ನವದೆಹಲಿ:ಐಎಫ್​ಎಸ್​ ಅಧಿಕಾರಿಯೊಬ್ಬರ ಪರಿಸರ ಪ್ರೇಮ ಈಗ ನೆಟ್ಟಿಗರ ಮನಸೂರೆಗೊಂಡಿದೆ….!
ಇನ್ನು ಮುಂದೆ ನನ್ನ ಕಚೇರಿಗೆ ಭೇಟಿ ನೀಡುವ ವ್ಯಕ್ತಿಗಳಿಗೆ ಈ ಕಾರ್ಡ್​ ಸಿಗಲಿದೆ ಎಂದು ಟ್ವೀಟರ್​ನಲ್ಲಿ ವಿಸಿಟಿಂಗ್​ ಕಾರ್ಡ್​ನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ ಐಎಫ್​ಎಸ್​ ಅಧಿಕಾರಿ ಪರ್​ವೀನ್​ ಕೇಸ್ವಾನ್​.
ಸಂಪರ್ಕ ವಿವರಗಳನ್ನು ನೀಡುವುದಷ್ಟೇ ಇದರ ಈ ಕಾರ್ಡ್​ ಉದ್ದೇಶವಲ್ಲ, ಬದಲಿಗೆ ಇದು ಪರಿಸರ ಪ್ರೇಮವನ್ನು ಮೂಡಿಸುತ್ತದೆ. ಇದನ್ನು ನೆಟ್ಟರೆ ತುಳಸಿ ಗಿಡ ಬೆಳೆಯುತ್ತದೆ ಎಂದು ಕಾರ್ಡ್​ ಮೇಲೆ ಮುದ್ರಿಸಲಾಗಿದೆ. ಹೀಗಾಗಿಇದು ಅನೇಕರಿಗೆ ಸ್ಪೂರ್ತಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ;ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?
ವಿಸಿಟಿಂಗ್​ ಕಾರ್ಡ್​ ಮಾತ್ರವಲ್ಲದೇ, ವಿವಿಧ ಆಮಂತ್ರಣ ಪತ್ರಿಕೆಗಳು, ಮದುವೆ ಕಾರ್ಡ್​ಗಳು, ಬಟ್ಟೆ ಹಾಗೂ ಇತರ ವಸ್ತುಗಳ ಮೇಲೆ ಕಟ್ಟಲಾಗುವ ಬೆಲೆ ಚೀಟಿಗಳನ್ನು ಇದೇ ಮಾದರಿಯಲ್ಲಿ ಪರಿಸರಸ್ನೇಹಿಯಾಗಿಸಬಹುದು ಎಂದು ಅವರು ವಿವರ ನೀಡಿದ್ದಾರೆ.
ತುಳಸಿ ಮಾತ್ರವಲ್ಲದೇ, ವಿವಿಧ ಸಸ್ಯ, ಹೂಗಿಡಗಳ ಬೀಜಗಳನ್ನು ಇಂಥ ಕಾರ್ಡಗಳಲ್ಲಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಐಡಿಯಾಗೆ ಅನೇಕರು ಮಾರು ಹೋಗಿ ತಾವು ಫಾಲೋ ಮಾಡೋದಾಗಿ ಹೇಳಿದ್ದಾರೆ.
So now anybody coming to my office is getting this. This card when planted grows into a bright basal plant. Thanks@WildLense_India.pic.twitter.com/xL9xgPCbbF
— Parveen Kaswan, IFS (@ParveenKaswan)September 1, 2020

ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eighteen =
Remember me
