ನವದೆಹಲಿ:ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿಗೆ ಪ್ರವೇಶಿಸಲು ಸ್ವತಂತ್ರರು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂಕೋರ್ಟ್​ಗೆ ತಿಳಿಸಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಿದ ಮಂಡಳಿ, ಇಸ್ಲಾಂ ಧರ್ಮ ಮಹಿಳೆಯನ್ನು ಮಸೀದಿ ಪ್ರವೇಶಿಸಲು ತಡೆಯುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಫತ್ವಾಗಳನ್ನು ಬಿಟ್ಟುಬಿಡಿ. ಆದರೆ ಪುರುಷರಂತೆ ಮಹಿಳೆಯರು ಶುಕ್ರವಾರ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಒತ್ತಿ ಹೇಳಿದೆ.
ಮಹಾರಾಷ್ಟ್ರ ಮೂಲದ ದಂಪತಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್​ನ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಅರ್ಜಿಯಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಯನ್ನು ಪ್ರವೇಶಿಸಬೇಕೇ ಬೇಡವೇ ಎಂದು ನಿರ್ಣಯಿಸಲು ಕೇಳಿ ಕೊಳ್ಳಲಾಗಿತ್ತು. ಜತೆಗೆ ಇದು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದಂತೆ. ಅಲ್ಲದೆ, ಇದು ಮೂಲ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದು ಹೇಳಲಾಗಿತ್ತು.
ಜಮಾತ್​ ಎ ಇಸ್ಲಾಮಿ ಮತ್ತು ಮುಜಾಹಿದ್​ ಪಂಗಡಗಳು ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತವೆ. ಆದರೆ ಅದೂ ಬೇರೆ ಬೇರೆ ದ್ವಾರಗಳ ಮೂಲಕ ಪ್ರವೇಶಿಸುವ ನಿರ್ಬಂಧವಿದೆ ಎಂದು ಅರ್ಜಿಯಲ್ಲಿ ಅಪಾದಿಸಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
