ರಮೇಶ್ ಮೈಸೂರು, ಬೆಂಗಳೂರುಶೈತ್ಯಾಗಾರದ ಅಗತ್ಯವಿಲ್ಲದೆ, ಸಹಜ ವಾತಾವರಣದಲ್ಲೂ ಶೇಖರಿಸಿಡಬಹುದಾದ, ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ವಿಜ್ಞಾನಿ ಗಳು ಸಂಶೋಧಿಸಿದ್ದಾರೆ. ಇದು ಹಾಲಿ ಇರುವ ಕೋವಿಡ್ ವೈರಾಣುಗಳು ಮಾತ್ರ
ವಲ್ಲದೆ, ಭವಿಷ್ಯ ದಲ್ಲಿನ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲುದು ಎಂದು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಿಂದಲೂ ಇಂಥದ್ದೊಂದು ಸಂಶೋಧನೆಯಲ್ಲಿ ಐಐಎಸ್​ಸಿಯ ಮಾಲಿಕ್ಯೂಲರ್ ಬಯೋಫಿಸಿಕ್ಸ್ ಘಟಕದ ಪ್ರಾಧ್ಯಾಪಕ ರಾಘವ ವರದರಾಜನ್ ತೊಡಗಿಕೊಂಡಿದ್ದರು. ಎನ್​ಪಿಜೆ ವ್ಯಾಕ್ಸಿನ್ ನಿಯತಕಾಲಿಕದಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ. ಕೋವಿಡ್ ಲಸಿಕೆಯಾಗಿ ಬಳಕೆಯಾಗಬಲ್ಲ ಕೃತಕ ಪ್ರತಿಜನಕ (ಸಿಂಥೆಟಿಕ್ ಆಂಟಿಜೆನ್) ರೂಪಿಸಿದ್ದು, ಇದು ಹಾಲಿ ಹಾಗೂ ಭವಿಷ್ಯದ ಕೋವಿಡ್ ರೂಪಾಂತರಿ ವೈರಸ್​ಗಳ ವಿರುದ್ಧ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲುದು. ಜತೆಗೆ, ಇದನ್ನು ಅತ್ಯಂತ ತ್ವರಿತವಾಗಿ ಅಳವಡಿಸಿಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲಭ್ಯವಿರುವ ಲಸಿಕೆಗಳು ಸಾರ್ಸ್- ಸಿಒವಿ-2 (ಕೋವಿಡ್-19) ವೈರಸ್ ವಿರುದ್ಧ ಮಾತ್ರವೇ ಪರಿಣಾಮಕಾರಿಯಾಗಿವೆ. ಜತೆಗೆ, ಈ ವೈರಸ್ ರೂಪಾಂತರ ಹೊಂದಿದಂತೆಲ್ಲ ಇವುಗಳ ಕಾರ್ಯ ದಕ್ಷತೆಯೂ ಕಡಿಮೆಯಾಗುತ್ತದೆ. ವಿವಿಧ ವೈರಸ್​ಗಳಲ್ಲಿ ಕಂಡುಬಂದ ಪ್ರೊಟೀನ್​ಗಳನ್ನು ಅಧ್ಯಯನ ಮಾಡಿದ ಬಳಿಕ ವಿಜ್ಞಾನಿಗಳು ಕೋವಿಡ್-19ನ ಎರಡು ಪ್ರೊಟೀನ್​ಗಳನ್ನು ಆಯ್ಕೆ ಮಾಡಿಕೊಂಡರು. ಎಸ್-2 ಸಬ್​ನಿಟ್ ಹಾಗೂ ರಿಸೆಪ್ಟರ್ ಬೈಂಡಿಂಗ್ ಡೋಮೇನ್ (ಆರ್​ಬಿಡಿ) ಎಂದು ಕರೆಯಲಾಗುವ ಪ್ರೊಟೀನ್ ಬಳಸಿ ಲಸಿಕೆ ಸಿದ್ಧಪಡಿಸಿದ್ದಾರೆ. ಎಸ್2 ಘಟಕವು ಎಸ್-1 ಘಟಕಕ್ಕಿಂತ ಕಡಿಮೆ ರೂಪಾಂತರಿಯಾಗಿದ್ದು, ಸದ್ಯದ ಎಲ್ಲ ಲಸಿಕೆಗಳು ಇದನ್ನೇ ಗುರಿಯಾಗಿಸಿಕೊಂಡಿವೆ. ಜತೆಗೆ, ಆರ್​ಬಿಡಿ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದರು. ಈ ಕಾರಣದಿಂದಾಗಿ ಇವೆರಡು ಅಂಶಗಳನ್ನು ಒಳಗೊಂಡ ಆರ್​ಎಸ್2 ಎಂಬ ಹೈಬ್ರಿಡ್ ಪ್ರೊಟೀನ್ ಸಿದ್ಧಪಡಿಸಿದ್ದಾರೆ.
