೆಂಕಟೇಶ್82ನೇ ರ‌್ಯಾಂಕ್
ಬಿಇ ಮಾಡಿ ಎಂಟೆಕ್ ಮಾಡಿದ್ದೇನೆ. ಎರಡು ವರ್ಷ ಕೆಲಸ ಮಾಡಿದ್ದೇನೆ. ನಂತರ ಕೆಲಸ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸಿದ್ದೆ. ಐಎಫ್​ಎಸ್ ಮೊದಲ ಪ್ರಯತ್ನವಾಗಿದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆ ಆಗಿರುವುದು ಹೆಚ್ಚಿನ ಸಂತಸ ತಂದಿದೆ. ತಂದೆ ತಾಯಿ ಇಬ್ಬರು ಸರ್ಕಾರಿ ನೌಕರರು.
|ಚೇತನ್​ಕುಮಾರ್49 ನೇ ರ‌್ಯಾಂಕ್
ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಒಂದು ವರ್ಷ ಕೆಲಸ ಮಾಡಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದೆ. ಮೊದಲು ಈ ಪರೀಕ್ಷೆಗೆ ನಮ್ಮ ಎತ್ತರವನ್ನೂ ಪರಿಗಣಿಸುತ್ತಿದ್ದರು. ಅದನ್ನು ಇತ್ತೀಚೆಗೆ ಆಯ್ಕೆಪಟ್ಟಿಯಿಂದ ಕೈಬಿಟ್ಟರು. ನಂತರ ಪರೀಕ್ಷೆ ಎದುರಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದೇನೆ.
|ಎಸ್. ನವೀನ್​ಕುಮಾರ್62ನೇ ರ‌್ಯಾಂಕ್, ಉತ್ತರಕನ್ನಡ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
