ಶಿಲ್ಲಾಂಗ್​:ಮೇಘಾಲಯದ ಶಿಲ್ಲಾಂಗ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ತನ್ನ 14ನೇ ವಾರ್ಷಿಕ ಘಟಿಕೋತ್ಸವವನ್ನು ಏಪ್ರಿಲ್ 2ರಂದು ಆಯೋಜಿಸಿತು. ಕೇಂದ್ರ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ವಿಶೇಷ ಸಮಾರಂಭದಲ್ಲಿ ಐವರು ಡಾಕ್ಟರೇಟ್​ ವಿದ್ಯಾರ್ಥಿಗಳಿಗೆ ಪಿಎಚ್​ಡಿ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ, 2021-23 ಸಾಲಿನ ಪಿಜಿಪಿ (PGP) ಬ್ಯಾಚ್​ನ 236 ವಿದ್ಯಾರ್ಥಿಗಳು (2 ವರ್ಷಗಳ ಪೂರ್ಣಾವಧಿಯ ವಸತಿ ಕಾರ್ಯಕ್ರಮ), 2022-23ರ ಪಿಜಿಪಿಇಎಕ್ಷ್​ (PGPEX) ಬ್ಯಾಚ್‌ನಿಂದ 43 ವಿದ್ಯಾರ್ಥಿಗಳು (1 ವರ್ಷದ ಪೂರ್ಣಾವಧಿಯ ವಸತಿ ಕಾರ್ಯಕ್ರಮ), 2020-22ರ ಪಿಜಿಪಿಡಬ್ಲ್ಯುಇ (PGPWE) ಬ್ಯಾಚ್​ನ 16 ವಿದ್ಯಾರ್ಥಿಗಳು ಮತ್ತು ಪಿಜಿಪಿಡಬ್ಲ್ಯುಇ (PGPWE) 2021-23ನೇ ಸಾಲಿನ 47 ವಿದ್ಯಾರ್ಥಿಗಳಿಗೆ ಎಂಬಿಎ ಪದವಿಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.

ಸಕಾರಾತ್ಮಕ ಪ್ರಭಾವ ಬೀರಲು ಕಲಿಕೆ ಬಳಸಿಕೊಳ್ಳಿಘಟಿಕೋತ್ಸವವನ್ನು ಉದ್ದೇಶಿಸಿ ಐಐಎಂ ಶಿಲ್ಲಾಂಗ್​ನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಶಿಶಿರ್ ಕುಮಾರ್ ಬಜೋರಿಯಾ ಮಾತನಾಡಿದರು. ವಿದ್ಯಾರ್ಥಿಗಳ ಸಾಧನೆಗಳನ್ನು ಅಭಿನಂದಿಸಿದ ಬಜೋರಿಯಾ, ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಐಐಎಂ ಶಿಲ್ಲಾಂಗ್‌ನಲ್ಲಿ ಕಲಿತದ್ದನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.
ಯುವ ದೇಶದ ಭಾಗವಾಗಿದ್ದೀರಿ1947 ರಿಂದ ಭಾರತವು ಈವರೆಗೆ 950 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಸ್ವೀಕರಿಸಿದೆ, ಅದರಲ್ಲಿ 532 ಬಿಲಿಯನ್ ಡಾಲರ್​ ಎಫ್​ಡಿಐ ಅನ್ನು ಕಳೆದ 3 ವರ್ಷಗಳಲ್ಲಿ ಭಾರತ ಪಡೆದಿದೆ. ಭಾರತದ ಬೆಳವಣಿಗೆ ತಳಮಟ್ಟದಿಂದ ಮೇಲಕ್ಕೆ ಏರುತ್ತಿದೆ. ಮೊದಲ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು 3.5 ಟ್ರಿಲಿಯನ್ ಡಾಲರ್ ಆಗಿತ್ತು. ಇದನ್ನು ಮುಟ್ಟಲು 67 ವರ್ಷಗಳನ್ನು ತೆಗೆದುಕೊಂಡಿತು. ಆದರೆ, 2ನೇ ಟ್ರಿಲಿಯನ್ ಮುಟ್ಟಲು ಕೇವಲ 8 ವರ್ಷ ಮತ್ತು 3ನೇ ಟ್ರಿಲಿಯನ್ ಡಾಲರ್​ ಮುಟ್ಟಲು ಕೇವಲ 5 ವರ್ಷಗಳನ್ನು ತೆಗೆದುಕೊಂಡಿತು. 2015 ರಲ್ಲಿ 10 ನೇ ಅತಿದೊಡ್ಡ ಆರ್ಥಿಕತೆಯಿಂದ ಭಾರತವು 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ರಷ್ಯಾ, ಇಟಲಿ, ಬ್ರೆಜಿಲ್, ಫ್ರಾನ್ಸ್ ಮತ್ತು ಯುಕೆಯನ್ನು ಹಿಂದಿಕ್ಕಿರುವ ಭಾರತ ಇದೀಗ ಜರ್ಮನಿಯನ್ನು ಹಿಂದಿಕ್ಕಿ 4ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದೆ. ಇದು ನವ ಭಾರತವಾಗಿದೆ. ನಮ್ಮ ಜಿಡಿಪಿಯ 65% ದೇಶೀಯ ಬೇಡಿಕೆಯಿಂದ ನಡೆಸಲ್ಪಟ್ಟಿದೆ. 