ಆರಂಭದಲ್ಲಿ ಇವುಗಳನ್ನು ಸಸ್ತನಿಗಳ ಜೀವಕೋಶದ ಮೇಲೆ ಪ್ರಯೋಗಿಸಲಾಯಿತು. ಈ ಹೈಬ್ರಿಡ್ ಪ್ರೊಟೀನ್ ಹೆಚ್ಚಿನ ಪ್ರತಿಸ್ಪಂದನೆ ತೋರಿತು. ಪ್ರಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಆರಂಭದಲ್ಲಿ ಭಾವಿಸಿದ್ದಾಗಿ ಐಐಎಸ್​ಸಿಯ ಸಂಶೋಧನಾರ್ಥಿ ನಿಧಿ ಮಿತ್ತಲ್ ಹೇಳುತ್ತಾರೆ. ಈ ಪ್ರೊಟೀನ್​ನನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂಬುದು ಇದರಿಂದ ಗೊತ್ತಾಯಿತು ಎನ್ನುತ್ತಾರೆ.
ಸಸ್ತನಿಗಳ ಮೇಲೆ ಪ್ರಯೋಗ:ವಿಜ್ಞಾನಿಗಳು ಹೊಸದಾಗಿ ಸಂಶೋಧಿಸಿದ ಹೈಬ್ರಿಡ್ ಪ್ರೊಟೀನ್​ನನ್ನು ಇಲಿ ಹಾಗೂ ಹೆಗ್ಗಣಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಈ ವೇಳೆ ಹೆಚ್ಚಿನ ಪ್ರತಿರೋಧಕ ಶಕ್ತಿ ಹಾಗೂ ಉಳಿದ ಪ್ರೊಟೀನ್​ಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಂರಕ್ಷಣೆಯನ್ನು ನೀಡುತ್ತಿರುವುದು ಗೊತ್ತಾಗಿದೆ.
ಅತ್ಯಂತ ಮಿತವ್ಯಯ!:ಹೊಸ ಲಸಿಕೆಯ ವಿಶೇಷ ಗುಣವೆಂದರೆ ಇದನ್ನು ಸಾಮಾನ್ಯ ಕೊಠಡಿಯ ವಾತಾವರಣದಲ್ಲಿ ಒಂದು ತಿಂಗಳ ಕಾಲ ಶೇಖರಿಸಿ ಇಡಬಹುದು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗಳಿಗೆ ಶೈತ್ಯಾಗಾರದ ವ್ಯವಸ್ಥೆ ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ಈ ಲಸಿಕೆಗಳ ಸಾಗಾಟ ಹಾಗೂ ದಾಸ್ತಾನು ಅತ್ಯಂತ ಮಿತವ್ಯಯಕಾರಿಯಾಗಿರಲಿದೆ. ಐಐಎಸ್​ಸಿ ವಿಜ್ಞಾನಿಗಳ ತಂಡವು ಏಡ್ಸ್ ಹಾಗೂ ಇನ್​ಫ್ಲುಯೆಂಜಾ ಕಾಯಿಲೆಗೂ ಲಸಿಕೆ ತಯಾರಿಯಲ್ಲೂ ತೊಡಗಿಕೊಂಡಿದೆ. ಈ ಅನುಭವವನ್ನೇ ಹೊಸ ಲಸಿಕೆ ತಯಾರಿಯಲ್ಲೂ ಬಳಸಿಕೊಂಡಿದೆ.
ಕೋವಿಡ್-19 ಹೊಸ ರೂಪಾಂತರಿಗಳಿಗೆ ಅನುಗುಣವಾಗಿ ಈ ಲಸಿಕೆಯನ್ನು ಸಿದ್ಧಪಡಿಸಬಹುದು. ಜತೆಗೆ, ಹೆಚ್ಚಿನ ಪ್ರತಿಸ್ಪಂದನೆ ಹಾಗೂ ಕೊಠಡಿ ತಾಪಮಾನವನ್ನು ತಾಳಿಕೊಳ್ಳಬಲ್ಲ ಗುಣದಿಂದಾಗಿ ಉತ್ಪಾದನೆ ಹಾಗೂ ಸಾಗಾಟದ ವೆಚ್ಚದಲ್ಲಿ ಭಾರಿ ಉಳಿತಾಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
