ನವದೆಹಲಿ:ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್​​ವರ್ಕ್ (NIRF) 2023ರ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು ಇಂಡಿಯನ್​ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಅಗ್ರಸ್ಥಾನ ಪಡೆದಿದೆ.
ಐಐಟಿ ಮದ್ರಾಸ್ ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಟಾಪ್ 1 ಆಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc) ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಅಗ್ರ ಸ್ಥಾನದಲ್ಲಿದ್ದು, ದೆಹಲಿಯ ಜೆಎನ್​​ಯು (JNU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ.
ಇದನ್ನೂ ಓದಿ:VIDEO| ಉದ್ಯೋಗಿಗಳು ಹೊರ ಹೋಗದಂತೆ ಲಾಕ್​ ಮಾಡಿದ ಕಂಪನಿ; ನಂತರ ಕ್ಷಮೆ ಕೇಳಿದ್ಯಾಕೆ?
ಅತ್ಯುತ್ತಮ ಕಾಲೇಜುಗಳ ಪೈಕಿ ದೆಹಲಿಯ ವಿಶ್ವವಿದ್ಯಾಲಯ ವ್ಯಾಪ್ತಿಯ ಮಿರಾಂಡ ಹೌಸ್​ ಮೊದಲ ಸ್ಥಾನ ಪಡೆದರೆ, ಹಿಂದೂ ಕಾಲೇಜು ಹಾಗೂ ಚೆನೈನ ಪ್ರೆಸಿಡೆನ್ಸಿ ಕಾಲೇಜ್​ ನಂತರದ ಸ್ಥಾನದಲ್ಲಿದೆ. ಮ್ಯಾನೇಜ್​ಮೆಂಟ್​ ಕಾಲೇಜುಗಳ ಪೈಕಿ ಅಹಮದಾಬಾದಿನ ಇಂಡಿಯನ್​ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್​(IIM), ಮೊದಲ ಸ್ಥಾನ ಪಡೆದರೆ, IIM ಬೆಂಗಳೂರು ಹಾಗೂ ಕೋಜಿಕೋಡ್​ ನಂತರದ ಸ್ಥಾನದಲ್ಲಿವೆ.
ಫಾರ್ಮಸಿಯಲ್ಲಿ, ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಮೊದಲ ಸ್ಥಾನದಲ್ಲಿದೆ. ಜಾಮಿಯಾ ಹಮ್ದರ್ದ್ ಮತ್ತು ಬಿಟ್ಸ್ ಪಿಲಾನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಕಾನೂನು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ನ್ಯಾಷನಲ್​ ಲಾ ಸ್ಕೂಲ್​ ಆಫ್​ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ. ದೆಹಲಿಯ ನ್ಯಾಷನಲ್​ ಲಾ ಯೂನಿವರ್ಸಿಟಿ, ಹೈದರಾಬಾದಿನ NALSAR ವಿಶ್ವವಿದ್ಯಾಲಯ ನಂತರದ ಸ್ಥಾನದಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eight =
Remember me