1.4 ಶತಕೋಟಿ ಭಾರತೀಯ ಜನಸಂಖ್ಯೆಯಲ್ಲಿ ಸುಮಾರು 1 ಶತಕೋಟಿ ಯುವ ಭಾರತೀಯರು ಸರಾಸರಿ 29 ವರ್ಷ ವಯಸ್ಸಿನವರಾಗಿದ್ದಾರೆ. ಭಾರತವು ವಿಶ್ವದ ಅತ್ಯಂತ ಯುವ ದೇಶವಾಗಿದೆ ಮತ್ತು ಮುಂದಿನ 70 ವರ್ಷಗಳವರೆಗೆ ಹೀಗೆ ಮುಂದುವರಿಯಲಿದೆ. ಪ್ರಿಯ ವಿದ್ಯಾರ್ಥಿಗಳೇ, ನೀವು ಯುವ ಭಾರತೀಯರಾಗಿ ಅದರಲ್ಲಿ ಭಾಗವಹಿಸಲಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಶ್ರೀ ಶಿಶಿರ್ ಕುಮಾರ್ ಬಜೋರಿಯಾ ಹುರಿದುಂಬಿಸಿದರು.
ಈ ವಿಶೇಷ ಘಟಿಕೋತ್ಸವ ಸಮಾರಂಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಕೇಂದ್ರ ರಾಜ್ಯ ಸಚಿವ (MoS) ರಾಜೀವ್ ಚಂದ್ರಶೇಖರ್ ಅವರು ಮುಖ್ಯ ಅತಿಥಿಯಾಗಿ ಮತ್ತು ಪಹರಪುರ್ ಕೂಲಿಂಗ್ ಟವರ್ಸ್ ಲಿಮಿಟೆಡ್​ನ ಸಹ-ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಗೌರವ್ ಸ್ವರೂಪ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿದರು.
ಘಟಿಕೋತ್ಸವ ಉದ್ದೇಶಿಸಿ ರಾಜೀವ್​ ಚಂದ್ರಶೇಕರ್​ ಮಾತನಾಡುತ್ತಾ, ಶಿಲ್ಲಾಂಗ್​ ಐಐಎಂನ 14ನೇ ವಾರ್ಷಿಕ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ದೇಶದ ಬೆಳವಣಿಗೆಗೆ ಕೊಡುಗೆ ನೀಡುವುದರೊಂದಿಗೆ ಜಾಗತಿಕವಾಗಿ ಬೆಳೆಯುತ್ತಿರುವ ನಮ್ಮ ದೇಶವು ತುಂಬಾ ಅದೃಷ್ಟಶಾಲಿಯಾಗಿದೆ. ಚೀನಾ ಮತ್ತು ಯುಕೆಯಂತಹ ಅನೇಕ ದೇಶಗಳು ಆರ್ಥಿಕ ಹಿಂಜರಿತ ಮತ್ತು ಇತರ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಭಾರತವು ಜಾಗತಿಕ ನಾಯಕನಾಗಿ ಬೆಳೆಯುತ್ತಿದೆ ಮತ್ತು ಹೊರಹೊಮ್ಮುತ್ತಿದೆ. ಭಾರತವು ದಶಕದ ದೇಶ ಎಂದು ನಾನು ದೃಢವಾಗಿ ನಂಬುತ್ತೇನೆ ಮತ್ತು ಐಐಎಂ ಶಿಲ್ಲಾಂಗ್‌ನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ದೇಶದ ಪ್ರಗತಿಗೆ ಕೊಡುಗೆ ನೀಡಲು ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸದುಪಯೋಗಪಡಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಇದಲ್ಲದೆ, ನವ ಭಾರತವು ಯುವ ಭಾರತೀಯರಿಗೆ ತಮ್ಮ ಸ್ವಂತ ಶ್ರಮ ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ ಕನಸುಗಳನ್ನು ಮುಂದುವರಿಸಲು ಮತ್ತು ಗುರಿಗಳನ್ನು ಸಾಧಿಸಲು ಒಳ್ಳೊಳ್ಳೆ ಅವಕಾಶಗಳನ್ನು ನೀಡುತ್ತದೆ ಎಂದರು. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಉಜ್ವಲ ಭವಿಷ್ಯಕ್ಕಾಗಿ ಇದೇ ಸಂದರ್ಭದಲ್ಲಿ ಹಾರೈಸಿದರು.
ಗೌರವಾನ್ವಿತ ಅತಿಥಿಗಳಾದ ಗೌರವ್ ಸ್ವರೂಪ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಅವರ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.
ಐಐಎಂ ಶಿಲ್ಲಾಂಗ್‌ನ ನಿರ್ದೇಶಕ ಪ್ರೊ.ಡಿ.ಪಿ. ಗೋಯಲ್ ಅವರು ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಉದ್ಯಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಅವರು ಶ್ಲಾಘಿಸಿದರು.
ಘಟಿಕೋತ್ಸವ ಸಮಾರಂಭದ ವೇಳೆ 238 ವಿದ್ಯಾರ್ಥಿಗಳು ಕನ್ಸಲ್ಟಿಂಗ್ ಮತ್ತು ಸ್ಟ್ರಾಟಜಿ, ಫೈನಾನ್ಸ್, ಜನರಲ್ ಮ್ಯಾನೇಜ್ಮೆಂಟ್, ಹ್ಯೂಮನ್ ರಿಸೋರ್ಸಸ್ ಮತ್ತು ಆಪರೇಷನ್ಸ್, ಐಟಿ ಮತ್ತು ಅನಾಲಿಟಿಕ್ಸ್ ಮತ್ತು ಸೇಲ್ಸ್ ಅಂಡ್​ ಮಾರ್ಕೆಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 63 ನೇಮಕಾತಿದಾರರಿಂದ ಜಾಬ್​ ಆಫರ್​ ಪಡೆದರು.
ಐಐಎಂ ಶಿಲ್ಲಾಂಗ್​ ಕುರಿತುಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಲ್ಲಾಂಗ್ ಅನ್ನು 2007ರಲ್ಲಿ ಮೇಘಾಲಯ ರಾಜ್ಯದಲ್ಲಿ ಭಾರತ ಸರ್ಕಾರ ಸ್ಥಾಪಿಸಿತು. ಬೆಟ್ಟಗಳ ನಡುವೆ ನೆಲೆಗೊಂಡಿರುವ ಈ ಕ್ಯಾಂಪಸ್ ಪ್ರಶಾಂತವಾದ ವಾತಾವರಣವನ್ನು ಹೊಂದಿದೆ. ನಿಖರವಾಗಿ ರೂಪಿಸಲಾದ ಪಠ್ಯಕ್ರಮ ಮತ್ತು ಕೇಸ್-ಆಧಾರಿತ ಶಿಕ್ಷಣಶಾಸ್ತ್ರವು ವಿದ್ಯಾರ್ಥಿಗಳನ್ನು ಕಾರ್ಪೊರೇಟ್ ರಂಗಕ್ಕೆ ಪ್ರವೇಶಿಸುವ ಮೊದಲು ಎಲ್ಲ ಅಂಶಗಳಲ್ಲಿ ತಯಾರು ಮಾಡುವ ಗುರಿಯನ್ನು ಹೊಂದಿದೆ.
ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಧಾರಾಕಾರ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಚೆನ್ನಕೇಶವ ಸ್ವಾಮಿ ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶವಿಲ್ಲ: ಧಾರ್ಮಿಕ ದತ್ತಿ ಆಯುಕ್ತರ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
